– ಅಮಿತ ರವಿಕಿರಣ
ಜಗತ್ತಿಗೆಲ್ಲ ಜನೆವರಿ ೧ ಹೊಸ ವರ್ಷದ ಆರಂಭ ಆದ್ರೆ..ನನಗೆ ಮಾತ್ರ ಜನೆವರಿ ೩ ಹೊಸ ವರ್ಷ ಅದ್ಯಾಕೆ ಅನ್ನೋ ಪ್ರಶ್ನೆ ಹುಟ್ಟೋ ಮೊದಲೇ ಉತ್ತರ ಹೇಳೋ ಕಾತರ ನನಗೆ…ಈ ದಿನವೇ ನನಗೆ ಜಗತ್ತಿನ ಅತ್ಯುನ್ನತ ಹುದ್ದೆ ಸಿಕ್ಕಿದ್ದು,ಹೊಸ ಬದುಕಿಗೆ ಹೊಸ ಜೀವನ ಶೈಲಿಗೆ ,ಹೊಸ ಪದವಿಗೆ ನನ್ನ ಪರಿಚಯ ಆದದ್ದು..ನಾ ಅಮ್ಮ ಎಂಬ ಟೈಟಲ್ ಪಡೆದಿದ್ದು…ಬದುಕಿನ ಪ್ರತಿ ಬದಲಾವಣೆಯನ್ನು ಮನಸ್ಪೂರ್ತಿ ಸ್ವಾಗತಿಸಿ ನೋವನ್ನು ಕೂಡ ಒಂದು ಖುಷಿಯಿಂದ ಅನುಭವಿಸುವ ನನಗೆ ಇದು ಅವರ್ಣನೀಯ ಅನುಭವ.ಆಸ್ಪತ್ರೆಗೆ ದಾಖಲಾಗಿ,ಹೊಟ್ಟೆನೋವ ಭರದಲ್ಲಿ ನನ್ನ ತಲೆಯಲ್ಲಿ ಅಚ್ಚಾಗಿದ್ದ ಅಷ್ಟು ಹಾಡುಗಳನ್ನು ಹಾಡಿ ಬರಿದು ಮಾಡಿ ಸಂಕಟದಲ್ಲೂ ಸಂತಸ ವನ್ನು ತುಂಬಿ ಕೊಟ್ಟ ರಾತ್ರಿಯದು…ಮುಂಜಾನೆ ಮೊದಲ ಪ್ರಹರಕ್ಕೆ ಪ್ರಥಮ್ ನನ್ನ ಪಕ್ಕ ದಲ್ಲಿ .ಹಾಯಾಗಿ ನಿದ್ರಿಸುತ್ತಿದ್ದ. ಇದೆಲ್ಲ ಮೊನ್ನೆ ಮೊನ್ನೆಯಂತಿದೆ ಅದಾಗಲೇ ಪ್ರಥಮನಿಗೆ ೫ ತುಂಬಿತು .ಕಳೆದ ನಾಲ್ಕು ವರ್ಷದ ಜನುಮದಿನದ ಆಚರಣೆಯನ್ನು ನಮಗಿಷ್ಟ ಬಂದಂತೆ ಆಚರಿಸಿದ್ದು ಆಯ್ತು. ಇಗ ಅವನು ತನ್ನ ಅನಿಸಿಕೆ ಇಚ್ಹೆ ವ್ಯಕ್ತ ಪಡಿಸಲು ಶುರು ಮಾಡಿದಾನೆ ಅದಕ್ಕೆ ಅವನನ್ನೇ ಕೇಳಿದೆ ಹೇಗೆ ಆಚರಿಸೋಣ ನಿನ್ನ ಬರ್ತ್ ಡೇ???ಯಾರನ್ನ ಕರಿಬೇಕು ??ನಿನಗೇನು ಗಿಫ್ಟ್ ಬೇಕು??
