ವಿಷಯದ ವಿವರಗಳಿಗೆ ದಾಟಿರಿ

ಜನವರಿ 8, 2012

1

ಮನದ ಸುಕ್ಕು

‍parupattedara ಮೂಲಕ
 ಪವನ್ ಪಾರುಪತ್ತೇದಾರ
 ಸುಕ್ಕು ಶುರುವಾಗಿದೆ
ಹೊಳೆಯುವ ಮೊಗವೀಗ
ನಿಜ ಬಣ್ಣ ತೆರೆಯುತಿದೆ
ಸುಕ್ಕು ಶುರುವಾಗಿದೆ
ಚಂದನವ ಮೆಲ್ಲಗೆ ಮುಖವೆಲ್ಲ ಹಚ್ಚಿ
ನಿಂಬೆ ರಸದೊಂದಿಗೆ ನಯವಾಗಿ ತೊಳೆದು
ಅರೈಕೆಗಂತ್ಯವೇ ಇಲ್ಲದಂತಾದರು
ಮನದಮೇಲೆ ಸುಕ್ಕು ಶುರುವಾಗಿದೆ
 
ಅಪನಂಬಿಕೆಯ ಸುಕ್ಕು ಅಜ್ಞಾನದ ಸುಕ್ಕು
ಆಸೆಯ ಸುಕ್ಕು ನಿರಾಸೆಯ ಸುಕ್ಕು
ಮುಖದ ನರಗಳನು ಬಿಗಿ ಹಿಡಿದು
ಮನದ ಮೇಲೆ ಗೀಟುಗಳನು ಎಳೆದು
ಗೊತ್ತಿಲ್ಲದಂತೆ ಮೋಸ ಶುರು ಮಾಡಿದೆ
ಸುಕ್ಕು ಶುರುವಾಗಿದೆ
 
ಪ್ರತಿಯೊಂದು ತಪ್ಪಿಗು ಕಾರಣ ಹೇಳಿ
ಪ್ರತಿಯೊಂದು ಮಾತಿಗು ತೇಪೆಯ ಹಚ್ಚಿ
ತನ್ನ ತಾನೇ ಆಡಂಬರಿಸುವ ಆಸೆಯಲಿ
ಗೆಳೆಯರ ಬಳಗದ ಮೆಟ್ಟಿ ಮೇಲೇರುತ
ನನ್ನದೇ ಗೆಲುವೆಂದು ಗರ್ವವನು ತೋರುವ
ಸುಕ್ಕು ಶುರುವಾಗಿದೆ ಸುಕ್ಕು ಶುರುವಾಗಿದೆ
 
 ಪವನ್  ಪಾರುಪತ್ತೇದಾರ:-
Read more from ಕವನಗಳು
1 ಟಿಪ್ಪಣಿ Post a comment
  1. ಪುಷ್ಪರಾಜ್ ಚೌಟ's avatar
    ಪುಷ್ಪರಾಜ್ ಚೌಟ
    ಜನ 23 2012

    ಇದು ಹಿರಿತನದ ಸುಕ್ಕಲ್ಲ. ಮನವೆಂಬ ಕೊರಡಿಗೆ ಹಿಡಿದ ‘ತುಕ್ಕು’. ಎಷ್ಟೇ ತೇಪೆ ಹಾಕಿದರೂ ಒಂದು ದಿನ ಗಟ್ಟಿತನವ ಕಳೆದುಕೊಳ್ಳುವ ಮಟ್ಟಿಗೆ ಬಂದು ನಿಲ್ಲುತ್ತದೆ ಮತ್ತು ಹಚ್ಚಿದ ಚಂದನವೆಲ್ಲ ತಿಕ್ಕಿದ ನಿಂಬೆರಸದ ಹುಳಿಗೆ ಅಳಿಸಿಹೋದೀತು. ಅಪೂರ್ವ ಮೋಡಿ ಪವನ್ ಸುಕ್ಕಿನ ಭಾವದೊಳಗೆ!

    Reply

ನಿಮ್ಮ ಅನಿಸಿಕೆ...