ಭಾಷಾ ಆಯಾಮದಲ್ಲಿ “Consumer Protection Act”

ಸಂಕ್ರಮಣದ ಹಾದಿಯಲ್ಲಿ ನಿಲುಮೆ…
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು… ”
ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು :ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !
-ರವಿ ಮೂರ್ನಾಡು
ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ ನನ್ನಲ್ಲಿತ್ತು. ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!
ಇಲ್ಲಿನ ಡ್ವಾಲಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2007 ರಲ್ಲಿ ಕಾಲಿಟ್ಟು ಪಾಸ್‍ಪೋರ್ಟಿಗೆ ಮುದ್ರೆಯೊತ್ತಿ ಲಗ್ಗೇಜು ವಿಲೇವಾರಿಗೆ ಬರುವಾಗಲೇ ಈರ್ವರು ಹಿಂದೆಯೇ ಬಂದರು. “ ನಾನು ಕಸ್ಟಂ ಅಧಿಕಾರಿ, ನಿಮ್ಮ ಬ್ಯಾಗ್ ಚೆಕ್ ಮಾಡಬೇಕು, ಸ್ವಲ್ಪ ಈ ಕಡೆ ಬನ್ನಿ” ಅಂದರು. ಅರೆ..! ಅಧಿಕಾರಿಯಾಗಿದ್ದರೆ ಮರೆಗೆ ಕರೆಯುವ ಆಲೋಚನೆ ಏನು ಅಂತ ಯೋಚಿಸಿದ್ದೆ. ಇಲ್ಲಿನ ಐದು ಸಾವಿರ ಕ್ಯಾಮರೂನ್ ಫ್ರಾಂಕ್ ಕೊಟ್ಟರೆ ತಕರಾರಿಲ್ಲ ಅಂದರು. ಅಲ್ಲಿಯೇ ನಮ್ಮ ಕಂಪೆನಿಯ ವಾರೀಸುದಾರರು ಮಧ್ಯೆ ಬಂದಿದ್ದರಿಂದ ಆ ಪೀಡನೆಯಿಂದ ಪಾರಾದೆ. ಅಮಾನುಷ ಕೃತ್ಯಗಳ ಹೆಣಗಳ ವಾಸನೆ ನನ್ನ ಮೂಗಿಗೆ ಆಗಲೇ ಬಡಿದಿದೆ. ಹಣ ಕೊಟ್ಟರೆ ಕಾನೂನುಗಳು ಇಲ್ಲಿ ನಮ್ಮ ಕೈಗೆ ಬರುತ್ತವೆ. ಹಾಗಂತ ಹಣಕ್ಕೆ ಬಾಯ್ಬಿಟ್ಟ ನಡೆದಾಡುವ ಹೆಣಗಳೇ ಇಲ್ಲಿನ ಮನುಷ್ಯರು. ಭಾರತದಲ್ಲಿ ಇಂತಹದ್ದು ಬೇಕಾದಷ್ಟು ನಡೆಯುತ್ತವೆ. ಅದನ್ನು ಪ್ರಶ್ನಿಸುವ ಜನರಿದ್ದಾರೆ ಅನ್ನುವ ಸಮಾಧಾನ. ಇಲ್ಲಿ ಕೇಳುವವರು, ಕೊಡುವವರು ಎಲ್ಲರೂ ಕಳ್ಳರೇ ಅಂದಾಗ ಸತ್ಯಕ್ಕೂ ಹಲ್ಲು ಕಿರಿಯಲು ನಾಚಿಕೆ…!