ವಿಷಯದ ವಿವರಗಳಿಗೆ ದಾಟಿರಿ

ಜನವರಿ 9, 2012

86

ಸಂಸ್ಕೃತಿ ಸಂಕಥನ – 17 ಜಾತಿ, ರಿಲಿಜನ್ ಹಾಗೂ ಸೆಕ್ಯುಲರಿಸಂ ಭಗವದ್ಗೀತೆ ವಿವಾದ

‍parupattedara ಮೂಲಕ

-ರಮಾನಂದ ಐನಕೈ

ಕೇವಲ ಭಗವದ್ಗೀತೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರ ದಾಯಗಳಿಗೆ ಸಂಬಂಧಪಟ್ಟಂತೆ ಅನೇಕ ಸಂಗತಿ ಗಳು ವಿವಾದಕ್ಕೆ ಕಾರಣವಾಗುತ್ತಿವೆ. ಹಾಗೂ ಇವೆಲ್ಲ ರಾಜಕೀಯ ಸ್ವರೂಪ ಪಡೆದು ಸೆಕ್ಯುಲರ್ ಪ್ರಭುತ್ವ ಸಂದಿಗ್ಧದಲ್ಲಿ ಸಿಲುಕುವಂತಾಗುತ್ತಿದೆ. ಹಾಗಾದರೆ ಈ ದೇಶದಲ್ಲಿ ಏನು ನಡೆಯುತ್ತಿದೆ?

ಭಗವದ್ಗೀತೆ ವಿವಾದಕ್ಕೆ ಸಂಬಂಧಪಟ್ಟಂತೆ ಪತ್ರಿಕೆಗಳಲ್ಲಿ ದಿನನಿತ್ಯ ಹೇಳಿಕೆಗಳು ಬರುತ್ತಲಿವೆ. ಈ ಕುರಿತು ಒಂದು ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅಂದರೆ ಭಾರತೀಯ ಸಂಸ್ಕೃತಿಯ ಕುರಿತಾದ ಪರಸ್ಪರ ತಪ್ಪು ತಿಳುವಳಿಕೆ ಗಾಗಿ ಭಗವದ್ಗೀತೆಯನ್ನು ಬಹಿರಂಗವಾಗಿ ಹರಾಜಿಗೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಗೀತೆಯಿಂದ ಶೂದ್ರರಿಗೆ ಹಾಗೂ ದಲಿತರಿಗೆ ಭಾರೀ ಅಪಾಯವಿದೆ ಎಂದು ಭಯ ಹುಟ್ಟಿಸಲು ಪ್ರಯತ್ನಿ ಸುತ್ತಿದ್ದಾರೆ. ಇಲ್ಲಿ ಒಂದನ್ನು ಗಮನಿಸಬೇಕು. ಇವೆಲ್ಲ ಸಾಮಾನ್ಯ ಜನರ ಅಥವಾ ಸಮೂಹದ ಅಭಿಪ್ರಾಯಗಳಲ್ಲ. ಆಯಾ ಸಮುದಾಯದ ವಕ್ತಾರರು ಅಥವಾ ಚಿಂತಕರೆನಿಸಿಕೊಂಡವರು ಮಾಧ್ಯಮಗಳ ಮೂಲಕ ಈ ರೀತಿ ಧರ್ಮಯುದ್ಧ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಪರಿಸ್ಥಿತಿ. ಈ ಪರಿ ಅರೆಬರೆ ಚಿಂತಕರನ್ನು ನೋಡಿದರೆ ಒಂದು ದಿನ ದೇವರ ವಿಗ್ರಹಗಳನ್ನು ಕಿತ್ತು ಕೈಯಲ್ಲಿ ಆಯುಧ ವಾಗಿ ಹಿಡಿದು ಹೊಡೆದುಕೊಂಡರೆ ಅಚ್ಚರಿಯೇ ನಿಲ್ಲ.

ಈ ಪರಿಸ್ಥಿತಿಗೆ ಮುಖ್ಯ ಕಾರಣವೆಂದರೆ ಭಾರತೀಯ ಸಂಸ್ಕೃತಿಯನ್ನು ರಿಲಿಜನ್ ಎಂದು ವ್ಯಾಖ್ಯಾನಿಸಿಕೊಳ್ಳುತ್ತಿರುವುದು. ಯುರೋಪಿ ಯನ್ನರು ಇಡೀ ಭಾರತೀಯ ಸಂಸ್ಕೃತಿಯನ್ನು ಸೇರಿಸಿ ಹಿಂದೂಯಿಸಂ ಎಂದು ಕರೆದು ಅದಕ್ಕೆ ರಿಲಿ ಜನ್ನಿನ ಲಕ್ಷಣ ಸೇರಿಸಲು ಪ್ರಯತ್ನಿಸಿದರು. ಆದ್ದರಿಂದಲೇ ನಾವಿಂದು ಹಿಂದೂಯಿಸಂ ಅಂದರೆ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿ ಇದ್ದಹಾಗೆ ಒಂದು ಅಖಂಡವಾದ ರಿಲಿಜನ್ ಎಂದು ತಿಳಿದುಕೊಂಡಿ ದ್ದೇವೆ. ಹಾಗಾಗಿ ಹಿಂದೂ ಸಂಪ್ರದಾಯಗಳನ್ನೆಲ್ಲ ರಿಲೀಜಿಯಸ್ ಚಟುವಟಿಕೆಯೆಂಬಂತೆ ಅತ್ಯಂತ ಗುಮಾನಿಯಿಂದ ನೋಡಲಾಗುತ್ತದೆ. ರಿಲಿಜೀ ಯಸ್ ಚಟುವಟಿಕೆಗಳ ಸಾರ್ವಜನೀಕರಣವನ್ನು ಸೆಕ್ಯುಲರ್ ನೀತಿ ಒಪ್ಪುವುದಿಲ್ಲ. ಅದಕ್ಕಾಗಿ ಎಡ ಪಂಥೀಯ ಚಿಂತಕರಿಗೆ ಇಂಥ ಸಾಂಪ್ರದಾಯಿಕ ಆಚರಣೆಗಳೆಲ್ಲ ನಿಷಿದ್ಧ ಹಾಗೂ ಮೌಢ್ಯ.

ಇನ್ನು ಬಲಪಂಥೀಯರನ್ನು ಗಮನಿಸಿದರೆ ಅವರೂ ಕೂಡಾ ಇದಕ್ಕೆ ವ್ಯತಿರಿಕ್ತವಾಗೇನಿಲ್ಲ. ಅವರೂ ಕೂಡ ಹಿಂದೂಯಿಸಂ ಅನ್ನು ರಿಲಿಜನ್ ಎಂದೇ ನಂಬಿದ್ದಾರೆ. ಹಾಗಾಗಿಯೇ ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗೆ ಪ್ರತಿಸ್ಪರ್ಧಿಯಾಗಿ ವ್ಯವ ಹರಿಸಲು ಪ್ರಯತ್ನಿಸುತ್ತಾರೆ. ಬಾಯಲ್ಲಿ ಧರ್ಮ, ಸಂಸ್ಕೃತಿ ಎಂದರೂ ಅಂತರಂಗದಲ್ಲಿ ನಮ್ಮದೂ ಒಂದು ಅತೀ ದೊಡ್ಡ ರಿಲಿಜನ್ ಎಂಬ ನಂಬಿಕೆ ಇದೆ. ಅಖಂಡ ಭಾರತವನ್ನು ಹಿಂದೂಯಿಸಂನ ಚೌಕಟ್ಟಿನಲ್ಲಿ ತರಬೇಕೆಂಬುದು ಅವರ ಪ್ರಯತ್ನ. ಒಂದು ಸಂಸ್ಕೃತಿಯನ್ನು ರಿಲಿಜನ್ ಎಂದು ನಂಬಿ ದಾಗ ಮಾತ್ರ ಇನ್ನೊಂದನ್ನು ನಿರಾಕರಿಸುವ ಹಾಗೂ ದ್ವೇಷಿಸುವ ಅನಿವಾರ್ಯತೆ ಎದುರಾಗುತ್ತದೆ. ಭಾರತದಲ್ಲಿ ಆಂತರಿಕವಾಗಿ ನಡೆಯುತ್ತಿದ್ದುದು ಇಂಥ ಸಂಘರ್ಷ.

