ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 12, 2012

2

ಸಂಸ್ಕೃತಿ ಸಂಕಥನ – 26 – ಭಾರತೀಯರ ನೈತಿಕ ಸ್ವರೂಪ

‍parupattedara ಮೂಲಕ

-ರಮಾನಂದ ಐನಕೈ

ನೈತಿಕತೆ ಅಂದರೆ ಏನು? ಜಗತ್ತಿನ ಎಲ್ಲಾ ಸಂಸ್ಕೃತಿಗಳ ನೈತಿಕ ಪ್ರಜ್ಞೆ ಒಂದೇ ತೆರನಾಗಿದೆಯೇ? ಪ್ರಸ್ತುತ ಭಾರತೀಯ ಸಂದರ್ಭದಲ್ಲಿ ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದು ಸ್ಪಷ್ಟವಾಗದಿದ್ದರೆ ನಾವು ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳಲು ತೊಡಕಾಗುತ್ತದೆ.

ಯುರೋಪಿಯನ್ನರ ನೈತಿಕ ಪ್ರಜ್ಞೆಗೂ ಭಾರತೀಯರ ನೈತಿಕಪ್ರಜ್ಞೆಗೂ ಅಜಗಜಾಂತರ ವ್ಯತ್ಯಾಸವಿದೆ. ಪಾಶ್ಚಾತ್ಯರು ನೈತಿಕತೆಯನ್ನು ಗ್ರಹಿಸುವ ರೀತಿಯೇ ಬೇರೆ, ನಾವು ನಿರ್ಣಯಿಸುವ ರೀತಿಯೇ ಬೇರೆ. ಭಾರತೀಯ ಪುರಾಣಗಳು ನೈತಿಕತೆಯ ಬುನಾದಿ ಅನ್ನುತ್ತೇವೆ. ನಮ್ಮ ಸಂಸ್ಕೃತಿಯಲ್ಲಿರುವಷ್ಟು ನೀತಿ ಬೇರೆಲ್ಲೂ ಇಲ್ಲ ಅನ್ನುತ್ತೇವೆ. ರಾಮ, ಕೃಷ್ಣ, ಬುದ್ಧ, ಬಸವ, ಸೀತಾ, ತಾರಾ, ಮಂಡೋದರಿ ಮುಂತಾಗಿ ನೈತಿಕ ಆದರ್ಶದ ಮಾಡೆಲ್ಗಳೇ ನಮ್ಮ ಇತಿಹಾಸ ಹಾಗೂ ಪುರಾಣಗಳಲ್ಲಿ ಸಿಗುತ್ತವೆ. ಇಷ್ಟಾಗಿಯೂ ಐರೋಪ್ಯರು ಭಾರತೀಯರನ್ನೇಕೆ ಅನೈತಿಕರು ಅಂದರು?

