ನಯನ
– ಮೇಘ ಶ್ರೀಧರ್
ಕಣ್ಮುಚ್ಚಿ ಕಣ್ತೆರೆಯೆ ಹೀಗೊಂದು ಕವನ
ಬಚ್ಚಿಟ್ಟ ಭಾವಗಳ ಕನ್ನಡೀಕರಣ
ಪಲ್ಲವಿಸುವಾ ಮನಕೆ ಶಬ್ದಗಳ ಚರಣ
ಪದಗಳಲಿ ಪೋಣಿಸಿದ ಚಂದದಾಭಾರಣ
ಸಾಲುಸಾಲುಗಳಲ್ಲಿ ಸಾಲು ದೀಪದ ಬೆಳಕು
ನೂರೆಂಟು ಅರ್ಥಗಳು, ನೂರು ನೆನಪಿನ ಮೆಲುಕು
ಹೊಸ ಹೊಸತು ಬಿತ್ತರದ ಆಶಯವು ದಿನದಿನಕು
ಹೊಸ ಭಾವಲೋಕಗಳ ಪರಿಚಯವು ಮನಮನಕು
ಪಲ್ಲವಿಯ ಪಂಕ್ತಿಗಳ ಪದಪುಂಜ ಅಂದ
ಚರಣ ಚೆಲ್ಲುವ ಚೆಲುವ ಚೈತ್ರಗಳೇ ಚಂದ
ನೂರಾರು ಬಣ್ಣಗಳು ಕವನಗಳ ಸೊಗಸಿನಲಿ
ನವ್ಯತೆಯ ಆಗಸವು ಬೊಗಸೆಯಲ್ಲಿ!!





ಚೆನ್ನಾಗಿದೆ 🙂 :*
ಧನ್ಯವಾದಗಳು! 🙂
prasa padaglinda kudid nimma nayan kaviteya jalaku tumaa chennagide.
very nice lines
Thank you 🙂
ಕವನದ ಶೀರ್ಷಿಕೆ “ಕವನ-ನಯನ” !
OLLeya prayathna! Ninna prathi prayathnavu Dhruva Thaareyanthe minuguthiralee!