ಮೇಲಿನ ಎರಡೂ ಪಂಗಡಗಳ ತಿಳುವಳಿಕೆಯ ದೃಷ್ಟಿಯಿಂದ ನೋಡಿದಾಗ ಯಾರದೂ ತಪ್ಪಿಲ್ಲ. ಆದರೆ ಇಂಥ ತಿಳುವಳಿಕೆಗಳೇ ತಪ್ಪು ತಿಳುವಳಿಕೆಗಳು ಎಂಬುದು ಬಾಲಗಂಗಾಧರರ ವಾದ. ಹಿಂದೂ ಯಿಸಂ ಅನ್ನುವುದು ರಿಲಿಜನ್ನೇ ಆಗಿದ್ದರೆ ನಾವು ಈ ರೀತಿಯ ಸಮಸ್ಯೆಯನ್ನೇ ಎದುರಿಸುತ್ತಿರಲಿಲ್ಲ. ಆದರೆ ಇದು ರಿಲಿಜನ್ನೇ ಅಲ್ಲದ ಸಂಸ್ಕೃತಿ. ಅದನ್ನು ಅರಿತುಕೊಂಡರೆ ಮಾತ್ರ ದೇಶಕ್ಕೆ ನೆಮ್ಮದಿ.

ಭಗವದ್ಗೀತೆಯ ವಿವಾದ ಶುರುವಾಗುವುದು ಇದನ್ನು ಹಿಂದೂ ರಿಲಿಜನ್ನಿನ ಧರ್ಮಗ್ರಂಥ ಎಂದು ತಿಳಿದುಕೊಳ್ಳುವುದರಿಂದ. ಈ ಧರ್ಮಗ್ರಂಥ ಅನ್ನುವ ಪರಿಕಲ್ಪನೆ ಅರಳಿದ್ದೇ ಹಿಂದೂ ಧರ್ಮ ವನ್ನು ಹಿಂದೂ ರಿಲಿಜನ್ ಎಂದು ತಿಳಿದುಕೊಂಡದ್ದ ರಿಂದ. ಸ್ಕ್ರಿಪ್ಚರ್ ಅಥವಾ ದೈವವಾಣಿ ರಿಲಿಜನ್ನಿನ ಅನಿವಾರ್ಯ ಅಂಗ. ಅಂದರೆ ಬೈಬಲ್ ಹಾಗೂ ಕುರಾನ್ಗಳು. ಆದರೆ ಭಗವದ್ಗೀತೆ ಹಿಂದೂಯಿಸಂನ ದೈವವಾಣಿಯಲ್ಲ. ಹಿಂದೂ ಧರ್ಮದ ಧರ್ಮ ಗ್ರಂಥ ಯಾವುದೆಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ. ರಾಷ್ಟ್ರಿಯ ಯುಗದ ಚಿಂತಕರು ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಯಂತೆ ಒಂದು ರಿಲಿಜನ್ ಹಾಗೂ ಭಗವದ್ಗೀತೆ ಅದರ ಧರ್ಮಗ್ರಂಥ ಎಂದು ನಂಬಿ ದ್ದರು. ಆದರೆ ಭಗವ ದ್ಗೀತೆಯ ಸ್ವರೂಪ ಹಾಗೂ ವಿಷಯ ಗಳು ಬೈಬಲ್ ಹಾಗೂ ಕುರಾನ್ಗಳಂತಿಲ್ಲ ಎಂಬುದು ಮೇಲ್ನೋ ಟಕ್ಕೆ ತಿಳಿಯುತ್ತದೆ. ಅಷ್ಟೇ ಅಲ್ಲ, ಹಿಂದುಗಳೆನ್ನುವ ವರು ಧರ್ಮ ಗ್ರಂಥಗಳನ್ನು ರಿಲೀಜಿಯಸ್ ಸ್ಕ್ರಿಪ್ಚರ್ಗಿಂತ ಬೇರೆಯದೇ ಆದ ಕಲ್ಪನೆ ಯಲ್ಲಿ ನೋಡು ತ್ತಾರೆ. ಹಿಂದೂ ಗಳ ಪ್ರಕಾರ ಧರ್ಮ ಗ್ರಂಥ ಗಳು ಅಧ್ಯಾತ್ಮ ಸಾಧನೆ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗ ಗಳನ್ನು ತಿಳಿಸುತ್ತವೆ. ಕುರಾನ್ ಹಾಗೂ ಬೈಬಲ್ ಗಳು ಇಂಥದೇ ಧರ್ಮಗ್ರಂಥ ಗಳೆಂದು ನಾವು ತಿಳಿದಿದ್ದರಿಂದ ಎಲ್ಲ ಧರ್ಮಗ್ರಂಥಗಳಲ್ಲೂ ಜೀವನಕ್ಕೆ ಬೇಕಾದ ತತ್ವಗಳಿವೆ ಎಂದು ನಂಬುತ್ತೇವೆ. ಹೀಗೆ ಭಾರತದಲ್ಲಿ ಧರ್ಮ ಗ್ರಂಥಗಳ ಓದುವಿಕೆಗೆ ಬೇರೆಯದೇ ಮಹತ್ವ ಇದೆ. ಹೀಗಿದ್ದಾಗ ಚಿಂತ ಕರೆಲ್ಲ ಗೀತೆಯ ಸುತ್ತ ಗಿರಕಿ ಹೊಡೆ ಯುವುದು ಹಾಸ್ಯಾಸ್ಪದ ಅನಿ ಸುತ್ತಿದೆ.

ಭಗವದ್ಗೀತೆ ಪೇಚಿಗೆ ಸಿಲುಕಲು ಇನ್ನೊಂದು ಕಾರಣವೆಂದರೆ ನಮ್ಮ ಪ್ರಭುತ್ವ ಅಳ ವಡಿಸಿಕೊಂಡ ಸೆಕ್ಯುಲರ್ ನೀತಿ. ಭಾರತೀಯ ಪ್ರಭುತ್ವ ಕೂಡಾ ಹಿಂದೂಯಿಸಂನ್ನು ರಿಲಿಜನ್ ಎಂದೇ ಗ್ರಹಿಸಿದೆ. ಆದ್ದ ರಿಂದ ಪ್ರಭುತ್ವಕ್ಕೆ ಭಗವದ್ಗೀತೆ ರಿಲೀ ಜಿಯಸ್ ಸ್ಕ್ರಿಪ್ಚರ್ ಆಗಿ ಕಾಣುತ್ತದೆ. ಒಂದು ರಿಲೀಜಿ ಯಸ್ ಸ್ಕ್ರಿಪ್ಚರ್ ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವುದು. ಅದೇ ವೇಳೆಯಲ್ಲಿ ಅನ್ಯ ರಿಲಿಜನ್ನುಗಳನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮಾನವಾಗುತ್ತದೆ. ಆದ್ದರಿಂದ ಒಂದು ರಿಲೀಜಿಯಸ್ ಗ್ರಂಥವನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿ ದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗಿರುತ್ತದೆ. ಆದರೆ ಭಾರತದಲ್ಲಿ ರಿಲಿಜನ್ನೇ ಇಲ್ಲ. ಆದ್ದರಿಂದ ರಿಲೀಜಿಯಸ್ ಸ್ಕ್ರಿಪ್ಚರ್ ಕೂಡಾ ಇರಲು ಸಾಧ್ಯವಿಲ್ಲ. ಇಲ್ಲಿ ಅನ್ಯಧರ್ಮೀಯರು ಯಾರು? ಭಗವದ್ಗೀತೆ ಯನ್ನು ವಿರೋಧಿಸುತ್ತಿರುವವರು ಯಾರು? ಹಿಂದೂಯಿಸಂ ಅಂದರೆ ಒಂದು ರಿಲಿಜನ್ ಹಾಗೂ ಭಗವದ್ಗೀತೆ ಕಲಿಕೆ ಒಂದು ಸೆಕ್ಯುಲರ್ ಸಮಸ್ಯೆಯೆಂ ಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಈ ವಿವಾದ ದೊಡ್ಡದಾದದ್ದು.

