ಸಂಕ್ರಮಣದ ಹಾದಿಯಲ್ಲಿ ನಿಲುಮೆ…
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು… ”
ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು :ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !
-ರವಿ ಮೂರ್ನಾಡು
ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ ನನ್ನಲ್ಲಿತ್ತು. ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!
ಇಲ್ಲಿನ ಡ್ವಾಲಾ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2007 ರಲ್ಲಿ ಕಾಲಿಟ್ಟು ಪಾಸ್‍ಪೋರ್ಟಿಗೆ ಮುದ್ರೆಯೊತ್ತಿ ಲಗ್ಗೇಜು ವಿಲೇವಾರಿಗೆ ಬರುವಾಗಲೇ ಈರ್ವರು ಹಿಂದೆಯೇ ಬಂದರು. “ ನಾನು ಕಸ್ಟಂ ಅಧಿಕಾರಿ, ನಿಮ್ಮ ಬ್ಯಾಗ್ ಚೆಕ್ ಮಾಡಬೇಕು, ಸ್ವಲ್ಪ ಈ ಕಡೆ ಬನ್ನಿ” ಅಂದರು. ಅರೆ..! ಅಧಿಕಾರಿಯಾಗಿದ್ದರೆ ಮರೆಗೆ ಕರೆಯುವ ಆಲೋಚನೆ ಏನು ಅಂತ ಯೋಚಿಸಿದ್ದೆ. ಇಲ್ಲಿನ ಐದು ಸಾವಿರ ಕ್ಯಾಮರೂನ್ ಫ್ರಾಂಕ್ ಕೊಟ್ಟರೆ ತಕರಾರಿಲ್ಲ ಅಂದರು. ಅಲ್ಲಿಯೇ ನಮ್ಮ ಕಂಪೆನಿಯ ವಾರೀಸುದಾರರು ಮಧ್ಯೆ ಬಂದಿದ್ದರಿಂದ ಆ ಪೀಡನೆಯಿಂದ ಪಾರಾದೆ. ಅಮಾನುಷ ಕೃತ್ಯಗಳ ಹೆಣಗಳ ವಾಸನೆ ನನ್ನ ಮೂಗಿಗೆ ಆಗಲೇ ಬಡಿದಿದೆ. ಹಣ ಕೊಟ್ಟರೆ ಕಾನೂನುಗಳು ಇಲ್ಲಿ ನಮ್ಮ ಕೈಗೆ ಬರುತ್ತವೆ. ಹಾಗಂತ ಹಣಕ್ಕೆ ಬಾಯ್ಬಿಟ್ಟ ನಡೆದಾಡುವ ಹೆಣಗಳೇ ಇಲ್ಲಿನ ಮನುಷ್ಯರು. ಭಾರತದಲ್ಲಿ ಇಂತಹದ್ದು ಬೇಕಾದಷ್ಟು ನಡೆಯುತ್ತವೆ. ಅದನ್ನು ಪ್ರಶ್ನಿಸುವ ಜನರಿದ್ದಾರೆ ಅನ್ನುವ ಸಮಾಧಾನ. ಇಲ್ಲಿ ಕೇಳುವವರು, ಕೊಡುವವರು ಎಲ್ಲರೂ ಕಳ್ಳರೇ ಅಂದಾಗ ಸತ್ಯಕ್ಕೂ ಹಲ್ಲು ಕಿರಿಯಲು ನಾಚಿಕೆ…!
ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು (ವ್ಯಾಲ್ಯೂಸ್) ಕಲಿಸುವುದು ಹೇಗೆ?
-ರಾವ್ ಎವಿಜಿ
ಮೌಲ್ಯಗಳು ಎಂದರೇನು ಎಂಬ ಪ್ರಶ್ನೆಗೆ ‘ನಿರ್ದಿಷ್ಟ ವಸ್ತು, ಕ್ರಿಯೆ ಮತ್ತು ಸನ್ನಿವೇಶಗಳಿಗೆ ವ್ಯಕ್ತಿಗಳು ನೀಡುವ ಬೆಲೆಗೆ ಸಂಬಂಧಿಸಿದ ಅದ್ವಿತೀಯ ಶಾಬ್ದಿಕ ಪರಿಕಲ್ಪನೆಗಳು’ ಎಂಬ ಸೈದ್ಧಾಂತಿಕ ಉತ್ತರ ನೀಡಬಹುದಾದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಸರ್ವಸಮ್ಮತ ಉತ್ತರ ನೀಡುವುದು ಕಷ್ಟ. ಕೆಲವು ವಿಶೇಷಜ್ಞರು ವ್ಯಕ್ತಿಯ ಮನೋಧರ್ಮಗಳ (ಆಟಿಟ್ಯೂಡ್) ಸಂಘಟನೆಯನ್ನು ಮೌಲ್ಯ ಎಂದು ಉಲ್ಲೇಖಿಸುವುದೂ ಉಂಟು. ಅದೇನೇ ಇರಲಿ ವರ್ತನೆಯ ನೈತಿಕತೆಗೆ ಸಂಬಂಧಿಸಿದಂತೆ ಯಾವುದು ಸರಿ ಯಾವುದು ತಪ್ಪು, ಜೀವನದಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು, ಜೀವನದ ಗುರಿ ಏನಾಗಿರಬೇಕು ಮುಂತಾದವನ್ನು ನಿರ್ಧರಿಸುವುದರಲ್ಲಿ ನಾವು ಒಪ್ಪಿಕೊಂಡಿರುವ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಬಹುತೇಕ ಸನ್ನಿವೇಶಗಳಲ್ಲಿ ನಾವು ಕೈಗೊಳ್ಳುವ ಮೌಲ್ಯಾಧಾರಿತ ತೀರ್ಮಾನಗಳು ವ್ಯಕ್ತಿನಿಷ್ಠವೂ ಸಾಪೇಕ್ಷವೂ ಆಗಿರುತ್ತವೆ. (ಅ) ನಿರ್ದಿಷ್ಟ ಅಂಶಕ್ಕೆ ನಾವು ಎಷ್ಟು ಬೆಲೆ ಕೊಡುತ್ತೇವೆ ಎಂಬುದನ್ನು ಸೂಚಿಸುವ ಪರಿಮಾಣಾತ್ಮಕ ಆಯಾಮ, (ಆ) ನಿರ್ದಿಷ್ಟ ಮೌಲ್ಯಕ್ಕೆ ನಾವು ಎಷ್ಟು ಬದ್ಧರಾಗಿರುತ್ತೇವೆ ಎಂಬುದನ್ನು ಸೂಚಿಸುವ ಗುಣಾತ್ಮಕ ಆಯಾಮ ಮತ್ತು (ಇ) ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳ ನಡುವಿನ ಸಂಬಂಧವನ್ನು ಸೂಚಿಸುವ ಅಂತರ್- ಸಂಬಂಧ ಆಯಾಮ – ಈ ಮೂರು ಆಯಾಮಗಳು ನಮ್ಮಲ್ಲಿ ಅಂತಸ್ಥವಾಗಿರುವ ಮೌಲ್ಯಗಳಿಗೆ ಇರುತ್ತವೆ.
ಸಂಸ್ಕೃತಿ ಸಂಕಥನ – 18 – ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ
-ರಮಾನಂದ ಐನಕೈ
ಇತ್ತೀಚೆಗೆ ಮಂಚೀಕೇರಿಯಲ್ಲಿ ಬಾಲಗಂಗಾಧರರ ಸಂವಾದ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಮುಂಚೀಕೇರಿಯ ಸಂಹತಿ ಟ್ರಸ್ಟ್ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಹತಿ ಗೆಳೆಯರು ತುಂಬಾ ಅಚ್ಚುಕಟ್ಟಾಗಿ ಸಂಘಟಿಸಿದ್ದರು. ನೂರಕ್ಕೂ ಹೆಚ್ಚು ಜನ ಸಂವಾದದಲ್ಲಿ ಪಾಲ್ಗೊಂಡು ಪ್ರಶ್ನೆಗಳ ಸುರಿಮಳೆ ಗೈದರು. ಬೇರೆ ಬೇರೆ ಪ್ರಶ್ನೆಗಳಿಗೆ ಬಾಲ ಗಂಗಾಧರರು ನೀಡಿದ ಉತ್ತರಗಳನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಡುವ ಪ್ರಯತ್ನ ಇಲ್ಲಿದೆ.
ಭಾರತ ತನ್ನ ಇತಿಹಾಸದಲ್ಲಿ ಎರಡು ವಸಹಾತು ಶಾಹಿಗಳನ್ನು ಕಂಡಿದೆ. ಇಸ್ಲಾಮಿಕ್ ಹಾಗೂ ಯುರೋಪಿಯನ್ ವಸಾಹತುಶಾಹಿ. ಇವೆರಡೂ ಕೂಡಾ ಸೆಮೆಟಿಕ್ ರಿಲಿಜನ್ ಹೊಂದಿದ ಸಂಸ್ಕೃತಿ ಯಿಂದ ಬಂದಂತಹವುಗಳು. ಇವರು ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲಿ ರಿಲಿಜನ್ ಇದೆ ಎಂದು ನಂಬಿ ದವರು, ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ ಯಲ್ಲೂ ರಿಲಿಜನ್ ಹುಡುಕಲು ಪ್ರಾರಂಭಿಸಿದರು. ಅದು ಅವರಿಗೆ ಸುಲಭಕ್ಕೆ ಸಾಧ್ಯವಾಗಲಿಲ್ಲ. ಸೆಮೆಟಿಕ್ ರಿಲಿಜನ್ಗಳ ಕನ್ನಡಕ ಹಾಕಿಕೊಂಡು ಹುಡುಕಿದರು. ಕೊನೆಗೂ ‘ಹಿಂದೂಯಿಸಂ’ ಎಂಬ ರಿಲಿಜನ್ನನ್ನು ಕಂಡುಹಿಡಿದೇಬಿಟ್ಟರು. ಹಿಂದೂ ರಿಲಿಜನ್ ಅಂದರೆ ಪಾಶ್ಚಾತ್ಯರಿಗೆ ಮಾತ್ರ ಅರ್ಥ ವಾಗುತ್ತದೆ. ಭಾರತೀಯರಿಗೆ ಅರ್ಥವಾಗುವು ದಿಲ್ಲ. ಏಕೆಂದರೆ ಭಾರತದ ಹೆಚ್ಚಿನ ಜನರಿಗೆ ಹಿಂದೂ ರಿಲಿಜನ್ನಿನ ಅನುಭವವೇ ಆಗುವುದಿಲ್ಲ. ರಿಲಿಜ ನ್ನಿನ ಯಾವುದೇ ಸರಳ ರೇಖೆಗಳು ನಮ್ಮಲ್ಲಿಲ್ಲ. ದಿನನಿತ್ಯ ನಮ್ಮ ನಡುವೆ ಕಾಣುವ ಗೊಂದಲಗಳು ರಿಲಿಜನ್ ಹಾಗೂ ಸಂಸ್ಕೃತಿಯ ನಡುವಿನ ಹೊಂದಾಣಿಕೆ ಆಗದ ತಿಕ್ಕಾಟಗಳು, ಆದರೆ ಇದು ವರೆಗೆ ಯಾವ ಭಾರತೀ ಯನೂ ಈ ಕುರಿತು ಸಂಶೋಧನೆ ನಡೆಸದೇ ಇದ್ದದ್ದು ಆಶ್ಚರ್ಯದ ವಿಷಯ. ಪಾಶ್ಚಿಮಾತ್ಯರು ಭಾರತದ ಕುರಿತಾದ ತಮ್ಮ ಅನುಭವಗಳನ್ನು ಹೇಳಿ ಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಭಾರತೀಯರು ತಮ್ಮ ನಿಜ ಎಂದು ನಂಬಿಕೊಳ್ಳುತ್ತ ಬಂದರು. ಅವರ ಅನುಭವಗಳನ್ನೇ ಈಗ ನಮ್ಮ ಅನುಭವಗಳೆಂಬಂತೆ ಪುನರಾವರ್ತಿಸುತ್ತಿದ್ದೇವೆ. ಇದನ್ನೇ ವಸಾಹತು ಪ್ರಜ್ಞೆ ಅನ್ನುವುದು. ಬಾಲ ಗಂಗಾಧರರು ಈ ಕುರಿತು ಸಂಶೋ ಧನೆ ನಡೆಸುತ್ತಿರುವ ದೇಶದ ಹಾಗೂ ಪ್ರಪಂಚದ ಪ್ರಪ್ರಥಮ ಚಿಂತಕರು.
ನಂಡೊ ಬೆಲಮಾ….
- ಅಶ್ರಫ್, ‘ನೇರದಾರಿ’ ಬ್ಲಾಗ್
ಏ ನಂಡೊ ಬೆಲಮಾ…
ನಿಂಡೊ ಗುಳಿ ಬೂನೊ
ಆ ಜಂಡ್ ಕಣ್ಣ್ ಙ
ನಂಡೊಟ್ಟಿಗೆ ಆಯಿರ ಆಯಿರ
ಸಂದೇಶತ್ತೊ ಸಾರಿಯೋಂಟು ಉಂಡಲ್ಲೇ..
.
ಆಯೆಂಗಾ .. ಆ ಕಣ್ಣ್ ಙ ಳೊ ಉಲ್;ಗ ಉಲ್ಲದ್
ಕಷ್ಟಮಾ ಸುಖಮಾ ದುಃಖಮಾ ಸಂದೋಲಮಾ
ಅಲ್ಲಾ.. ಬರೀ ನಿರೀಕ್ಷೆಮಾ ಚೆಂತ್
ನಕ್ಕ್ ಅರ್ಥಮೇ ಆವುಲ್ಲೆ ಅಲ್ಲೆ ಬೆಲಮಾ…
.
ಆ ನಿಂಡೊ ಗುಳಿ ಬೂನೊ
ಜಂಡ್ ಕಣ್ಣ್ ಡೊ ಉಲ್ ಗತ್ತೊ ನೊಂಬಲತ್ತೋ
ನಂಡೆಟ್ಟೆ ಒರ್ಕ ಚೆನ್ನ್ ಟ್ಟ್
ನಿಂಡೊ ಮನಸ್ಸುರೊ ಬೇಜಾರೆಲ್ಲಾ ಒರ್ ಕ
ಕೊರೊಡಿಯಾಕಾಲ್ಲೇ ಬೆಲಮಾ…
.
ಈ ದುನಿಯಾವುಲು”ಒಂಟಿ”ಯಾಯಿಟ್ಟ್
ಬೋಬ ನಿಂಡೊ ಬುಟ್ಟು ಪೋಯಿತ್ತ್
ಚೆಲ್ಡೋ ಬೇಜಾರಾ ನಿಕ್ಕ್…?
ಪೆಙಯಿ ಬನ್ನೊ ಕೊಸಿಲ್
ಮೋನು ನಿಂಡೊ ನೋಕುಲ್ಲೆ
ಚೆಲ್ಡೊ ದುಃಖಮಾ..?
.
ಅಲ್ಲೆಂಗ್ ಈ ದುನಿಯಾವುಲು
ನಡನೋಂಟುಲ್ಲೊ.. ಅವಸ್ಥೆಙಲೊ
ಕಂಡ್ ಟ್ಟ್ ಅನುಕಂಪಮಾ ನಿಕ್ಕ್.?
ಎಂದ್ ರೋಟೆ ನಕ್ಕ್ ಅರ್ಥಮೇ
ಆವುಲ್ಲೆ ಅಲ್ಲೆ ಬೆಲಮಾ…
‘ಚಿತ್ತಗಾಂಗ್’ನಲ್ಲಿ ಸ್ವಾತಂತ್ರ್ಯ’ಸೂರ್ಯ’ನ ಉದಯ…!
– ಭೀಮಸೇನ್ ಪುರೋಹಿತ್
‘ಚಿತ್ತಗಾಂಗ್’ ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ ‘ಬಾಂಗ್ಲಾದೇಶ’ದಲ್ಲಿದೆ..
ಅವನ ಹೆಸರು ‘ಸೂರ್ಯಸೇನ್’. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ ‘ಮಾಸ್ಟರ್ ದಾ’.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ…ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ ‘ಅನುಶೀಲನ ಸಮಿತಿ’ ಮತ್ತು ‘ಜುಗಾಂತರ’ ದಿಂದ ಪ್ರಭಾವಿತನಾಗಿದ್ದ..
ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು..
ಅಮ್ಮ ಮಾಡಿದ ಕೇಕು
– ಅಮಿತ ರವಿಕಿರಣ
ಜಗತ್ತಿಗೆಲ್ಲ ಜನೆವರಿ ೧ ಹೊಸ ವರ್ಷದ ಆರಂಭ ಆದ್ರೆ..ನನಗೆ ಮಾತ್ರ ಜನೆವರಿ ೩ ಹೊಸ ವರ್ಷ ಅದ್ಯಾಕೆ ಅನ್ನೋ ಪ್ರಶ್ನೆ ಹುಟ್ಟೋ ಮೊದಲೇ ಉತ್ತರ ಹೇಳೋ ಕಾತರ ನನಗೆ…ಈ ದಿನವೇ ನನಗೆ ಜಗತ್ತಿನ ಅತ್ಯುನ್ನತ ಹುದ್ದೆ ಸಿಕ್ಕಿದ್ದು,ಹೊಸ ಬದುಕಿಗೆ ಹೊಸ ಜೀವನ ಶೈಲಿಗೆ ,ಹೊಸ ಪದವಿಗೆ ನನ್ನ ಪರಿಚಯ ಆದದ್ದು..ನಾ ಅಮ್ಮ ಎಂಬ ಟೈಟಲ್ ಪಡೆದಿದ್ದು…ಬದುಕಿನ ಪ್ರತಿ ಬದಲಾವಣೆಯನ್ನು ಮನಸ್ಪೂರ್ತಿ ಸ್ವಾಗತಿಸಿ ನೋವನ್ನು ಕೂಡ ಒಂದು ಖುಷಿಯಿಂದ ಅನುಭವಿಸುವ ನನಗೆ ಇದು ಅವರ್ಣನೀಯ ಅನುಭವ.ಆಸ್ಪತ್ರೆಗೆ ದಾಖಲಾಗಿ,ಹೊಟ್ಟೆನೋವ ಭರದಲ್ಲಿ ನನ್ನ ತಲೆಯಲ್ಲಿ ಅಚ್ಚಾಗಿದ್ದ ಅಷ್ಟು ಹಾಡುಗಳನ್ನು ಹಾಡಿ ಬರಿದು ಮಾಡಿ ಸಂಕಟದಲ್ಲೂ ಸಂತಸ ವನ್ನು ತುಂಬಿ ಕೊಟ್ಟ ರಾತ್ರಿಯದು…ಮುಂಜಾನೆ ಮೊದಲ ಪ್ರಹರಕ್ಕೆ ಪ್ರಥಮ್ ನನ್ನ ಪಕ್ಕ ದಲ್ಲಿ .ಹಾಯಾಗಿ ನಿದ್ರಿಸುತ್ತಿದ್ದ. ಇದೆಲ್ಲ ಮೊನ್ನೆ ಮೊನ್ನೆಯಂತಿದೆ ಅದಾಗಲೇ ಪ್ರಥಮನಿಗೆ ೫ ತುಂಬಿತು .ಕಳೆದ ನಾಲ್ಕು ವರ್ಷದ ಜನುಮದಿನದ ಆಚರಣೆಯನ್ನು ನಮಗಿಷ್ಟ ಬಂದಂತೆ ಆಚರಿಸಿದ್ದು ಆಯ್ತು. ಇಗ ಅವನು ತನ್ನ ಅನಿಸಿಕೆ ಇಚ್ಹೆ ವ್ಯಕ್ತ ಪಡಿಸಲು ಶುರು ಮಾಡಿದಾನೆ ಅದಕ್ಕೆ ಅವನನ್ನೇ ಕೇಳಿದೆ ಹೇಗೆ ಆಚರಿಸೋಣ ನಿನ್ನ ಬರ್ತ್ ಡೇ???ಯಾರನ್ನ ಕರಿಬೇಕು ??ನಿನಗೇನು ಗಿಫ್ಟ್ ಬೇಕು??
ಭಗವಾನ್ ರಮಣ ಮಹರ್ಷಿಗಳ ಸಂದೇಶ
– ಹೆಚ್.ಎಸ್. ಪ್ರಕಾಶ್,ಹಾಸನ
ಭಗವಾನ್ ಶ್ರೀ ರಮಣ ಮಹರ್ಷಿಗಳು ಕೊಡುತ್ತಿದ್ದ ಸಂದೇಶಗಳು ಮನನೀಯವಾಗಿರುತ್ತಿತ್ತು. ಆದರೆ, ಅವರ ಸಂದೇಶಗಳನ್ನು ಓದಿಕೊಂಡು ಅವರ ದಿನಚರಿಯನ್ನು ಗಮನಿಸಿದರೆ ಮಹರ್ಷಿಗಳೇ ಈ ಜಗತ್ತಿಗೆ ಸಂದೇಶವಾಗಿ ಕಾಣುತ್ತಿದ್ದರು. ಅವರು ಏನು ಹೇಳುತ್ತಿದ್ದರೋ ಅವರು ಅದೇ ಆಗಿರುತ್ತಿದ್ದರು. ಇದು ಅವರ ಜೀವನದುದ್ದಕ್ಕೂ ಧಾಖಲಾಗಿದೆ.
ಒಂದು ಸಂದರ್ಭದಲ್ಲಿ ಭಗವಾನ್ ರಮಣರು ಕೈವಲ್ಯ ನವನೀತಂನ ಎರಡು ಶ್ಲೋಕಗಳನ್ನು ಉದಾಹರಿಸಿ ಆತ್ಮಜ್ಞಾನದ ಬಗ್ಗೆ ತಿಳಿಸಿದರು. ನವನೀತಂ, ಬೃಹದ್ದಾಕರವಾದ ಆಲದ ಮರದ ಕೆಳಗೆ ನಿಂತು ” ನಾನು ಸತ್ಯವನ್ನೇ ಹೇಳುತ್ತೇನೆ, ನೀನೆ ಈ ಜಗತ್ತಿನ ಚೈತನ್ಯ. ಈ ಜಗತ್ತಿನಲ್ಲಿ ಆಗುಹೊಗುತ್ತಿರುವ ಎಲ್ಲವನ್ನು ಸಾಕ್ಷಿಭೂತವಾಗಿ ನೋಡುತ್ತಿರುವ ನೀನು ಯಾವತ್ತು ಬದಲಾಗದ ಸ್ಥಿತಿಯಲ್ಲಿ ಇದ್ದೀಯ. ನೀನು ಭೂತ, ಭವಿಷ್ಯ ಮತ್ತು ವರ್ತಮಾನದಲ್ಲಿ ಕೊನೆಮೊದಲಿಲ್ಲದ ಸಾಗರದ ಅಲೆಗಳ ಏರಿಳಿತದಂತೆ ಸಕಲವನ್ನು ಸಾಕ್ಷಿಯಾಗಿ ಸದಾಕಾಲ ನೋಡುತ್ತಿರುವೆ. ನಾನು ಈಗಾಗಲೇ ಲೆಕ್ಕವಿಲ್ಲದಷ್ಟು ಜನ್ಮಗಳನ್ನು ಕಳೆದ್ದಿದ್ದರೂ ದೇಹವನ್ನೇ ಆತ್ಮವೆಂದು ತಪ್ಪಾಗಿ ಗ್ರಹಿಸಿ ಎಲ್ಲಾ ಜನ್ಮಗಳನ್ನು ಹಾಳುಮಾಡಿಕೊಂಡಿದ್ದೇನೆ. ಹೆಚ್ಚು ಕಡಿಮೆ ಎಲ್ಲಾ ಜನ್ಮದಲ್ಲೂ ಮರಳುಗಾಡಿನಲ್ಲಿ ದೂರದಿಂದ ಕಾಣುವ ಜಲದಂತೆ, ಬ್ರಾಂತಿಯಲ್ಲೇ ಮುಳುಗಿ ಜನ್ಮವನ್ನು ವ್ಯರ್ಥ ಮಾಡಿಕೊಂಡಿದ್ದೇನೆ. ಕೊನೆಗೆ ‘ನಾನು ಯಾರು?’ ಎಂಬುದನ್ನು ಅರಿಯಲು ನೀನು ನನಗೆ ಬುದ್ದಿಕೊಟ್ಟ ಮೇಲೆ ನನ್ನಲ್ಲಿ ಜನ್ಮ ಜನ್ಮಗಳಿಂದ ಇದ್ದ ಎಲ್ಲಾ ಪೊರೆಯು ಕಳಚಿತು. ಈಗ ನಾನು ಮುಕ್ತನಾದೆ. ಈಗ ನನಗೆ ಸತ್ಯದ ಅರಿವಾಯಿತು.” ಎಂದು ಹೇಳಿದ್ದನ್ನು ಮಹರ್ಷಿಗಳು ಉದಾಹರಿಸಿದರು.
ಧ್ಯಾನಸ್ಥಯೋಗಿಯಾಗಿದೆ ಮಹಾಸಹ್ಯಗಿರಿ!
-ಬಿ.ಆರ್. ಸತ್ಯನಾರಾಯಣ್
“ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!”
ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.
ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.
ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಮತ್ತಷ್ಟು ಓದು 






