ವಿಷಯದ ವಿವರಗಳಿಗೆ ದಾಟಿರಿ

ಜನವರಿ 31, 2012

4

ನಿಲುಮೆ ಮಂಥನ

‍ನಿಲುಮೆ ಮೂಲಕ

-ತ್ರಿವೇಣಿ, ಮ್ಯೆಸೂರು

ನಿಲುಮೆಯ ಆತ್ಮೀಯ ಬೆಂಬಲಿಗರೇ,

ನಿಲುಮೆಯು ಸತತ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕನ್ನಡ ಸಾರಸತ್ವ ಲೋಕದಲ್ಲಿ  ಸತತವಾಗಿ ಲೇಖನ, ಕವನ, ಚರ್ಚೆ, ಪ್ರಚಲಿತ ವಿದ್ಯಮಾನ, ಸಂಸ್ಕೃತಿ, ಕನ್ನಡ, ಕರ್ನಾಟಕ, ಭಾರತ, ವಿಜ್ಣಾನ, ಕನ್ನಡಿಗರಿಗೆ ಉದ್ಯೋಗ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತ ಬರುತ್ತಲಿದೆ. ಇದಕ್ಕೆ ಬೆನ್ನುತಟ್ಟಲು ನಿಮ್ಮೆಲ್ಲರ ಬೆಂಬಲವಿಲ್ಲದೆ ಅದು ಸಾಧ್ಯವಾಗಿಯೂ ಇಲ್ಲ, ಅನ್ನೋದು ಮರೆತಿಲ್ಲ. ಅದೆಷ್ಟೊ ಲಕ್ಷ ಓದುಗರು ನಿಲುಮೆಯೊಂದಿಗೆ ಅವಿನಾನುಭಾವ ಸಂಬಂಧ ಬೆಸೆದುಕೊಂಡಿರುವರು. ಈ ಹಂತಕ್ಕೆ ನಿಲುಮೆ ಬೆಳೆದು ಬರಲು ಹಾದಿಯೇನು ಅಷ್ಟು ಸುಲಭವಾಗೇನು ಇರಲಿಲ್ಲ. ಮೊದಲಿಗೆ ಸ್ನೇಹಿತರ ಸಣ್ಣ ಗುಂಪೊಂದು ವರ್ಡ್ ಪ್ರೆಸ್ಸಿನಲ್ಲಿ ತನ್ನ ಖಾತೆಯನ್ನು ತೆರೆದಾಗ ಅರವಿಂದ್ ಎಂಬುವವರ ಮೊದಲ ಲೇಖನ ರಂಗೋಲಿ.. ಚಿತ್ತ ಚಿತ್ತಾರಗಳ ನಡುವೆ ಎಂಬ ಶೀರ್ಷಿಕೆಯೊಂದಿಗೆ ೫ನೇ ಅಕ್ಟೋಬರ್ ೨೦೧೦ ಪ್ರಕಟವಾಯ್ತು. ಅಸಲಿಗೆ ನಿಲುಮೆ ನಾನು ನೋಡಿದ್ದು, ರಂಗೋಲಿಗಳು ಎಂದು ಗೂಗಲಿನಲ್ಲಿ ಹುಡುಕಲು ಹೋದಾಗ ನಾನು ಹುಡುಕ ಹೊದದ್ದೇ ಒಂದು, ಸಿಕ್ಕಿದ್ದು ಮಾತ್ರ ಭರಪೂರ ರೋಮಾಂಚನ, ನಿಲುಮೆ ಹೆಸರು ಯಾಕೋ ಅಂದು ಬಹಳ ಇಷ್ಟವಾಗಿತ್ತು. ನಂತರ ದಿನಕ್ಕೊಂದರಂತೆ ಅತ್ಯುತ್ತಮ ಲೇಖನಗಳು ಬರತೊಡಗಿದಾಗ ಆ ಬ್ಲಾಗ್ ದಿನಕ್ಕೆ ಒಂದೆರಡು ಸಾರಿಯಾದರೂ ತೆರೆಯದೆ ಇರುವ ಮನಸ್ಸಾಗದೇ ಇರಲಿಲ್ಲ. ಆ ಲೇಖನಗಳ ಸ್ಪೂರ್ತಿಯಿಂದ ನನ್ನಲ್ಲು ಬರೆಯುವ ಅಮಿತ ಉತ್ಸಾಹವಿದ್ದರೂ ಬರೆದದ್ದೂ ಮಾತ್ರ ಈಗಲೇ, ನನ್ನಂತವಳಲ್ಲಿ ಲೇಖಕಿಯನ್ನು ಬೆಳೆಸಿದ ನಿಲುಮೆಗೆ ಅನಂತ ಧನ್ಯವಾದಗಳು. ನನ್ನ ನೆನಪಂತೆ ದಿನಕ್ಕೆ ಕೆಲವೇ ಕೆಲವು ಬೆಂಬಲಿಗರು ಬಂದು ನಿಲುಮೆಯ ಕದ ತಟ್ಟಿ ಹೋಗುತ್ತಿದ್ದರು. ಅಂದಿಗೆ ದಿನದ ಭೇಟಿಗಳು ಹೆಚ್ಚೆಂದರೆ ನೂರರ ಆಸುಪಾಸಿನಲ್ಲಿ ಓಡಾಡುತ್ತಿತ್ತು.

ನಂತರದ ದಿನದಲ್ಲಿ ನಿಲುಮೆ ತನ್ನದೇ ಆದ ಬೇರೆಲ್ಲೂ ಪ್ರಕಟವಾಗದ, ನವ ಉತ್ಸಾಹಿ ಲೇಖಕರ ಪ್ರೋತ್ಸಾಹದಿಂದ ದಿನಂಪ್ರತಿ ಅತಿ ಉತ್ತಮವಾದ, ಹೆಚ್ಛು ಬುದ್ಧಿಯನ್ನು ಚೂಪಾಗಿಸುವ, ಮತ್ತೆಲ್ಲೋ ಕಂಡು ಕೇಳರಿಯದ ಮನಕಲಕುವ, ಇನ್ನೆಲ್ಲೋ ನೋಡಿದ ತನ್ನದೇ ಅನುಭವದ, ಆದರಣೀಯದ, ರಾಜಕೀಯದ ಅತಿಮಾನುಷ ವಿಷಯ, ಅತಿಯಾದ ಪ್ರೀತಿಯನ್ನು ತೋರ್ಪಡಿಸುವ ಸಲುವಾದ ಪ್ರೀತಿಯಿಂದ ಅದೆಷ್ಟೋ ವಿಚಾರಗಳನ್ನು ಸದ್ದಿಲ್ಲದೇ ತನ್ನ ಗರ್ಭದೊಳಗೆ ಬರಹದ ಮೂಸೆಯಲ್ಲಿ ಪ್ರಕಟಿಸುತ್ತಾ ಹೋಗುತ್ತಿದೆ. ಇಷ್ಟೆಲ್ಲಾ ಪ್ರಯತ್ನಗಳ ನುಡುವೆಯೂ ನಿಲುಮೆಗೆ ಶತ್ರುಭಾದೆ ಇರದೇ ಇರಲಿಲ್ಲ. ನಿಲುಮೆಯ ಬೆಳವಣಿಗೆಯನ್ನು ಕೆಲ ಕನ್ನಡ ಪ್ರೇಮಿಗಳು ಸಹಿಸಲಾಗಲಿಲ್ಲ. ಅನಾಮಿಕ ಹೆಸರಿನಲ್ಲಿ ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸುತ್ತಾ, ಲೇಖನದ ವಿಚಾರ ಬಿಟ್ಟು ಲೇಖಕನನ್ನೇ ವ್ಯೆಯುಕ್ತಿಕ ನಿಂದನೆಗಳಿಂದ  ಹಿಂಸಿಸಲಾರಂಭಿಸಿದರು.

ದಿನಕಳೆದಂತೆ ನಿಲುಮೆ ಕನ್ನಡಿಗ ಓದುಗರ ಹೃದಯದಲ್ಲಿ ವಿರಾಜಮಾನವಾಗಿ, ಓದುಗರು ತಮ್ಮ ಬಿಡುವಿನ ವೇಳೆಯಲ್ಲಿ ನಿಲುಮೆಯ ಲೇಖನಗಳನ್ನು ಓದುತಾ, ತಪ್ಪು ಒಪ್ಪುಗಳ ಬಗ್ಗೆ ಚರ್ಚೆ ನಡೆಸುತಾ, ಒಂದಷ್ಟು ಸಮಾನ ಮನಸ್ಕರ ಸ್ನೇಹ ಸಂಪಾದಿಸುತಾ, ಬೆಳೆಯುತ್ತಿದೆ. ನಿಲುಮೆಯಲ್ಲಿ ‘ಅಕ್ಷರ ಕಡಿತಕ್ಕೆ ತಮಿಳು ಮಾದರಿ’ ಎಂಬ ಅಜ್ಜಕ್ಕಳ ಗಿರೀಶ್ ಭಟ್ಟರ ಲೇಖನ ಕನ್ನಡದ ಭಾಷ ಚಿಂತಕರಿಗೆ ಒಂದಷ್ಟು ಹೊಸ ವಿಚಾರಗಳನ್ನು ನೀಡುವುದರ ಜೊತೆಗೆ, ಕನ್ನಡಕ್ಕೆ ಯಾವ ರೀತಿಯ ಪ್ರೋತ್ಸಾಹ, ನಿರೀಕ್ಷೆಗಳು ಇದ್ದರೆ ಚೆನ್ನ, ಎಂಬ ಅಮೂಲ್ಯ ವಿಚಾರಗಳ ಪ್ರತಿಕ್ರಿಯೆಗಳು ಬರತೊಡಗಿದವು.

ನಿಲುಮೆಯಲ್ಲಿ ರಾಮಚಂದ್ರ ಪಿ, ಪ್ರೊ.ಬಿ.ಎ.ವಿವೇಕ ರೈ, ಡಾ.ಪಂಡಿತಾರಾಧ್ಯ, ರಮಾನಂದ ಐನಕ್ಯೆ, ಚಾಮರಾಜ ಸವಡಿ, ರಾಕೇಶ್ ಶೆಟ್ಟಿ, ಓಂ ಶಿವಪ್ರಕಾಶ್, ಅರೆಹೊಳೆ ಸದಾಶಿವರಾವ್, ರವಿ ಮುರ್ನಾಡ್, ಗೋವಿಂದ ರಾವ್ ಅಡಮನೆ, ರಾವ್ ಎವಿಜಿ, ವಸಂತ್ ಶೆಟ್ಟಿ, ಸಾತ್ವಿಕ್ ಎನ್.ವಿ , ಅರವಿಂದ್, ವಿಷ್ಣುಪ್ರಿಯ, ರೂಪ ರಾಜೀವ್, ರೂಪ ರಾವ್, ರಶ್ಮಿ ಕಾಸರಗೋಡು, ಅತ್ರಾಡಿ ಸುರೇಶ ಹೆಗ್ಡೆ, ಸುಪ್ರೀತ್, ಕರುಣಾಕರ ಬಳ್ಕೂರು, ಅರುಣ್ ಜಾವಗಲ್, ಮಹೇಶ್ ನೀರ್ಕಜೆ, ವಿಜಯ್ ಹೆರಗು, ಸವಿತಾ ಎಸ್.ಆರ್., ಚಿತ್ರಾ ಸಂತೋಷ್, ಸೌಮ್ಯ ಭಾಗವತ್, ಶಂಶೀರ್ ಬುಡೋಳಿ, ಶಶಾಂಕ್, ಪ್ರಶಸ್ತಿ, ಪವನ್ ಪಾರುಪತ್ತೆದಾರ್, ಪವನ್ ಎಂ.ಟಿ, ಜಗನ್ನಾಥ ಶಿರ್ಲಾಲ್, ಕೋಮಲ್, ಮಹೇಶ್ ಎಂ.ಆರ್, ವಾಣಿಶೆಟ್ಟಿ  ಕುಂದಾಪುರ …. ಇನ್ನು ಹಲವು ಹಿರಿಕಿರಿಯಾದಿ ಸ್ನೇಹಿತರೆಲ್ಲ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ನಿಲುಮೆಯಲ್ಲಿ ಪ್ರತಿಕ್ರಿಯೆಗಳ ಭರಾಟೆಯೇನೂ ಕಮ್ಮಿಯಿರಲಿಲ್ಲ. ಓದುಗರು ತಮ್ಮ ವಿಚಾರಗಳನ್ನು ಅನುಭವಗಳನ್ನು ಲೇಖನದಲ್ಲಿ ತಪ್ಪಾದ ಸಾಲುಗಳನ್ನು ಬಹಳ ಮುದ್ದಿನಿಂದ ತಿದ್ದಿ, ಲೇಖಕರ ಹಾಗೂ ನಿಲುಮೆಯ ಘನತೆಯನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ನನಗೆ ತಿಳಿದಂತೆ ಅತಿಹೆಚ್ಚು ಪ್ರತಿಕ್ರಿಯೆಗಳು ಮಾಯ್ಸ ಎಂಬ ಒಬ್ಬ ಓದುಗರಿಂದ ಬಂದದ್ದು, ಅವರ ವಿಚಾರ ಲಹರಿಗಳು ನನ್ನಲ್ಲಿ ಕೆಲವು ಹೊಸ ವಿಚಾರಗಳನ್ನು ತುಂಬುತ್ತಿದ್ದರೆ, ಮತ್ತೊಂದೆಡೆ ಗೊಂದಲವನ್ನು ಈಡುಮಾಡಿದ್ದು ಸುಳ್ಳಲ್ಲ. ಇವರೆಲ್ಲರ ಸ್ಪಂದನೆ, ಕ್ರಿಯಾಸ್ಫೂರ್ತಿ ಸದಾ ಹೀಗೆ ಮುಂದುವರೆಯಲಿ.

ನಾನಂದು ಬೆಳ್ಳಂಬೆಳಿಗ್ಗೆ ನಿಲುಮೆ ಕದ ತೆರೆದಾಗ ವರ್ಡ್ ಪ್ರೆಸ್ಸಿನ ಬದಲು ನಿಲುಮೆ.ನೆಟ್ ಎಂಬ ಹೆಸರಿನಡಿ ಪ್ರಕಟಗೊಂಡಿತ್ತು. ಜನವರಿ ೧೮ರ ಶುಭ ಉತ್ತರಾಯಣ ಪುಣ್ಯಕಾಲದಲ್ಲಿ ನಿಲುಮೆ.ನೆಟ್  ಆಗಿ ಪರಿವರ್ತೆನೆಗೊಂಡಿತು. ಅದುವರೆಗೆ ವರ್ಡ್ ಪ್ರೆಸ್ಸಿನಲ್ಲಿ ಪ್ರಕಟಗೊಳ್ಳುತ್ತಿದ್ದ ಲೇಖನಗಳು, ನವನವೀನ ಶ್ಯೆಲಿಯಲ್ಲಿ ಓದುಗರ ಮುಂದೆ ಮುದ್ದಾಗಿ ಕಾಣಸಿಗುತ್ತಿದೆ. ಇಷ್ಟೆಲ್ಲಾ ಹೆಜ್ಜೆಗಳ ಹಿಂದೆ ಇರುವ ಆ ಉತ್ಸಾಹಿ ಗೆಳೆಯರಿಗೆ ಶುಭಾಶಯಗಳು. ಮತ್ತು ಕನ್ನಡ ಬ್ಲಾಗ್ ಲೋಕಕ್ಕೆ ಅತ್ಯುತ್ತಮ ಲೇಖನಗಳನ್ನು, ವಿಷಯಗಳನ್ನು, ಬುದ್ದಿಮತ್ತೆಯನ್ನು ಹುರಿದುಂಬಿಸಿದ ಎಲ್ಲ ಸಹೃದಯರಿಗೂ ಅನಂತ ನಮಸ್ಕಾರಗಳು.

ನಿಲುಮೆ ಶುರುವಾದಾಗಲಿಂದಲೂ ತನ್ನ ಅಡಿಬರಹ ‘ಎಲ್ಲ ತತ್ವದ ಎಲ್ಲೆ ಮೀರಿ’ ಎಂಬ ತತ್ವದಡಿಯಲ್ಲೇ ಬೆಳೆದು ನಿಂತಿದೆ. ಕೆಲ ಕನ್ನಡ ಪರರಂತೆ ಕಾಣುವ ಕನ್ನಡ ವಿರೋಧಿಗಳು ಅದನ್ನು ಹಾಳುಮಾಡುವದಕ್ಕೆ ಇಲ್ಲಸಲ್ಲದ ವಿಚಿತ್ರ ಬುದ್ಧಿಯನ್ನು ಉಪಯೋಗಿಸಿದ್ದರು. ಅದ್ಯಾವುದರ ಅಳುಕು ಅಂಜಿಕೆಯಿಲ್ಲದೆ ನಿಲುಮೆ ಇಂದು ಎಲ್ಲರ ಮುಂದು ಹೆಮ್ಮೆಯಿಂದ ವಿಜೃಂಭಿಸುತಲಿದೆ. ಇಷ್ಟಕ್ಕೂ ನಿಲುಮೆಯನ್ನು ನಿರ್ವಹಿಸುತಿರುವವರಾರು ಎಂದು ನನಗಂತೂ ತಿಳಿದಿಲ್ಲ. ಹೆಸರಿನ ಹಿಂದೆ ಬೀಳದೆ ತಮ್ಮಷ್ಟಕಕೆ ತಾವು ಅತ್ಯುತ್ತಮ ಕೊಡುಗೆಗಳನ್ನು ನೀಡಿತ್ತಿರುವ ಆ ನನ್ನ ಸ್ನೇಹಿತರಿಗೆ ನಾನು ಕೇಳುವಿದಿಷ್ಟೆ. ಇನ್ನು ಸಾಕು ಎಲೆ ಮರೆಯ ಕಾಯಂತೆ ನೀವಿರುವುದು. ದಯಮಾಡಿ ನಿಮ್ಮ ಸ್ನೇಹಿತೆಯ ಕೋರಿಕೆಯನ್ನು ಪುರಸ್ಕರಿಸಿ, ತಾವೆಲ್ಲರೂ ಮುಂದೆ ಬನ್ನಿ. ನಾನು ಯಾಕಿಷ್ಟು ಕಳಕಳಿಯಿಂದ ಕೇಳುತಿರುವೆನೆಂದರೆ ನಾನು ಕಳೆದ ನಾಲ್ಕು ವರ್ಷಗಳಿಂದ ಕನ್ನಡದ ಹಲವು ಬ್ಲಾಗುಗಳನ್ನು ನೋಡಿದ್ದೇನೆ. ಅದೆಂಥದೋ ರಾಜಕೀಯ, ಮತ್ಯಾರೋ ಬರೆದದ್ದು, ಇನ್ಯಾರೋ ನಡೆಸಿಕೊಟ್ಟ ಕಾರ್ಯಕ್ರಮದ ಕ್ರೆಡಿಟ್ಟುಗಳನ್ನು ತಮ್ಮದೆಂದೆ ಹೇಳಿಕೊಂಡು ಓಡಾಡುತಿರುವರು. ಛೆ!!!! ಹಾಳಾಗಿ ಹೋಗ್ಲಿ ಬಿಡಿ, ಅವರ ಸುದ್ದಿ ಮಾತಾಡಿ ನಾನ್ಯಾಕೆ ನನ್ನನ್ನು ಕೆಳಗಿಳಿಸಿಕೊಳ್ಳಲಿ, ಮತ್ತೊಮ್ಮೆ, ನಿಲುಮೆಯ ನಿರ್ವಾಹಕರೆ ದಯಮಾಡಿ ನಿಮ್ಮಗಳ ಹೆಸರನ್ನು ತಿಳಿಸಿಕೊಡಿ. ನಿಮ್ಮ ಸ್ನೇಹಿತೆಯ ಮನವಿ ಪುರಸ್ಕರಿಸಿ.

ನಿಲುಮೆ ಇನ್ನು ಹೆಚ್ಚು ಬೆಳೆಯಲಿ. ಕನ್ನಡಿಗರ ಮನೆಮಾತಾಗಲಿ. ಯುವಶಕ್ತಿಗಳ ತಂಡಕ್ಕೆ ಮತ್ತೊಮ್ಮೆ ಕೋಟಿ ನಮನಗಳು .

ನಿಲುಮೆ ಬಳಗದ ವಿಚಾರಗಳನ್ನು ನೀವು ಇಲ್ಲಿಯೂ ಸಹ ಕಾಣಬಹುದು.

೧.ನಿಲುಮೆ ಫೇಸ್ ಬುಕ್ ಪೇಜ್

೪. ಭ್ರಷ್ಟಾಚಾರ ವಿರೋಧಿ ಅಣ್ಣಾ ಹಜಾರೆ ಬೆಂಬಲಿಗರ ಸಮೂಹ
ಇನ್ನೂ ಹಲವು….
* * * * * * * * * * *
ಚಿತ್ರಕೃಪೆ : ನಿಲುಮೆ ಬಳಗ
4 ಟಿಪ್ಪಣಿಗಳು Post a comment
  1. Arehole's avatar
    ಜನ 31 2012

    We are with you

    ಉತ್ತರ
  2. pavan's avatar
    pavan
    ಜನ 31 2012

    ನಮ್ಮೆಲ್ಲರ ಬೆಂಬಲ ಸದಾ ನಿಲುಮೆ ಜೊತೆಗಿರಲಿ.

    ಉತ್ತರ
  3. ಸತ್ಯಚರಣ ಎಸ್. ಎಮ್. (Sathya Charana S.M.)'s avatar
    ಜನ 31 2012

    ತ್ರಿವೇಣಿಯವರೇ.. ಸಕ್ಕತ್ತಾಗಿದೆ.. ನಿಮ್ಮ ಬರಹ..!
    ನಿಲುಮೆ ಬಗ್ಗೆ ನಿಲುಮೆಯಲ್ಲಿ, ನಿರ್ವಾಹಕರೆ, ನಿಮ್ಮ ಬಗ್ಗೆ ಹೇಳ್ರೀ ಅಂತಾ ಕೇಳಿಕೊಳ್ಳುತ್ತಾ ಬರೆಯುತ್ತಾ, ನಿಲುಮೆ ಸಾಗಿ ಬಂದ ವಿವರಣೆ.. ವಾವ್..!
    ನಾನು ಯಾವತ್ತಿಂದ ನಿಲುಮೆ ನೋಡ್ತಾ ಬಂದೆ ಅಂತಾ ನಿಜವಾಗಿಯೂ, ನನಗೂ ನೆನಪಿಲ್ಲ..! ಆದರೆ, ನೀವೆಂದಂತೆ, ನಾನೂ ನಿಲುಮೆಯ ಹಲವು ಲೇಖನಗಳನ್ನ ಓದುತ್ತಾ ಬಂದಿದ್ದೇನೆ..! ಅದರ ಬೆಳವಣಿಗೆ, ಒಂದು ಸಂತೋಷ ತಂದಿದೆ. ಕನ್ನಡ ಅಂತರ್ಜಾಲ ಸಮುದಾಯ ಬೆಳವಣಿಗೆಯಲ್ಲಿ ಇದರ ಪಾತ್ರ ಮುಂದೊಂದು ದಿನ ಮಹತ್ತರ ಆಗಬಹುದು. ಇತ್ತೀಚಿನ ಹಲ ಬೆಳವಣಿಗೆಗಳನ್ನ ಗಮನಿಸಿದಾಗ, ನಿಲುಮೆ, ಹಲವು ಆಶೋತ್ತರಗಳನ್ನ ಇಟ್ಟುಕೊಂಡು ಮುಂದುವರೆಯುತ್ತಿರುವುದು, ನಿಚ್ಛಳ ವಿಚಾರ.
    ,
    ನಿರ್ವಾಹಕರು, “ಕೇವಲ (ನಿಮ್ಮಂತ ಹಲವು) ಲೇಖಕರ ಬರಹಗಳನ್ನ ಪ್ರಕಟಿಸುವ ಕೆಲಸವನ್ನಷ್ಟೆ ಮಾಡುತ್ತಿರುವೆವು, ಅದಕ್ಕೆ ಹೆಸರಿನ ಅಗತ್ಯ ಇಲ್ಲ, ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು.” ಅಂತ ಹೇಳುತ್ತಾ, ಈ ಮೂಲಕ, ನಿರ್ವಾಹಕರ ಆವರಣ ತೆರೆಯಲು ಒತ್ತಾಯಿಸಬೇಡಿ. ನಮ್ಮ ಈ ಉದ್ದೇಶಗಳಿಗೆ ಭಂಗ ಬಾರದಿರಲಿ ಅಂತ ನಮ್ಮಲ್ಲಿ ಕೇಳಿಕೊಳ್ಳುತ್ತಿದ್ದಾರಾ ಅಂತೆನಿಸಿ, ನನಗೂ ಇದ್ದ ಈ ನಿರ್ವಾಹಕರ ಬಗೆಗಿನ ಕುತೂಹಲ, ನಾನಾಗಿ ತಣ್ಣಗೆ ಮಾಡಿಕೊಂಡದ್ದು ಇತ್ತೀಚೆಗೆ, ನಿಲುಮೆಯ ಮುಖಪುಟದಲ್ಲಿ, ನಿರ್ವಾಹಕರ ಬಗ್ಗೆ ನಿಲುಮೆ, ತನ್ನ ನಿಲುವನ್ನ ಪ್ರಕಟ ಮಾಡಿಕೊಂಡಾಗ.

    ನಿಲುಮೆಗೆ ಈ ಮೂಲಕ ನಾನು ಶುಭ ಕೋರುವೆ. ನಿರ್ವಾಹಕರು ಯಾರೂ ಅಂತ ತಿಳಿಸದೇ ಹೋದರೂ, ನಮ್ಮೆಲ್ಲರ ಬೆಂಬಲ ನಿಲುಮೆಗೆ ಇದೆ. ಸಾಧ್ಯವಾದರೆ ತಿಳಿಸಿ. ನಾವುಗಳು ಏನು ಮಾಡಬಹುದು, ನಮ್ಮಿಂದ ಎನು ಅಪೇಕ್ಷಿಸಬಹುದು ನಿಲುಮೆ ಅನ್ನೋದನ್ನ ಕೂಡ ತಿಳಿಸಿ, ಅಂತ, ನಿಲುಮೆ ಟೀಮ್‌ಗೆ ಕೇಳಿಕೊಳ್ಳುವೆ.

    ನಿಮ್ಮೊಲವಿನ,
    ಸತ್ಯ.. 🙂

    ಉತ್ತರ
  4. ಪುಷ್ಪರಾಜ್ ಚೌಟ's avatar
    ಜನ 31 2012

    ನಿಮ್ಮ ಬರಹದ ಕಡೆಗೋಲಿನಲಿ ಮಥಿಸಿದ ಪರಿ ಚೆನ್ನಾಗಿದೆ. ಎಲ್ಲ ತತ್ವದ ಎಲ್ಲೆ ಮೀರಿದ ನಿಲುಮೆಯೊಳಗೆ ಮತ್ತಷ್ಟು ಬರಹಗಳ ಬೆಣ್ಣೆ ಬರಲಿ ಎಂಬುದು ನಮ್ಮ ಆಶಯ ಕೂಡ. ಶುಭವಾಗಲಿ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments