ವಿಷಯದ ವಿವರಗಳಿಗೆ ದಾಟಿರಿ

Archive for

19
ಜನ

ಸ್ವಾಮಿ ವಿವೇಕಾನಂದರೊಳಗಿನ ’ಮನುಷ್ಯ’ ಮತ್ತು ಮನುಷ್ಯನೊಳಗಿನ ’ಅವಿವೇಕ’

– ರಾಕೇಶ್ ಶೆಟ್ಟಿ

ಓದು,ಅನುಭವ ಮತ್ತು ವಯಸ್ಸು,ಮನುಷ್ಯನನ್ನ ಮಾಗಿಸುತ್ತದೆ ಅನ್ನುತ್ತಾರೆ,ಆದರೆ ಕೆಲವರ ಪಾಲಿಗೆ ಓದು,ಅನುಭವದ ಜೊತೆಗೆ ವಯಸ್ಸು ಬಾಗಿಸುತ್ತದೆ ದೇಹ ಮತ್ತೆ ತಲೆ ಎರಡನ್ನೂ…! ಅಂತವರ ವಿಷಯ ಪಕ್ಕಕ್ಕಿರಲಿ….ವಿವೇಕಾನಂದರ ವಿಷಯಕ್ಕೆ ಬರೋಣ…

ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸ್ವಾಮಿ ವಿವೇಕಾನಂದರು ಜಪಾನ್ ಮೂಲಕ ಸಾಗುವಾಗ ಅಲ್ಲಿನ ನಗರ ವೀಕ್ಷಣೆಯ ನಂತರ ತಮ್ಮ ಮದರಾಸಿ ಶಿಷ್ಯರಿಗೆ ಬರೆದ ಪತ್ರದ ಸಾಲುಗಳಿವು.ಈ ಪತ್ರದ ಕೆಲವು ಸಾಲುಗಳು ಇಂದಿಗೂ ನಮ್ಮ ನಡುವಿನ ತಲೆ ಕೆಟ್ಟ ಸಮಸ್ಯೆಗಳ ಅರಿವಿದ್ದೆ ಅವರು ಅಂದೇ ಹೇಳಿದ್ದರೇನೋ ಅನ್ನುವಂತಿವೆ.

“ಜಪಾನೀಯರ ಪಾಲಿಗಂತೂ ಭಾರತವೆಂದರೆ ಇನ್ನೂ ಎಲ್ಲ ಶ್ರೇಷ್ಠ-ಉನ್ನತ ವಿಚಾರಗಳ ಸ್ವಪ್ನ ಲೋಕವೇ ಆಗಿದೆ.ಆದರೆ ನೀವು?ನೀವೆಂಥವರು?… ಜೀವನವಿಡೀ ಕಾಡು ಹರಟೆಯಲ್ಲೇ ಮುಳುಗಿರುವವರು.ಕೇವಲ ಹರಟೆ ಮಲ್ಲರು.ಇನ್ನೆಂಥವರು ನೀವು? ಬನ್ನಿ ಇಲ್ಲಿಗೆ.ಈ ಜನರನ್ನು ನೋಡಿ ಬಳಿಕ ನಾಚಿಕೆಯಿಂದ ಮುಖ ಮುಚ್ಚಿ ಕುಳಿತುಕೊಳ್ಳಿ.

ಸಮುದ್ರ ದಾಟಿದರೆ ನಿಮ್ಮ ಜಾತಿ ಕೆಟ್ಟು ಹೋಗುತ್ತದಲ್ಲವೇ…!? ಬುದ್ದಿ ಕೆಟ್ಟ ಅರಳು ಮರಳು ಜನಾಂಗ…! ಶತಶತಮಾನಗಳಿಂದಲೂ ಮೂಢನಂಬಿಕೆ-ಕಂದಾಚಾರಗಳ ಕಂತೆಗಳನ್ನೇ ತಲೆಯ ಮೇಲೆ ಹೊತ್ತು ಕುಳಿತಿರುವವರು…!

ಈ ಆಹಾರವನ್ನು ಮುಟ್ಟಬಹುದೇ? ಆ ಆಹಾರವನ್ನು ಮುಟ್ಟಬಹುದೇ? ಎಂಬ ಬಹಳ ದೊಡ್ಡ ವಿಮರ್ಶೆಯಲ್ಲಿ ನೂರಾರು ವರ್ಷಗಳಿಂದ ಮುಳುಗಿದ್ದೀರಲ್ಲಾ-ಎಂಥ ಮನುಷರು ನೀವೆಲ್ಲ!

ಮತ್ತಷ್ಟು ಓದು »

19
ಜನ

ಕನ್ನಡ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಆಸೆಯೇ?

ಓಂ ಶಿವಪ್ರಕಾಶ್

ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ.

ದೈನಂದಿನ ಬದುಕಿನಲ್ಲಿ ತಂತ್ರಜ್ಞಾನದ ಮುಖೇನ ಕನ್ನಡದಲ್ಲೇ ವ್ಯವಹರಿಸಬಹುದೇ? ಕನ್ನಡದ ತಾಂತ್ರಿಕ ಬೆಳವಣಿಗೆ ಹೇಗೆ ಸಾಧ್ಯ? ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ ಹೇಗೆ? ಕನ್ನಡ ಭಾಷಾ ತಂತ್ರಜ್ಞಾನ ಬೆಳವಣಿಗೆಯ ತೊಡಕುಗಳ ನಿವಾರಣೆ ಸಾಧ್ಯವೇ? ತಂತ್ರಾಂಶಗಳು ನಡೆಯಬೇಕಿರುವ ಹಾದಿಯ ಕಿರು ಪರಿಚಯ ಎಲ್ಲಿ ಸಿಗಬಹುದು? ಇದಕ್ಕೊಂದು ಸಮುದಾಯವಿದೆಯೇ? ಈ ಸಮುದಾಯ ಅಭಿವೃದ್ದಿಯ ಪರಿಕಲ್ಪನೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ‘ಹೆಜ್ಜೆ’ ರೂಪಿತಗೊಂಡಿದೆ.

ಮಾಹಿತಿ ತಂತ್ರಜ್ಞಾನದ ವಿವಿಧ ಸ್ತರಗಳಲ್ಲಿ ಕನ್ನಡದ ಬೆಳವಣಿಗೆಗೆ ಬೇಕಾದ ವಿಷಯಗಳ ಬಗ್ಗೆ ಅನುಭವಿ ತಜ್ಞರು, ತಂತ್ರಜ್ಞರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಪ್ರಾರಂಭವಾಗುವ ಈ ಕಾರ್ಯಕ್ರಮ, ಮೇಲೆ ಹೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ‘ಹೆಜ್ಜೆ’ಗಳ ಹಾದಿಯನ್ನು ನಿಮ್ಮ ಮುಂದೆ ತೆರೆಯಲಿದೆ.

ಬನ್ನಿ ನಮ್ಮೊಡನೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ, ನಿಮ್ಮ ಬರುವಿಕೆಯನ್ನು ಇಂದೇ ಕಾಯ್ದಿರಿಸಿ

* * * * * *

ಚಿತ್ರಕೃಪೆ : hejje.sanchaya.net