ವಿಷಯದ ವಿವರಗಳಿಗೆ ದಾಟಿರಿ

Archive for

8
ಜನ

ಮನದ ಸುಕ್ಕು

 ಪವನ್ ಪಾರುಪತ್ತೇದಾರ
 ಸುಕ್ಕು ಶುರುವಾಗಿದೆ
ಹೊಳೆಯುವ ಮೊಗವೀಗ
ನಿಜ ಬಣ್ಣ ತೆರೆಯುತಿದೆ
ಸುಕ್ಕು ಶುರುವಾಗಿದೆ
ಚಂದನವ ಮೆಲ್ಲಗೆ ಮುಖವೆಲ್ಲ ಹಚ್ಚಿ
ನಿಂಬೆ ರಸದೊಂದಿಗೆ ನಯವಾಗಿ ತೊಳೆದು
ಅರೈಕೆಗಂತ್ಯವೇ ಇಲ್ಲದಂತಾದರು
ಮನದಮೇಲೆ ಸುಕ್ಕು ಶುರುವಾಗಿದೆ
 
ಅಪನಂಬಿಕೆಯ ಸುಕ್ಕು ಅಜ್ಞಾನದ ಸುಕ್ಕು
ಆಸೆಯ ಸುಕ್ಕು ನಿರಾಸೆಯ ಸುಕ್ಕು
ಮುಖದ ನರಗಳನು ಬಿಗಿ ಹಿಡಿದು
ಮನದ ಮೇಲೆ ಗೀಟುಗಳನು ಎಳೆದು
ಗೊತ್ತಿಲ್ಲದಂತೆ ಮೋಸ ಶುರು ಮಾಡಿದೆ
ಸುಕ್ಕು ಶುರುವಾಗಿದೆ
 
ಪ್ರತಿಯೊಂದು ತಪ್ಪಿಗು ಕಾರಣ ಹೇಳಿ
ಪ್ರತಿಯೊಂದು ಮಾತಿಗು ತೇಪೆಯ ಹಚ್ಚಿ
ತನ್ನ ತಾನೇ ಆಡಂಬರಿಸುವ ಆಸೆಯಲಿ
ಗೆಳೆಯರ ಬಳಗದ ಮೆಟ್ಟಿ ಮೇಲೇರುತ
ನನ್ನದೇ ಗೆಲುವೆಂದು ಗರ್ವವನು ತೋರುವ
ಸುಕ್ಕು ಶುರುವಾಗಿದೆ ಸುಕ್ಕು ಶುರುವಾಗಿದೆ
 
 ಪವನ್  ಪಾರುಪತ್ತೇದಾರ:-