ಕೇಳೋದನ್ನೇ ಕಾಯುತ್ತಿದ್ದ ಅನಿಸುತ್ತೆ .”ಅಮ್ಮ ನನಗೆ ದೊಡ್ಡ ಕೇಕ್ ಬೇಕು” ಮಗ ಅವನ ಇಚ್ಛೆ ಹೇಳಿದ ಕೂಡಲೇ ನನಗ್ಯಾಕೋ ಅಂಗಡಿಯಿಂದ ತರುವ ಮನಸ್ಸಾಗಲಿಲ್ಲ ,ನಾನೇ ಯಾಕೆ ಕೇಕ್ ಮಾಡಬಾರದು ಅನ್ನೋ ಉಮೇದು ತಲೆಯನ್ನು ಹೊಕ್ಕಿ ಇಂಟರ್ನೆಟ್ ತುಂಬಾ ಕೇಕ್ ರೆಸಿಪಿ ತಡಕಾಡಿದೆ.೨-೩ ಪ್ರಯೋಗಗಳನ್ನು ಮಾಡಿದೆ ,ಓಕೆ ಈಗೊಂದಿಷ್ಟು ಕಾನ್ಫಿಡೆನ್ಸು ಬಂದಿತ್ತು ನಾನೂ ಕೇಕ್ ಮಾಡಬಲ್ಲೆ…
ಇವರಿಗ್ಯಾಕೋ ನನ್ನ ಮೇಲೆ ನಂಬಿಕೆ ಇಲ್ಲ ಬೇರೆ ಎಲ್ಲಾ ಸರಿ ನಾಲ್ಕು ಮಂದಿ ಬರೊವಾಗ ನಿನ್ನ ಪ್ರಯೋಗಪಶು ಅವರಾಗೋದು ಬೇಡ..ನೀ ಕೇಕ್ ಮಾಡು ಆದ್ರೆ ಅದನ್ನ ನಾವು ಮನೆಮಟ್ಟಿಗೆ ಕಟ್ ಮಾಡೋಣ ಬರ್ತ್ ಡೇ ಫಂಕ್ಷನ್ ಗೆ ಹೊರಗಿಂದ ನೇ ತಂದರಾಯಿತು.ಈಗ ಇದು ನನ್ನ ಮರ್ಯಾದೆ ಪ್ರಶ್ನೆ.೨ ನೇ ತಾರೀಖಿನ ಸಂಜೆ ನನ್ನ ಆಪರೇಶನ್ ಕೇಕ್ ಆರಂಭ ಆಯ್ತು ಇದು ಸರಿ ಆಗದಿದ್ದರೆ ಅವರು ಹೇಳಿದಂತೆ ಮರುದಿನ ಬೆಳಿಗ್ಗೆ ಹೋಗಿ ಕೇಕ್ ತಂದರಾಯಿತು ಅನ್ನೋ ಮುಂದಾಲೋಚನೆ ನನ್ನದು.. ಬ್ಲ್ಯಾಕ್ ಫಾರೆಸ್ಟ್ ಕೇಕ್ ,ಕೇಕ್ ನ ಬೇಸ್ ಸರಿ ಆಯಿತು ಅಂದ್ರೆ ಉಳಿದಿದ್ದೆಲ್ಲ ಕರಗತ .ಆ ಸಮಯದಲ್ಲಿ ನಾ ಹರಕೆ ಹೊತ್ತಷ್ಟು ಚವತಿ ಚಕ್ಕುಲಿ ಮಾಡುವಾಗ ಎದುರುಮನೆ ಆಯಿ ಕೂಡ ಹೊತ್ತಿರಲಾರರು .ಒವ್ವೆನ್ ನ ಟೈಮರ್ ನನ್ನು ದಿಟ್ಟಿಸಿದಷ್ಟು ಇವರ ಮುಖವನ್ನು ದಿಟ್ಟಿಸಿರಲಿಕ್ಕಿಲ್ಲ ನಾ .ಬೇಕಿಂಗ್ ಟ್ರೇಯಿಂದ ಕೇಕ್ ತೆಗೆಯುವಾಗ ಮತ್ತೊಮ್ಮೆ ೨೦೦೭ ರ ಜನವರಿ ೩ ನೆನಪಾಗಿತ್ತು .ಆಹಾ ಆದಷ್ಟು ಚನ್ನಾಗಿ ಬಂದಿತ್ತು ಪತಿದೇವ ಮಧ್ಯ ಮಧ್ಯ ಬಂದು ಹಾಗ ಮಾಡು ಹೀಗ್ ಮಾಡು ಅನ್ನೋ ಫ್ರೀ ಸಲಹೆ ಕೊಡುತ್ತಿದ್ದರು ಮತ್ತೆರಡು ಘಂಟೆಯಲ್ಲಿ ನನ್ನ ಡ್ರೀಮ್ , ಬ್ಲಾಕ್ ಫಾರೆಸ್ಟ್ ಕೇಕ್ ತಯಾರಾಗಿತ್ತು ,
Like this:
Like ಲೋಡ್ ಆಗುತ್ತಿದೆ...