ಯುರೋಪಿಯನ್ನರು ಭಾರತಕ್ಕೆ ಬಂದಾಗ ಅವರಿಗೆ ಇಲ್ಲಿನ ಸಂಸ್ಕೃತಿ ಅರ್ಥವಾಗಲಿಲ್ಲ. ಇಡೀ ಭಾರತೀಯ ಸಂಸ್ಕೃತಿಗೆ ನೈತಿಕ ತಳಪಾಯವೇ ಇಲ್ಲ ಎಂದು ನಿರ್ಣಯಿಸಿದರು. ಭಾರತೀಯರಿಗೆ ಮೊರಲ್ ಹಾಗೂ ಎಥಿಕ್ಸ್ನ ಕಲ್ಪನೆಯೇ ಇಲ್ಲ. ನಾಗರಿಕತೆಯಿಂದ ಬಹಳ ಹಿಂದುಳಿದಿದ್ದಾರೆ. ಇದೊಂದು ಪತನಗೊಂಡ ಸಂಸ್ಕೃತಿ. ಇಲ್ಲಿನ ಮೂತರ್ಿಪೂಜೆ, ಜಾತಿಪದ್ಧತಿ, ಸಾಮಾಜಿಕ ಆಚರಣೆಗಳೆಲ್ಲವೂ ಅವರಿಗೆ ಅನೈತಿಕ ಆಚರಣೆಗಳಂತೆ ಕಂಡವು. ಭಾರತೀಯರು ಅಪ್ರಾಮಾಣಿಕರು, ಸುಳ್ಳು ಹೇಳುವವರು ಹಾಗೂ ಮೋಸಗಾರರು ಎಂಬುದಾಗಿ ವಣರ್ಿಸಿದರು. ಭಾರತೀಯ ಸಂಸ್ಕೃತಿ ಭ್ರಷ್ಟಗೊಂಡಿದೆ ಎಂದು ವ್ಯಾಖ್ಯಾ ನಿಸಿದರು. ಆದ್ದರಿಂದ ಭಾರತದ ಪುನರುದ್ಧಾರಕ್ಕೆ ಕೈಹಾಕಿದರು. ಈ ಕಾರಣಕ್ಕಾಗೇ ಹಲವು ಕಾನೂನು ಗಳನ್ನು ಮಾಡಿದರು. ಭಾರತದ ಜಾತಿ ವ್ಯವಸ್ಥೆಯನ್ನಂತೂ ಎಥಿಕಲ್ ಭ್ರಷ್ಟಾಚಾರದ ಮೂರ್ತರೂಪ ಎಂದರು. ಭಾರತೀಯರ ಎಥಿಕ್ಸೇ ಅನೈತಿಕವೆಂದು ಜರಿದ ಬಗ್ಗೆ ಸಹಸ್ರ ಉದಾಹರಣೆಗಳಿವೆ.

ಹಾಗಾದರೆ ಭಾರತೀಯ ಸಂಸ್ಕೃತಿಯಲ್ಲಿ ನೀತಿ ಅನ್ನುವುದೇ ಇಲ್ಲವೇ? ನೈತಿಕ ತಳಹದಿಯಿಲ್ಲದೇ ನಮ್ಮ ಸಂಸ್ಕೃತಿ ಉಳಿದು ಬರಲು ಸಾಧ್ಯವೇ? ಭಾರತದ ನೀತಿ ಯಾವುದು? ನಮ್ಮ ಇತಿಹಾಸ ಪುರಾಣಗಳಲ್ಲೆಲ್ಲ ಬರುವ ನೀತಿಯನ್ನು ಹೇಗೆಂದು ಗ್ರಹಿಸಬೇಕು? ಇದು ನಮಗೊಂದೇ ಅಲ್ಲ ಐರೋಪ್ಯರಿಗೂ ಯಕ್ಷಪ್ರಶ್ನೆಯಾಗಿ ಕಾಡಿತು. ಅವರೂ ಕೂಡಾ ಭಾರತದ ಎಥಿಕ್ಸ್ ಹುಡುಕಲು ಪ್ರಯತ್ನಿಸಿದರು.

ರಿಚಡರ್್ ಶ್ವೆಡರ್ ಎಂಬವರು ಈ ಕುರಿತು ಸಂಶೋಧನೆ ಮಾಡಿದ್ದಾರೆ. ಅವರು ಚಿಕಾಗೋದಲ್ಲಿ ಪ್ರೊಫೆಸರ್ ಆಗಿದ್ದಾರೆ. ಮೊರಾಲಿಟಿಯ ವಿಕಾಸವನ್ನು ವಿಭಿನ್ನ ಸಂಸ್ಕೃತಿಗಳ ಮೂಲಕ ಗುರುತಿಸಲು ಅವರು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಅವರೊಂದು ಪ್ರಯೋಗ ಮಾಡಿದರು. ಅವರು ಆಯ್ದುಕೊಂಡದ್ದು ಪರಸ್ಪರ ವಿರುದ್ಧ ಸಂಸ್ಕೃತಿಯೆಂದು ಭಾವಿಸಲಾದ ಭಾರತ ಮತ್ತು ಅಮೇರಿಕಾ ಸಂಸ್ಕೃತಿಗಳನ್ನು. ಮೊರಲ್ ಕಲ್ಪನೆಗಳಿ ಗಾಗಿ 15 ಪ್ರಶ್ನೆಗಳ ಪ್ರಶ್ನಾವಳಿ ಸಿದ್ಧಪಡಿಸಿ ಎರಡೂ ಸಂಸ್ಕೃತಿಯವರ ಅಭಿಪ್ರಾಯ ಪಡೆದರು. ಅಚ್ಚರಿ ಯೆಂದರೆ ಅಮೇರಿಕನ್ ಸಂಸ್ಕೃತಿಯವರ ನೈತಿಕತೆ ಕಲ್ಪನೆಯಲ್ಲಿ ಮೊದಲ ಆಧ್ಯತಾ ಸ್ಥಾನ ಪಡೆದ ಪ್ರಶ್ನೆ ಭಾರತೀಯರಿಗೆ 15ನೇ ಪ್ರಶ್ನೆಯಾಗಿ ಕೊನೆಯ ಸ್ಥಾನ ಪಡೆಯಿತು. ಅವು ಯಾವೆವೆಂದು ನೋಡೋಣ.

‘ಬಡ ಮನುಷ್ಯನೊಬ್ಬನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಹೋದನು. ಆಸ್ಪತ್ರೆಯಲ್ಲಿ ಅವನಿಗೆ ಹಣ ಕೊಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರು’ ಇದು ಅಮೇರಿಕನ್ನರಿಗೆ ಅತ್ಯಂತ ಮುಖ್ಯ ನೈತಿಕ ಪ್ರಶ್ನೆಯಾಯಿತು.

‘ತನ್ನ ತಂದೆಯು ಸತ್ತ ಮಾರನೆಯ ದಿನ ಹಿರಿಯ ಮಗ ಕ್ಷೌರ ಮಾಡಿಸಿಕೊಂಡು ಕೋಳಿ ಮಾಂಸ ತಿಂದನು’ ಇದು ಭಾರತೀಯರಿಗೆ ಮುಖ್ಯವಾದ ನೈತಿಕ ಪ್ರಶ್ನೆಯಾಯಿತು.

ಈಗ ಯಾರ ನೈತಿಕತೆಯನ್ನು ಹೇಗೆ ನಿರ್ಧರಿಸಬೇಕು? ಒಬ್ಬ ಬಡವನಿಗೆ ಚಿಕಿತ್ಸೆ ನಡೆಯುತ್ತಿದೆಯೋ ಇಲ್ಲವೋ ಎಂಬುದಕ್ಕಿಂತ ನಾವು ಏನನ್ನು ತಿನ್ನಬೇಕು, ವಿಧವೆಯರು ಏನನ್ನು ಧರಿಸಬೇಕೆಂಬುದೇ ಭಾರತೀಯರಿಗೆ ಹೆಚ್ಚು ಮಹತ್ವದ ಎಥಿಕಲ್ ಪ್ರಶ್ನೆಗಳಾಗಿವೆ ಎಂಬಂತೆ ಕಂಡುಬಂತು. ಇಂಥ ಮೂರ್ಖ ನಾಮ್ಸರ್್ಗಳನ್ನು ಇಟ್ಟುಕೊಂಡು ನಮ್ಮ ಸಂಸ್ಕೃತಿ ಹಲವು ಸಾವಿರ ವರ್ಷಗಳಿಂದ ಉಳಿದುಕೊಂಡು ಬಂದಿದ್ದಾದರೂ ಹೇಗೆ? ಇದು ಅರ್ಥವಾಗದೇ ಶ್ವೇಡರ್ ಭಾರತೀಯರು ದೇಹದ ಪಾವಿತ್ರ್ಯಕ್ಕೆ ಹಾಗೂ ಶುದ್ಧತೆಗೆ ಮಹತ್ವ ಕೊಡುತ್ತಿದ್ದರು ಎಂದು ಅಭಿಪ್ರಾಯ ಪಡುತ್ತಾನೆ. ಆದರೆ ಇದು ಸಮಾಧಾನದ ಉತ್ತರ ಆಗಲಾರದು. ಹಾಗಾಗಿ ಅಂತಿಮವಾಗಿ ಶ್ವೇಡರ್ ‘ಭಾರತೀಯ ಎಥಿಕ್ಸಿಗೆ ಸಂಬಂಧಿಸಿದಂತೆ ಒಂದು ಸಮಸ್ಯೆಯೆಂದರೆ ಅವರು ನೈತಿಕ ಹಾಗೂ ನೈತಿಕೇತರ ಕ್ಷೇತ್ರಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸಿರಲಿಲ್ಲ. ಎಥಿಕ್ಸ್ ಎನ್ನುವುದಕ್ಕೆ ಅವರಿಗೊಂದು ಶಬ್ದವೇ ಇರಲಿಲ್ಲ’ ಎಂಬ ನಿರ್ಣಯಕ್ಕೆ ಬರುತ್ತಾನೆ.

ಹಾಗಾದರೆ ಭಾರತೀಯರ ನೈತಿಕತೆಯ ಮಾನದಂಡ ಯಾವುದು? ಅವುಗಳನ್ನು ತಿಳಿದುಕೊಳ್ಳುವಲ್ಲಿ ನಮಗೇನು ತೊಂದರೆ ಎದುರಾಗುತ್ತಿವೆ? ಈ ಪ್ರಶ್ನೆಗಳಿಗೆ ಬಾಲಗಂಗಾಧರರಿಗಿಂತ ಸಮರ್ಥವಾಗಿ ಬೇರೆ ಯಾರೂ ಉತ್ತರಿಸಲಾರರು.

ಮೊರಾಲಿಟಿ ಅಥವಾ ನೈತಿಕತೆ ಅಂದರೆ ವ್ಯಕ್ತಿಯ ಸನ್ನಡತೆ ಅಥವಾ ಸಚ್ಚಾರಿತ್ರ್ಯ ಅಂತಲೂ ಕರೆಯ ಬಹುದು. ಇಂಥ ಸನ್ನಡತೆಗೆ ಬುನಾದಿಯಾಗಬಲ್ಲ ಸಾರ್ವಕಾಲಿಕ ತತ್ವಗಳಿಗೆ ಎಥಿಕ್ಸ್ ಎನ್ನುತ್ತಾರೆ. ಎಥಿಕ್ಸ್ ಅನ್ನುವುದು ಸನ್ನಡತೆಗೆ ಸಾರ್ವತ್ರಿಕ ಮಾಪನ ಅಥವಾ ಮಾರ್ಗದಶರ್ಿ ತತ್ವಗಳು. ಐರೋಪ್ಯರ ಎಥಿಕ್ಸ್ ಅನ್ನುವುದು ರಿಲಿಜನ್ನ್ನು ಅಥವಾ ಅದರ ಥಿಯಾಲಜಿ ಯನ್ನು ಅವಲಂಬಿಸಿದೆ. ಅವರಿಗೆ ನೈತಿಕತೆ ಅನ್ನು ವುದು ದೇವರ ನಿಯಮಾವಳಿ. ಇದಕ್ಕೆ ನಾಮರ್ೆ ಟಿವ್ ಎಥಿಕ್ಸ್ ಎನ್ನುತ್ತಾರೆ.

ಮನುಷ್ಯರ ಸರಿ-ತಪ್ಪುಗಳನ್ನು ನಿದರ್ೇಶಿಸುವ ಸಾರ್ವತ್ರಿಕ ಪ್ರಮಾಣಗಳಿಗೆ ನಾಮರ್ೆಟಿವ್ ಎನ್ನು ತ್ತಾರೆ. ಅಂದರೆ ಅವುಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಅರ್ಥ. ಇಂಗ್ಲೀಶಿನ ( )ಎಂಬ  ಪ್ರಯೋಗವು ಇಂಥ ಹೇಳಿಕೆಗಳ ಲಕ್ಷಣ. ಈ ಪರಿಕಲ್ಪನೆಯು ಲಿರಿಜನ್ನುಗಳಲ್ಲಿ ಮಾತ್ರ ವಿಶಿಷ್ಟವಾಗಿರುತ್ತದೆ. ಭಾರತೀಯ ಭಾಷೆಗಳಲ್ಲಿ ಇಂಥ ಕಲ್ಪನೆಯನ್ನಾಗಲೀ, ಪ್ರಯೋಗವನ್ನಾಗಲೀ ಕಾಣಲಾರೆವು. ನಾಮರ್ೆಟಿವ್ ಎಥಿಕ್ಸ್ ಅಂದರೆ ಇಂಥ ಸಾರ್ವತ್ರಿಕ ಪ್ರಮಾಣಗಳನ್ನು ಪ್ರತಿಪಾದಿಸುವ ಎಥಿಕ್ಸ್. ಇಂಥ ನಾಮರ್ೆಟಿವ್ ಎಥಿಕ್ಸ್ ಭಾರತದಲ್ಲಿ ಇಲ್ಲಿ.

ಹಾಗಾದರೆ ಭಾರತೀಯರಿಗೆ ನೀತಿ ಇಲ್ಲವಾ? ಸಚ್ಚಾರಿತ್ರ್ಯ ಇಲ್ಲವಾ? ಈ ಸಮಾಜ ಹೇಗೆ ನಿಂತಿದೆ? ನಮ್ಮ ಪುರಾಣ ಗ್ರಂಥಗಳಲ್ಲಿ ಬರುವ ನೀತಿ ವಾಕ್ಯಗಳು ಏನು? ಇಲ್ಲೇ ಸೂಕ್ಷ್ಮ ಇರುವುದು

* * * * * * * *

ಚಿತ್ರಕೃಪೆ :- checkouteveryday.blogspot.com

2 ಟಿಪ್ಪಣಿಗಳು Post a comment
  1. ROOPA B RAO's avatar
    ಮಾರ್ಚ್ 12 2012

    ಕುತೂಹಲಕಾರಿಯಾಗಿದೆ ನನ್ನಲ್ಲೂ ಈ ಬಗ್ಗೆ ತುಂಬಾ ಪ್ರಶ್ನೆಗಳಿವೆ, ಇನ್ನಷ್ಟು ಮಾಹಿತಿಗಳನ್ನು ಎದುರು ನೋಡುತ್ತಿದ್ದೇನೆ. ನೈತಿಕತೆಯ ವ್ಯಾಖ್ಯಾನ ಕಷ್ಟವೇ ಸರಿ

    ಉತ್ತರ
  2. ಸೌರವ್ ದಾದ's avatar
    ಸೌರವ್ ದಾದ
    ಮಾರ್ಚ್ 12 2012

    ಚಿಂತನೆಗೆ ಈಡು ಮಾಡಿದ ಲೇಖನ. ಸಂಸ್ಕೃತಿ ಎಂಬುದು ಬರೀ ಆಚರಣೆಗಳು ಹಿಂದಿನಿಂದ ನಡೆದುಕೊಂಡು ಬಂದವುದರ ಮೇಲೆ ಮಾತ್ರವೆ ಅವಲಂಬಿತವಾಗಿದೆಯೊ ಅಥವಾ ಭೌಗೂಳಿಕ ಲಕ್ಷಣ ಆಹಾರ ಪದ್ಧತಿಯು ಸೇರಿದೆಯೊ??

    ಉತ್ತರ

Leave a reply to ROOPA B RAO ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments