ವಿಷಯದ ವಿವರಗಳಿಗೆ ದಾಟಿರಿ

ಜನವರಿ 19, 2012

ಕನ್ನಡ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಪಾಲ್ಗೊಳ್ಳುವ ಆಸೆಯೇ?

‍ನಿಲುಮೆ ಮೂಲಕ

ಓಂ ಶಿವಪ್ರಕಾಶ್

ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ.

ದೈನಂದಿನ ಬದುಕಿನಲ್ಲಿ ತಂತ್ರಜ್ಞಾನದ ಮುಖೇನ ಕನ್ನಡದಲ್ಲೇ ವ್ಯವಹರಿಸಬಹುದೇ? ಕನ್ನಡದ ತಾಂತ್ರಿಕ ಬೆಳವಣಿಗೆ ಹೇಗೆ ಸಾಧ್ಯ? ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಗೆ ಹೇಗೆ? ಕನ್ನಡ ಭಾಷಾ ತಂತ್ರಜ್ಞಾನ ಬೆಳವಣಿಗೆಯ ತೊಡಕುಗಳ ನಿವಾರಣೆ ಸಾಧ್ಯವೇ? ತಂತ್ರಾಂಶಗಳು ನಡೆಯಬೇಕಿರುವ ಹಾದಿಯ ಕಿರು ಪರಿಚಯ ಎಲ್ಲಿ ಸಿಗಬಹುದು? ಇದಕ್ಕೊಂದು ಸಮುದಾಯವಿದೆಯೇ? ಈ ಸಮುದಾಯ ಅಭಿವೃದ್ದಿಯ ಪರಿಕಲ್ಪನೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ‘ಹೆಜ್ಜೆ’ ರೂಪಿತಗೊಂಡಿದೆ.

ಮಾಹಿತಿ ತಂತ್ರಜ್ಞಾನದ ವಿವಿಧ ಸ್ತರಗಳಲ್ಲಿ ಕನ್ನಡದ ಬೆಳವಣಿಗೆಗೆ ಬೇಕಾದ ವಿಷಯಗಳ ಬಗ್ಗೆ ಅನುಭವಿ ತಜ್ಞರು, ತಂತ್ರಜ್ಞರು ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಪ್ರಾರಂಭವಾಗುವ ಈ ಕಾರ್ಯಕ್ರಮ, ಮೇಲೆ ಹೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪಡೆದುಕೊಳ್ಳುವ ‘ಹೆಜ್ಜೆ’ಗಳ ಹಾದಿಯನ್ನು ನಿಮ್ಮ ಮುಂದೆ ತೆರೆಯಲಿದೆ.

ಬನ್ನಿ ನಮ್ಮೊಡನೆ ಜೊತೆಜೊತೆಯಾಗಿ ಹೆಜ್ಜೆ ಹಾಕಿ, ನಿಮ್ಮ ಬರುವಿಕೆಯನ್ನು ಇಂದೇ ಕಾಯ್ದಿರಿಸಿ

* * * * * *

ಚಿತ್ರಕೃಪೆ : hejje.sanchaya.net

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments