ಹರೆಯ
–ಸತೀಶ್ ರಾಮನಗರ
ಹೆಂಡ ಕುಡಿದ ಕೋತಿಯಂತ ಮನಸ್ಸು
ಎಲ್ಲಂದರಲ್ಲೇ
ಕಾರಿಕೊಳ್ಳುವ ಕನಸುಗಳು
ಹಾದಿ ತಪ್ಪಿದ ಗಮ್ಯ
ಲಗ್ಗೆಯಿಟ್ಟಲ್ಲೆಲ್ಲ ಕಾಮನ ಚಿತ್ರಗಳೇ….!
ಕಣ್ಣು ಹಾಯಿಸಿದಲ್ಲೆಲ್ಲ
ಉಬ್ಬು ತಗ್ಗುಗಳ ಮೆರೆವಣಿಗೆ
ಬೆರಗಿನಾಕರ್ಷಣೆ
ನಿಂತಲ್ಲೇ ಬಿಸಿಯುಸಿರ ಸ್ನಾನ
ಕಣ್ಣ ತುಂಬೆಲ್ಲ ನಕ್ಷತ್ರಗಳೇ ….!
ಜಾರುವ ಮನಸಿನೋಳಗೊಂದು
ಹಸಿ ಬಿಸಿ ಬಯಕೆಗಳ ಮೇಲಾಟ…!
ಬೆವರ ವಾಸನೆಗೆ
ಕನಸಿನೂರಿನ ಬಾಗಿಲ ಬಡಿದು
ಒಮ್ಮೆ ಇಣುಕುವಾಸೆ…,
ಆವೇಗ ಆವಿಯಾಗುವ ಮೊದಲೇ
ಹೊಸಲೋಕವನ್ನೊಮ್ಮೆ ಸ್ಪರ್ಶಿಸಿ
ಪ್ರಕೃತಿಯಲಿ ಲೀನವಾಗಿ
ಬೀಗುವಾಸೆ…..?
ಚಿತ್ರಕೃಪೆ :poojary-manase.blogspot.in
ಮಾನವನ ಜೀವನದಲ್ಲಿ
ಹರೆಯದ ವಯಸ್ಸಿನಲ್ಲಿ
ಕೆಲವರಲ್ಲಿ ಕಾಣಿಸುವ
ಅಲ್ಲೋಲ್ಲ ಕಲ್ಲೋಲಗಳ
ಕವನ ರೂಪದ ವಿಶ್ಲೇಷಣೆ
ಅತೀ ಸೊಗಸಾದ ರಚನೆ .. 🙂
very nice
nice sir….