ಇತಿಹಾಸದ ಬೇರೆ ಬೇರೆ ಸಂದರ್ಭದಲ್ಲಿ ಹೇಗೆ ಭಗವ ದ್ಗೀತೆ ಕೂಡಾ ಬೇರೆ ಬೇರೆ ರೀತಿಯಲ್ಲಿ ಗ್ರಹಿಸಲ್ಪ ಡುತ್ತಾ ಬಂತೆಂಬು ದನ್ನು ಶಿವಮೊಗ್ಗ ಸ್ಥಳೀಯ ಸಂಸ್ಕೃತಿ ಗಳ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ರಾಜಾ ರಾಮ ಹೆಗಡೆ ಯವರು ಸ್ವಾರಸ್ಯಕರವಾಗಿ ಗುರುತಿಸುತ್ತಾರೆ.

ರಾಷ್ಟ್ರಿಯತಾ ಹೋರಾಟದ ಯುಗದಲ್ಲಿ ಜಾತಿ ಶೋಷಣೆ ಯನ್ನು ಬೋಧಿಸುತ್ತದೆ ಎಂಬ ಪಟ್ಟಿ ಯನ್ನು ಮನು ಸ್ಮೃತಿಗೆ ನೀಡಲಾಗಿತ್ತು. ಆಗ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ಪರಿ ಗಣಿಸಲಾಗಿತ್ತು. ಏಕೆಂದರೆ ಭಗವ ದ್ಗೀತೆಯು ವೈಯಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಂಸಾರಿ ಗಳು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥ ಪೂರ್ಣವಾಗಿತ್ತು. ವಿಪರ್ಯಾಸವೆಂದರೆ ಹನ್ನೆರಡನೇ ಶತ ಮಾನದಲ್ಲಿ ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳವಳಿ ಯೆಂಬು ದಾಗಿ ಗುರುತಿಸಿ ಕೊಂಡ ವೈಷ್ಣವ ಭಕ್ತಿಮಾರ್ಗವು ಭಗವ ದ್ಗೀತೆಗೆ ಆದ್ಯಸ್ಥಾನ ವನ್ನು ನೀಡಿತ್ತು.

ಇಪ್ಪತ್ತನೇ ಶತ ಮಾನದ ಆರಂಭ ದಲ್ಲಿ ಭಗವದ್ಗೀ ತೆಯು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯ ರೂಪಿತವಾಯಿತು. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದ ರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಮಹಾತ್ಮಾ ಗಾಂಧಿಯವರು ತಮ್ಮ ಅಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಪೂರ್ತಿಯನ್ನು ಪಡೆದವರು. ಅವರ ರಾಜಕೀಯದಲ್ಲಿ ಭಗವ ದ್ಗೀತೆಯೂ ಚರಕದಂತೇ ಮಾನ್ಯತೆ ಪಡೆಯಿತೇ ವಿನಾ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಿಲ್ಲ. ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರು ಕೂಡ ಭಗವದ್ಗೀತೆಯನ್ನು ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಅಂದರೆ ಈ ಯಾವುದೇ ಸಂದರ್ಭ ಗಳಲ್ಲಿಯೂ ಭಗವದ್ಗೀತೆ ಜಾತಿ ಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ. ಈಗ ಭಗವದ್ದೀತೆಗೆ ಈ ಹೊಸ ಪಟ್ಟವನ್ನು ಕೊಡುತ್ತಿದ್ದಾರೆಂಬುದು ರಾಜಾರಾಮ ಹೆಗಡೆಯವರ ಅಭಿಪ್ರಾಯ.

ಇದರ ಹಿಂದೆ ಅನೇಕ ತಪ್ಪು ಕಲ್ಪನೆಗಳು ಕೆಲಸ ಮಾಡುತ್ತಲಿವೆ. ಧರ್ಮವನ್ನು ರಿಲಿಜನ್ ಎಂಬು ದಾಗಿ ಭಾವಿಸಿದ್ದು, ಭಾರತದಲ್ಲಿ ಜಾತಿ ವ್ಯವಸ್ಥೆ ಎಂಬುದಿದೆ ಅದನ್ನು ವೈದಿಕಶಾಹಿಗಳೇ ರಚಿಸಿದ್ದು ಎಂಬುದಾಗಿ ಭಾವಿಸಿದ್ದು, ರಿಲಿಜನ್ನೇ ಇಲ್ಲದ ನಮ್ಮ ದೇಶದಲ್ಲಿ ಯುರೋಪಿನ ಸೆಕ್ಯುಲರ್ ನೀತಿಯನ್ನು ಯಥಾವತ್ತಾಗಿ ಅಳವಡಿಸಿಕೊಂಡಿದ್ದು, ಭಾರತದ ಎಲ್ಲ ಸಮಸ್ಯೆಗಳಿಗೆ ಜಾತಿ ವ್ಯವಸ್ಥೆಯೇ ಕಾರಣ ಎಂದು ತಿಳಿದಿದ್ದು ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ರಿಲೀಜಿಯಸ್ ಚಟುವಟಿಕೆ ಎಂಬುದಾಗಿ ನಿರ್ಣಯಿಸಿದ್ದು ಈ ಎಲ್ಲ ಸಮಸ್ಯೆ ಗಳಿಗೆ ಕಾರಣವಾಗಿದೆ.

ಇಂಥ ತಪ್ಪು ತಿಳುವಳಿಕೆಗಳು ಕೇವಲ ಮೇಲ್ಸ್ತರದಲ್ಲಿಯೇ ರೂಪ ಪಡೆದುಬಿಡುತ್ತದೆ. ಉದಾಹರಣೆಗೆ ಸಂಸ್ಕೃತ ಅಂದರೆ ಬ್ರಾಹ್ಮಣರ ಭಾಷೆ. ಭಗವದ್ಗೀತೆ ಸಂಸ್ಕೃತದಲ್ಲಿದೆ ಹಾಗೂ ಹಿಂದೂ ಧರ್ಮಗ್ರಂಥ. ಆದ್ದರಿಂದ ಸಂಸ್ಕೃತದಲ್ಲಿ ರುವ ಈ ಧರ್ಮಗ್ರಂಥ ಬ್ರಾಹ್ಮಣರದ್ದು. ಅಂದರೆ ಇದು ಜಾತಿ ವ್ಯವಸ್ಥೆಯನ್ನು ಮಾನ್ಯ ಮಾಡುತ್ತದೆ. ಆದ್ದರಿಂದ ಇದು ವೈದಿಕಶಾಹಿಯನ್ನು ಸಮರ್ಥಿಸು ತ್ತದೆ, ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬಿತ್ಯಾದಿಯಾಗಿ ಪ್ರಗತಿಪರ ಹಾಗೂ ದಲಿತ ಚಿಂತಕರ ತಾರ್ಕಿಕ ನಿರ್ಣಯ. ಇದು ಒಂದು ರೀತಿಯ ಪೂರ್ವಾಗ್ರಹದಿಂದ ಕೂಡಿದ ಆತುರದ ನಿರ್ಣಯ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗು ತ್ತದೆ. ಇದನ್ನು ಬಿಟ್ಟು ಇವರು ಭಗವದ್ಗೀತೆಯನ್ನು ಕೂಲಂಕಶವಾಗಿ ಓದಲಿ, ಆ ಕುರಿತು ವಿದ್ವಾಂಸರ ಜೊತೆ ಚರ್ಚಿಸಲಿ. ವೈಯಕ್ತಿಕ ಬದುಕಿಗೆ ಬೇಕಾದ ನೆಮ್ಮದಿಯ ಮಾರ್ಗ ಇಲ್ಲಿ ಕಂಡರೆ ಅಳವಡಿಸಿ ಕೊಳ್ಳಲಿ. ಇದರಿಂದ ಒಂದು ಸಮುದಾಯಕ್ಕೆ ನೆಮ್ಮದಿ ಸಿಗಬಹುದಾದರೆ ಯಾಕೆ ಧಿಕ್ಕರಿಸಬೇಕು?

ನಾವು ನಮ್ಮ ವೈಯಕ್ತಿಕ ತಪ್ಪು ತಿಳುವಳಿಕೆ ಹಾಗೂ ಪೂರ್ವಾಗ್ರಹಕ್ಕೆ ಸೆಕ್ಯುಲರಿಸಂ ಅನ್ನು ಸಮರ್ಥನೆಯಾಗಿ ಬಳಸಿಕೊಳ್ಳುತ್ತಿದ್ದೇವೆ. ಇಂಥ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದದ್ದೇ ಹೌದಾದರೆ ಸೆಕ್ಯುಲರಿಸಂನ ಸ್ವರೂಪವನ್ನು ತಿಳಿದುಕೊಳ್ಳಲು ಮೊದಲು ಪ್ರಯತ್ನಿಸೋಣ.

* * * * * * * *

ಚಿತ್ರಕೃಪೆ : atmajyoti.org

 

86 ಟಿಪ್ಪಣಿಗಳು Post a comment
 1. ರವಿ ಕುಮಾರ್ ಜಿ ಬಿ
  ಜನ 9 2012

  ಒಂದು ಪ್ರಭುದ್ದ ,ಈಗಿನ ಸೊ ಕಾಲ್ಡ್ ಚಿಂತಕರು, ಮತ್ತು ಎಡ ,ಬಲಗಳ ಬುದ್ದಿಜೀವಿಗಳ ಮನ ಪರಿವರ್ತಿಸಬಹುದಾದ ಒಳ್ಳೆಯ ಲೇಖನ, ಇನ್ನಾದರೂ ತಿಳುವಳಿಕೆ ಉಲ್ಲವರಗುತ್ತಾರೆಯೋ ಕಾಡು ನೋಡೋಣ !

  ಉತ್ತರ
 2. Ananda Prasad
  ಜನ 9 2012

  ಶಾಲಾ ಪಟ್ಯದಲ್ಲಿ ಭಗವದ್ಗೀತೆ ಬೋಧಿಸುವುದಕ್ಕಿಂಥ ನಮ್ಮ ಶಾಸಕರು, ಸಂಸದರು, ರಾಜಕಾರಣಿಗಳಿಗೆ ಇದನ್ನು ಬೋಧಿಸಿದರೆ ಉತ್ತಮ. ಶಾಲಾ ಪಟ್ಯದಲ್ಲಿ ಈಗಾಗಲೇ ಬೇಕಾದಷ್ಟು ನೀತಿಪಾಟಗಳು ಇವೆ. ಹೀಗಿದ್ದರೂ ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ, ಅನೈತಿಕತೆ, ಹೆಚ್ಚುತ್ತಲೇ ಇದೆ. ಇವೆಲ್ಲ ಬರೀ ಬೋಧನೆಯಿಂದ ಬರುವುದಿಲ್ಲ. ಸುತ್ತಲಿನ ಸಮಾಜದ ನಡವಳಿಕೆಗಳಿಂದ ಪ್ರಭಾವಿತವಾಗುವುದೇ ಹೆಚ್ಚು. ಸುತ್ತಲಿನ ಸಮಾಜದಲ್ಲಿ ಭ್ರಷ್ಟಾಚಾರಿಗಳಿಗೆ ರಾಜ ಮರ್ಯಾದೆ ಸಿಕ್ಕು ಅವರೇ ಅಧಿಕಾರ ನಡೆಸುವ ಪರಿಸ್ಥಿತಿ ಇರುವಾಗ ಸಮಾಜ ಬದಲಾಗುತ್ತದೆಯೇ. ಭ್ರಷ್ಟಾಚಾರವೇ ಜೀವನ ಮೌಲ್ಯ ಎಂದು ನಮ್ಮ ರಾಜಕಾರಣಿಗಳು ತೋರಿಸುತ್ತಿರುವಾಗ ಮತ್ತು ಅವರನ್ನೇ ಸಮಾಜ ಹೊತ್ತುಕೊಂಡು ಮೆರೆಯುತ್ತಿರುವಾಗ ಭಗವದ್ಗೀತೆಯ ಬೋಧನೆ ನಿಷ್ಫಲವಾಗುತ್ತದೆ. ಇದು ಕೇವಲ ಬಾಯಿಪಾಟ ಮಾಡಿ ಬಹುಮಾನ ಗಿಟ್ಟಿಸಲು ಮಾತ್ರ ಪ್ರಯೋಜನಕಾರಿಯಾದೀತು ಹೊರತು ಮತ್ತೇನೂ ಸಾಧನೆಯಾದೀತು ಎಂದು ಅನಿಸುವುದಿಲ್ಲ. ಅಲ್ಲದೆ ಇಂಥ ತಾತ್ವಿಕ ವಿಷಯಗಳು ಎಳೆಯ ಗಂಟಲಿನಲ್ಲಿ ಇಳಿಯುವ ಸಾಧ್ಯತೆಯೂ ಇಲ್ಲ. ಇಂಥವುಗಳನ್ನು ಅಳವಡಿಸುವುದಿದ್ದರೂ ಪದವಿ ತರಗತಿಗಳಿಗೆ ಅಳವಡಿಸಿದರೆ ಸ್ವಲ್ಪವಾದರೂ ಗಂಟಲಿನಲ್ಲಿ ಇಳಿದೀತು

  ಉತ್ತರ
  • ಗಿರೀಶ್
   ಜನ 16 2012

   ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?

   ಉತ್ತರ
 3. ಜಾತ್ಯತೀತವಾದಿ !!??
  ಜನ 10 2012

  ಎಲ್ಲ ಕಡೆಯೂ ಅದಕ್ಕಿಂತ ಇದು ಒಳ್ಳೇದು ,ಇದಕ್ಕಿಂತ ಅದು ಒಳ್ಳೇದು ಅಂತ ಅನ್ನಿಸಿಯೇ ಅನ್ನಿಸುತ್ತೆ ! ಪಾಯಸ ಬಡಿಸಿದಾಗ ,ಒಬ್ಬಟ್ಟು ಬೇಕಿತ್ತು ಅಂತ ,ಒಬ್ಬಟ್ಟು ಕೊಟ್ಟಾಗ ಜಿಲೇಬಿ ಒಳ್ಳೇದಿತ್ತು ಅಂತ ,ಅದು ಸಹಜ ! ಆದರೆ ಹೀಗೆಲ್ಲ ಅನಿಸೋದು ಹಿಂಡುಗಳ ವಿಷಯದಲ್ಲಿ ಮಾತ್ರ ಯಾಕೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ ! ಅದೂ ಹಿಂದೂ ಬುದ್ದಿಜೀವಿಗಳಿಗೆ ! ಮೆಕ್ಕಾಕ್ಕೆ ಹೊಗಳು ಸಬ್ಸಿಡಿ ಕೊಟ್ಟಾಗ ಏನೂ ಅನ್ನಿಸುವುದಿಲ್ಲ ,ಆದರೆ ದೇವಾಲಯಗಳಲ್ಲಿ ಯಾಗ ಮಾಡಿಸಿದಾಗ ಹುಯಿಲೆಬ್ಬಿಸುತ್ತಾರೆ ! ಅದೇ ಹಣದಿಂದ ನೆರೆ ಸಂತ್ರಸ್ಥರಿಗೆ ಮನೆ ಕತ್ತಿಸ್ಕೊದಬಹುದಿತ್ತು, ಅದು ಮಾಡ ಬಹುದಿತ್ತು ಇದು ಮಾಡಬಹುದಿತ್ತು ಅಂತ! ನಮ್ ಜನ (ಬುದ್ದಿಜೀವಿ?) ಯಾಕೆ ಹೀಗೆ?

  ಉತ್ತರ
 4. ಜಾತ್ಯತೀತವಾದಿ !!??
  ಜನ 10 2012

  ಹಿಂಡುಗಳ =>ಹಿಂದೂಗಳ
  ಹೊಗಳು => ಹೋಗಲು,
  ಕತ್ತಿಸ್ಕೊದಬಹುದಿತ್ತು, =>ಕಟ್ಟಿಸಿ ಕೊಡಬಹುದಿತ್ತು

  ಉತ್ತರ
 5. Vijay Gorappa
  ಜನ 12 2014

  Still I’m not understanding, why we are not accepting Casteism exist & its the root cause for every problem & confusions in our society. why r we arguing Hindu isn’t a religion? why everyone wants to keep caste system alive? in the name of culture, we r trying to keep bad practices alive [as per their need] & trying to keep inequality in the society. ultimately which isn’t allowing people to grow.

  ಉತ್ತರ
 6. Vijay Gorappa
  ಜನ 12 2014

  We will never be able to eliminate corruption, bad political & bureaucratic system, Quota concept, inequality etc…..unless we remove caste. we should treat every one as equal under Hindu religion label. No more segments under Hindu. then only people can vote by keeping development in mind, then only good people can get elected. Only they can remove Quota concept & bring better alternative for that. This is the only way to save our nation & religion. We should stop confusing common people.

  ಉತ್ತರ
  • Nagshetty Shetkar
   ಜನ 12 2014

   ಜಾತಿನಾಶವಾಗದೆ ಭಾರತ ಉದ್ಧಾರವಾಗಲ್ಲ ವಿಜಯ್ ಅವರೆ. ಬಸವಣ್ಣ ಆದಿಯಾಗಿ ಎಲ್ಲಾ ಶರಣರೂ ಇದನ್ನೇ ಹೇಳಿದ್ದಾರೆ ಹಾಗೂ ಜಾತಿನಾಶಕ್ಕೆಂದು ತಮ್ಮ ತನುಮನಧನವನ್ನು ಮೀಸಲಿಟ್ಟಿದ್ದಾರೆ. ಆದರೆ ಬ್ರಾಹ್ಮಣ್ಯದ ಕಬಂಧ ಬಾಹುಗಳು ನಮ್ಮ ಸಮಾಜವನ್ನು ಜಾತಿಯ ಕತ್ತಲೆ ಕೋಣೆಯಲ್ಲಿ ಖೈದಿ ಆಗಿಸಿದೆ.

   ಉತ್ತರ
   • Manohar
    ಜನ 12 2014

    ಎಲ್ಲ ಕಾರ್ಯ ತಂತ್ರವನ್ನು ಉಪಯೋಗಿಸಿ ಬ್ರಾಹ್ಮಣ ದ್ವೇಶ ಕಾಯಂ ಆಗಿ ಇರುವಂತೆ ಮಾಡುವ ಕೆಲವು ಜನ/ಗುಂಪುಗಳು ಸಮಾಜದಲ್ಲಿ ವಿಷ ಬಿತ್ತುವುದನ್ನೇ ಉದ್ಯೋಗವಾಗಿಸಿಕೊಂಡಿದ್ದಾರೆ. ಅದರಲ್ಲಿಯೇ ತಮ್ಮ ಗಂಜಿ ಕಂಡು ಕೊಳ್ಳುತ್ತಿದ್ದಾರೆ. ಇಂಥ ಸವಕಲು ಸಿದ್ಧಾಂತದ ದರಿದ್ರ ಎಡಬಿಡಂಗಿ ಪಂಥಿಗಳು ನಾಶವಾಗುವ ತನಕ ಈ ಸಮಾಜ/ದೇಶ ಉದ್ಧಾರವಾಗುವುದಿಲ್ಲ.

    ಉತ್ತರ
    • Nagshetty Shetkar
     ಜನ 14 2014

     ಕಾಮಾಲೆ ಕಣ್ಣು.

     ಉತ್ತರ
   • ನವೀನ
    ಜನ 13 2014

    ‘ಜಾತಿ ನಾಶ’ವಾಗುವುದು ಹೇಗೆ? ಅನ್ನುವುದನ್ನು ವಿವರಿಸಿ ಶೆಟ್ಕರ್ ಸಾರ್.ಅದು ಸಾಧ್ಯವಾದುದಾಗಿದೆಯೇ?

    ಉತ್ತರ
    • Nagshetty Shetkar
     ಜನ 14 2014

     ಅಂಬೇಡ್ಕರ್ ಅವರ ಬರಹಗಳನ್ನು ಓದಿ ಮಿ. ನವೀನ.

     ಉತ್ತರ
     • ನವೀನ
      ಜನ 14 2014

      ಓದಿಕೊಳ್ಳುವುದು ಇರಲಿ.ಆದರೆ, ಇದುವರೆಗೂ ಅದು ಸಾಧ್ಯವಾಗದಿದುಕೆ ಕಾರಣವೇನು ಎಂಬುದು ನನ್ನ ಪ್ರಶ್ನೆಯಾಗಿದೆ.

      ಉತ್ತರ
      • Nagshetty Shetkar
       ಜನ 14 2014

       ಮನುವಾದಿಗಳು ಇನ್ನೂ ಪ್ರಬಲರಾಗಿರುವುದೇ ಕಾರಣ.

       ಉತ್ತರ
       • ನವೀನ
        ಜನ 14 2014

        ಇದು ಜವಬ್ದಾರಿಯಿಂದ ನುಣುಚಿಕೊಳ್ಳುವಂತ ಹೇಳಿಕೆಯಾಗಿದೆ ಶೆಟ್ಕರ್ ಸಾರ್. ಸ್ವಾತಂತ್ರ್ಯ ಸಿಕ್ಕಿ ೬೭ ವರ್ಷ ಕಳೆದರೂ ಬ್ರಾಹ್ಮಣರು,ಮನುವಾದಿಗಳಿಗೆ ಬೈಯ್ಯುತ್ತ ಕಾಲ ದೂಡುವುದಕ್ಕಿಂತ,ಈ ಸಮಸ್ಯೆ ಪರಿಹಾರವಾಗದಿರುವುದಕ್ಕೆ ಬೇರೆ ಇನ್ನೇನು ಕಾರಣವಿರಬಹುದು ಅನ್ನುವುದನ್ನು ಯೋಚಿಸದಿರುವುದು ಹೊಣೆಗೇಡಿತನವಾಗಿದೆ ಅನ್ನುವುದು ನನ್ನ ಅಭಿಪ್ರಾಯವಾಗಿದೆ

        ಉತ್ತರ
        • Nagshetty Shetkar
         ಜನ 14 2014

         ಸ್ವಾತಂತ್ರ್ರ್ಯ!!! ಯಾರಿಗೆ ಸಿಕ್ಕಿತು? ಮನುವಾದಿಗಳಿಗೆ ವಸಾಹತುಶಾಹಿಯಿಂದ ಸ್ವಾತಂತ್ರ್ರ್ಯ ಸಿಕ್ಕಿತು. ತುಳಿತಕ್ಕೆ ಒಳಗಾದವರಿಗೆ ಸಿಕ್ಕಿದೆಯೇ?

         ಉತ್ತರ
         • Nagshetty Shetkar
          ಜನ 14 2014

          ನವೀನ, ನೋಡಿ: http://ladaiprakashanabasu.blogspot.in/2014/01/blog-post_7385.html

          “ದಲಿತರು ಮಾಡಿದ ತಪ್ಪಾದರೂ ಏನು..? ನಾವು ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೀವಾ ಎನಿಸುತ್ತಿದೆ.”

          ಉತ್ತರ
          • anand
           ಜನ 14 2014

           ನೀವು ತಿಳಿಸಿದ ಲಡಾಯಿ ಬ್ಲಾಗ್ ಓದಿದೆ. ದಲಿತರ ಮೇಲಿನ ದೌರ್ಜನ್ಯವನ್ನು ನಾನೂ ಖಂಡಿಸುತ್ತೇನೆ. ಆದರೆ ಈ ಊರಲ್ಲಿ ಬ್ರಾಹ್ಮಣರಿಲ್ಲ . ಹಾಗಂತ ಲೇಖಕರೆ ಹೇಳಿದ್ದಾರೆ. ದಲಿತರ ಮೇಲೆ ದೌರ್ಜನ್ಯ ಇನ್ನ್ನೊಬ್ಬ ಶೂದ್ರರಿಂದಲೇ ನಡೆದಿದೆ. ನೀವು ಮಾತ್ರ ಮನುವಾದಿ ವೈದಿಕಶಾಹಿ ಎಂದು ಹೀಗಳೆಯುವದು ಬಿಡುವದಿಲ್ಲ. ಈ ಊರಲ್ಲಿ ಆರ್. ಎಸ್. ಎಸ್. ಇಲ್ಲ. ಆದರೂ ಶೋಷಣೆ ನಡೆಯುತ್ತಿದೆ. ಇದಕ್ಕೆಲ್ಲ ಯಾರು ಕಾರಣ?? ಕಾರಣ ಕರ್ತರನ್ನು ಬೈಯ್ಯದೆ ಕಾರಣವಿಲ್ಲದವರ ಮೇಲೆ ಹರಿ ಹಾಯುತ್ತೀರಲ್ಲ?? ಇದು ನ್ಯಾಯವಾ?? ದಲಿತರಿಗಿಂತ ಬ್ರಾಹ್ಮಣ ಶೋಷಣೆ ತುಂಬಾ ನಡೆದಿದೆ ಹಳ್ಳಿಗಳಲ್ಲಿ. ಅವರ ಜಮೀನು ಟೆನೆಂಟ್ ಆದ ಕೂಡಲೆ ಬ್ರಾಹ್ಮಣರೆಲ್ಲ ತಿನ್ನಲು ಊಟ ಕಾಣದೇ ಆರಕ್ಕೇರಲು ಆಗದೇ ಮೂರಕ್ಕಿಳಿಯಲೂ ಆಗದೆ ಮುಂಬೈನಂಥ ಶಹರದಲ್ಲಿ ಕೂಲಿ ಮಾಡಿ, ರಿಕ್ಷಾ ಓಡಿಸಿ ಬದುಕಿದ್ದಾರೆ. ನ್ಯಾಯವಾಗಿ ಅವರಿಗಿರುವ ಜಮೀನಿನಲ್ಲಿ ದನ ನುಗ್ಗಿಸಿ, ಒತ್ತುವರಿ ಮಾಡಿ, ಹರಿ, ಹಳ್ಳ, ಹಾದಿ, ಹಾಕಿ ಕಾಟ ಕೊಟ್ಟಿದ್ದಾರೆ. ಬ್ರಾಹ್ಮಣರ ಮನೆಗಳನ್ನು ಕೂಡ ಒತ್ತುವರಿ ಮಾಡಿ ಅವರ ಸ್ವಂತದ ನೀರಿನ ಬಾವಿ ಹಾಳು ಮಾಡಿದ ಉದಾಹರಣೆ ಇವೆ. ಬ್ರಾಹ್ಮಣರ ಕುಟುಂಬಗಳು ಹಳ್ಳಿಯಲ್ಲಿ ತುಂಬಾ ಕಡಿಮೆ. ಮೇಲಾಗಿ ಬೇರೆಯವರಂತೆ ಹೊಡಿ ಬಡಿ ಕಡಿ ಮಾಡದವರು. ಅಲ್ಲದೇ ಸಂಘಟನೆಯು ಇಲ್ಲ. ಅಣ್ಣತಮ್ಮಂದಿರೆಲ್ಲ ಒಂದಾಗಿ ಜಗಳ ಕಾಯುವ ಸಂಪ್ರದಾಯವೂ ಇಲ್ಲ. ಹೀಗಾಗಿ ಹಳ್ಳಿಗಳಲ್ಲಿ ಬ್ರಾಹ್ಮಣ ಶೋಷಣೇ ಬಹಳವೇ ನಡೆಯುತ್ತದೆ. ಆದರೆ ಯಾವ ಸರ್ಕಾರವಾಗಲೀ ತಹಶಿಲ್ದಾರರಾಗಲೀ , ಜಿಲ್ಲಾಧಿಕಾರಿಗಳಾಗಲಿ ಇವನ್ನೇಂದೂ ಗಮನಿಸಿಲ್ಲ. ಯಾಕೆಂದರೆ ಅನಾದಿಕಾಲದ ಶೋಷಕರೆಂಬ ಪಟ್ಟ. ಇವತ್ತಿನ ಪರಿಸ್ಠಿತಿ ಅವಲೋಕಿಸದೇ ಪೂರ್ವಾಗ್ರಹ ಪೀಡಿತರಾಗಿ ಬ್ರಾಹ್ಮಣರ ತೆಗಳಿಕೆ ಮಾತ್ರ ನಿರಂತರ ನಡೆದಿದೆ.

          • Nagshetty Shetkar
           ಜನ 15 2014

           “ಆದರೆ ಈ ಊರಲ್ಲಿ ಬ್ರಾಹ್ಮಣರಿಲ್ಲ .” ಆದರೆ ಬ್ರಾಹ್ಮಣ್ಯ ಇದೆ ಅಲ್ಲವೆ?

           ಬ್ರಾಹ್ಮಣರು ಮಾತ್ರ ಮನುವಾದಿಗಳು ಅಂತ ನಾನು ಎಲ್ಲಿ ಹೇಳಿದ್ದೇನೆ? ಪೇಜಾವರ ಸ್ವಾಮಿಗಳನ್ನು ಕೇರಿಗಳಿಗೆ ಕರೆಸಿ ಅವರಿಂದ ವಿಷ್ಣುದೀಕ್ಷೆ ಪಡೆಯುತ್ತಿರುವ ದಲಿತರೂ ಮನುವಾದಿಗಳೇ ಆಗಿದ್ದಾರೆ.

         • ನವೀನ
          ಜನ 15 2014

          ಶೆಟ್ಕರ್ ಸಾರ್,
          ಇಷ್ಟೆಲ್ಲ ದಲಿತ ಸಂಘಟನೆಗಳಿವೆ ಅವೆಲ್ಲಕ್ಕಿಂತ ಮಿಗಿಲಾಗಿ ನಿಮ್ಮದೇ ಸರ್ಕಾರವಿದೆ.ಹೀಗೆಲ್ಲ ಇದ್ದಗ್ಯೂ ಕಾಣದ ಮನುವಾದಿಗಳನ್ನು ಬೈದುಕೊಂಡು, ಸಮಸ್ಯೆಯ ಮೂಲವನು ಬೇರೆ ವಿಧದಲ್ಲಿ ನೋಡುವ ಬಗ್ಗೆ ಯೋಛಿಸುವ ಬದಲೂ, ಹೀಗೆ ಕಾಲ ತಳ್ಳುವವರನ್ನು ಹೊಣೆಗೇಡಿತನವೆನ್ನದೆ ನನಗೆ ಬೇರೇನು ತೋಚದಾಗಿದೆ

          ಉತ್ತರ
 7. Manohar
  ಜನ 15 2014

  “ಆದರೆ ಈ ಊರಲ್ಲಿ ಬ್ರಾಹ್ಮಣರಿಲ್ಲ .” ಆದರೆ ಬ್ರಾಹ್ಮಣ್ಯ ಇದೆ ಅಲ್ಲವೆ?
  ಬ್ರಾಹ್ಮಣರು ಮಾತ್ರ ಮನುವಾದಿಗಳು ಅಂತ ನಾನು ಎಲ್ಲಿ ಹೇಳಿದ್ದೇನೆ? ”
  ಬ್ರಾಹ್ಮಣ ಕಾರಣ ಅನ್ನೋದು. ತೋರಿಸಿ ಕೊಡಿ ಅಂದರೆ ಬ್ರಾಹ್ಮಣ್ಯ ಕಾರಣ ಅಂತ ಪ್ಲೇಟ್ ತಿರುಗಿಸುವುದು!. ಪಾಪ ಹೊಟ್ಟೆಪಾಡು.

  ಉತ್ತರ
  • Nagshetty Shetkar
   ಜನ 15 2014

   ವಾದವನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗದೆ ತನ್ನ ಕುದುರೆಗೆ ಮೂರೇ ಕಾಲು ಎಂದು ಸಾಧಿಸುವ ತಮ್ಮಂತಹ ಬುದ್ಧಿಗೇಡಿಗಳಿಗೆ ಬ್ರಾಹ್ಮಣ್ಯದ ಬಗ್ಗೆ ಪಾಠ ಹೇಳುವ ಜರೂರತ್ ನನಗಿಲ್ಲ. ನಿಮ್ಮ ಪ್ಲೇಟ್ ಹಿಡಿದು ನಮೋಸುರನ ಮುಂದೆ ಬಾಯಿಬಡಿದುಕೊಳ್ಳಿ, ಆತ ಒಂದಿಷ್ಟು ದಕ್ಷಿಣೆಯನ್ನು ಬ್ರಾಹ್ಮಣಾರ್ಥವಾಗಿ ನಿಮ್ಮ ಪ್ಲೇಟಿಗೆ ಎಸೆಯಬಹುದು.

   ಉತ್ತರ
   • ನವೀನ
    ಜನ 15 2014

    ನನ್ನ ಮೇಲಿನ ಪ್ರಶ್ನೆಗೆ ನಿಮ್ಮಿಂದ ಉತ್ತರ ಬರಲಿಲ್ಲ ಶೆಟ್ಕರ್ ಸಾರ್

    ಇಷ್ಟೆಲ್ಲ ದಲಿತ ಸಂಘಟನೆಗಳಿವೆ ಅವೆಲ್ಲಕ್ಕಿಂತ ಮಿಗಿಲಾಗಿ ನಿಮ್ಮದೇ ಸರ್ಕಾರವಿದೆ.ಹೀಗೆಲ್ಲ ಇದ್ದಗ್ಯೂ ಕಾಣದ ಮನುವಾದಿಗಳನ್ನು ಬೈದುಕೊಂಡು, ಸಮಸ್ಯೆಯ ಮೂಲವನು ಬೇರೆ ವಿಧದಲ್ಲಿ ನೋಡುವ ಬಗ್ಗೆ ಯೋಛಿಸುವ ಬದಲೂ, ಹೀಗೆ ಕಾಲ ತಳ್ಳುವವರನ್ನು “ಹೊಣೆಗೇಡಿತನ”ವೆನ್ನದೆ ನನಗೆ ಬೇರೇನು ತೋಚದಾಗಿದೆ

    ಉತ್ತರ
    • Manohar
     ಜನ 15 2014

     ಥೊ ನವೀನ ನಿಮಗೆ ಅರ್ಥ ಆಗಲ್ಲ. ಇವುಗಳು ಈಗಾಗಲೇ ಅಟ್ಟದ ಮೇಲೆ ಹೋಗಿ ಕುಳಿತಾಗಿದೆ. ಅಲ್ಲಿ ಕೂತು, ಕೆಳಗಿನವರಿಗೆ ಇನ್ನೂ ಇಲ್ಲಿ ಅನ್ಯಾಯ ನಡಿತಿದೆ ಬರಬೇಡಿ, ಬರಬೇಡಿ ಅನ್ನೊ ಸಂದೇಶ ಕಳಿಸುವುದು, ಅವರು ಕೆಳಗೆ ಇನ್ನೂ ಭ್ರಮೆಯಲ್ಲಿ ಬದುಕುವಂತೆ ನೋಡಿಕೊಳ್ಳುವುದು ಇವರ ಈಗಿನ ಉದ್ಯೋಗ. ಎಲ್ಲರೂ ಮೇಲೆ ಬಂದರೆ ಇವರಿಗೆ ಹೋರಾಟವೂ ಇಲ್ಲ, ಗಂಜಿಯೂ ಇಲ್ಲ!!

     ಉತ್ತರ
    • Nagshetty Shetkar
     ಜನ 15 2014

     ದಲಿತ ಸಂಘಟನೆಗಳಿವೆ, ಆದರೆ ಅವು ಸಂಘಟಿತವಾಗಿಲ್ಲ. ದಲಿತರು ಸಂಘಟಿತರಾಗಿದ್ದರೆ ಕನಿಷ್ಟ ಒಂದು ವೋಟ್ ಬ್ಯಾಂಕ್ ಆಗಿ ಸಾಕಷ್ಟು ಅಧಿಕಾರ ಪಡೆಯುತ್ತಿದ್ದರು. ಆದರೆ ಮನುವಾದಿ ಶಕ್ತಿಗಳು ದಲಿತರನ್ನು ಸಂಘಟಿತರಾಗಿ ಮುಂದೆ ಬರದ ಹಾಗೆ ವ್ಯವಸ್ಥೆಯನ್ನು ದಲಿತರ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡು ಬಂದಿವೆ.

     ನವೀನ, ಈ ಸಮಸ್ಯೆಯ ಮೂಲ ಮನುವಾದವಲ್ಲದೆ ಬೇರೆ ಏನು? ಮನುವಾದವನ್ನು ವಿರೋಧಿಸುವುದು ಹೊಣೆಗೇಡಿತನ ಅಂತ ಹೇಳಿ ಬಾಯಿ ಮುಚ್ಚಿಸಲು ಹೋಗುವುದೂ ಮನುವಾದಿ ಹುನ್ನಾರವೇ ಅಲ್ಲವೆ?

     ಉತ್ತರ
     • ನವೀನ
      ಜನ 15 2014

      ನನ್ನನ್ನು ಮನುವಾದಿ ಅಂದು ತಮಗೆ ಸಮಾಧಾನವಾಗುವುದಾದರೆ ಅನ್ನಿ ಶೆಟ್ಕರ್ ಸಾರ್.ಆದರೆ ನನ್ನ ಕಾಳಜಿಯಿರುವುದು ನಮ್ಮ ದಲಿತಸಹೋದರರ ಸಮಸ್ಯೆಯನ್ನು ಎಂದೋ ಬದುಕಿದ್ದ ಮನುವಿನ ಮೇಲೆ ಹೊರಿಸಿ ಕೈ ತೊಳೆದುಕೊಳ್ಳುವುದರ ಬಗ್ಗೆಯಾಗಿದೆ. ಕಾಣದ ಗುಮ್ಮನ ಕತೆಯೇಳಿ ಮಕ್ಕಳನ್ನು ಹೆದರಿಸಿದ ಹಾಗೆ 😦

      ಉತ್ತರ
   • Manohar
    ಜನ 15 2014

    ನಿಮ್ಮ ‘ವಾದ’ ಅರ್ಥ ಮಾಡಿಕೊಂಡು ಆಗಿದೆ. ಈಗ ನಿಮಗೆ ಮತ್ತು ನಿಮ್ಮ ಸವಕಲು/ಹರಕಲು ವಾದಕ್ಕೆ ಗೊಬ್ಬರದ ಗುಂಡಿ ಸೇರುವ ಕಾಲ ಬಂದಿದೆ. ನಮಗೆ ದಕ್ಷಿಣೆ ಬಗ್ಗೆ ಹೇಳ್ತಾ, ನೀವೇನಾದರೂ ಗಂಜಿ ತಟ್ಟೆ ಮನೆಯಲ್ಲಿ ಬಿಟ್ಟು ಹೋಗಿಬಿಟ್ಟಿರಿ ಮತ್ತೆ!.

    ಉತ್ತರ
    • Nagshetty Shetkar
     ಜನ 15 2014

     ಸರಿ ನಮ್ಮ ಚಿಂತೆ ನಿಮಗೇಕೆ?

     ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು
     ತೃಷೆಯಾದರೆ ಕೆರೆ-ಭಾವಿ-ಹಳ್ಳಂಗಳುಂಟು
     ಶಯನಕ್ಕೆ ಹಾಳುದೇಗುಲವುಂಟು.

     ಉತ್ತರ
     • Manohar
      ಜನ 15 2014

      ಬಾಯಿ ತುರಿಕೆಯಾದರೆ ತೆಗಳಲು ಬ್ರಾಹ್ಮಣರುಂಟು..
      ಇನ್ನೇನು ಬೇಕು ನಮಗೆ ಬಿಟ್ಟಿ ಸ್ವರ್ಗಕೆ ಕಿಚ್ಚು ಹಚ್ಚೆಂದ ..ಗಣ್ಣ !!

      ಉತ್ತರ
      • Nagshetty Shetkar
       ಜನ 16 2014

       ನಾನೇಕೆ ಬ್ರಾಹ್ಮಣರನ್ನು ತೆಗಳಿ ಬಾಯಿ ಗಲೀಜು ಮಾಡಿಕೊಳ್ಳಲಿ ಮಿ. ಮನೋಹರ್? ನನ್ನದೇನಿದ್ದರೂ ಬ್ರಾಹ್ಮಣ್ಯದ ವಿರುದ್ಧ ತಾತ್ವಿಕ ವಿರೋಧ. ಮನುವಾದಿಗಳು ಬ್ರಾಹ್ಮಣರೇ ಇರಲಿ ಮತ್ಯಾರೇ ಇರಲಿ, ಅವರ ವಿರುದ್ಧ ಸತ್ಯಾಗ್ರಹ ಮಾಡುವುದು ಬಸವಣ್ಣನ ಅನುಯಾಯಿಯಾಗಿ ನನ್ನ ಕರ್ತವ್ಯ. ಏಕೆಂದರೆ ಮನುವಾದವನ್ನು ಮೆಟ್ಟದೆ ಶೋಷಿತವರ್ಗದ ಜನರಿಗೆ ಉಳಿಗಾಲವಿಲ್ಲ. ನೀವು ಮನುವಾದಿಗಳಲ್ಲದಿರಬಹುದು ಆದರೆ ಅವರ ಏಜೆಂಟ್ ತರಹ ವಾದ ಮಾಡುವುದನ್ನು ಬಿಡಿ.

       ಉತ್ತರ
       • ನವೀನ
        ಜನ 16 2014

        ನನ್ನ ಪ್ರಶ್ನೆಗೆ ಶೆಟ್ಕರ್ ಸಾರ್ ಉತ್ತರ ನೀಡಲಿಲ್ಲ.ನನ್ನ ಪ್ರಶ್ನೆ ಈ ಸಮಸ್ಯೆಯ ಪರಿಹಾರ ಹೇಗೆ ಸಾಧ್ಯವೆಂಬುದಾಗಿದೆ?

        ಉತ್ತರ
        • akash
         ಜನ 16 2014

         ಈ ಎಪ್ಪಾ ಎಂದೂ ಯಾರು ಕೇಳುವ ಪ್ರಶ್ನೆಗೆ ಉತ್ತರಿಸಲು ಹೊಗುವದೇ ಇಲ್ಲಾ. ಸುಮ್ಮನೇ ಸಗಣಿ ಬಳಿತಿರ್ತಾನೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಾಗ ಅದೇ ಅದಲ್ಲ ಸೆಗಣಿ. ಚಿಂತೆ ಯಾಕೆ ಎನ್ನುತ್ತಾನೆ.

         ಉತ್ತರ
         • Nagshetty Shetkar
          ಜನ 16 2014

          ನೀವು ಹೇಳೋದು ವಿವೇಕಾನಂದರ ಶಾಂತಿ ಮಂತ್ರ ಮಾಡೋದು ಅಲ್ಪಸಂಖ್ಯಾತರ ದ್ವೇಷ. ಸಗಣಿ ಬಳಿದಾದರೂ ನಿಮ್ಮ ಹೃದಯವನ್ನು ನಂಜು ಮುಕ್ತವಾಗಿಸುವ ಅಂತ!

          ಉತ್ತರ
          • akash
           ಜನ 16 2014

           ನನ್ನ ಕಮೆಂಟಿನಲ್ಲಿ ಅಲ್ಪ ಸಂಖ್ಯಾತರ ದ್ವೇಷ ಎಲ್ಲಿದೆ? ಕಾಮಾಲೆ ಕಣ್ಣಿನ ವ್ಯಕ್ತಿಗೆ ಎಲ್ಲವೂ ಹಳದಿ ಕಾಣುವಂತೆ ನಿಮಗೆ ಎಲ್ಲವೂ ಅಲ್ಪ್ ಸಂಖ್ಯಾತರ ದ್ವೆಷದಂತೆ ಕಾಣುತ್ತವೆ.

          • Nagshetty Shetkar
           ಜನ 17 2014

           ಹೆಸರು ಆಕಾಶ, ಹೃದಯ ಕಪ್ಪೆ ಚಿಪ್ಪು!

        • Nagshetty Shetkar
         ಜನ 16 2014

         ಪ್ರಶ್ನೆಗೆ ಈಗಾಗಲೇ ಉತ್ತರ ಕೊಟ್ಟಾಗಿದೆ. ಮನುವಾದವೇ ಕಾರಣ ಅಂತ ಗೊತ್ತಿದ್ದೂ”ನನ್ನ ಪ್ರಶ್ನೆಗೆ ಶೆಟ್ಕರ್ ಸಾರ್ ಉತ್ತರ ನೀಡಲಿಲ್ಲ” ಅಂತ ನೂರು ಬಾರಿ ಹೇಳುತ್ತೀರಲ್ಲ!!

         ಉತ್ತರ
         • ನವೀನ
          ಜನ 17 2014

          ಮನುವಾದ ಕಾರಣ ಅನ್ನುವುದು ಹೊಣೆಗೇಡಿತನವಾದುದಾಗಿದೆ.ಶೋಷಿತರನ್ನು ಈ ರೀತಿ ಬಳಸಿಕೊಂಡು ಹೊಟ್ಟೆಹೊರೆಯುವುದಕ್ಕಿಂತ ಪಾಪದ ಕೆಲಸ ಬೇರೊಂದು ಇಲ್ಲವೆನ್ನಬಹುದಾಗಿದೆ

          ಉತ್ತರ
          • Nagshetty Shetkar
           ಜನ 17 2014

           ಇದು ಬಾಲಗ್ರಹಪೀಡಿತರ ಹಳೆ ವಾದ. ಅಂಗೈ ಹುಣ್ಣಿಗೆ ಕನ್ನಡಿ ತೋರಿಸಿದರೂ ಹುಣ್ಣೇ ಇಲ್ಲ ಅಂತ ಸಾಧಿಸುವ ಸಮಾಜಶಾಸ್ತ್ರ ಕೋವಿದರು ಅವರು. ನೀವೇಕೆ ಅವರ ಎಂಜಲನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದೀರಿ?

          • Manohar
           ಜನ 17 2014

           ಈ ಯಪ್ಪ ಮತ್ತು ಅವರ ಗ್ಯಾಂಗ್ ನವರು ಶತಮಾನದಿಂದ ಮಾರ್ಕ್ಸ ವಿಸರ್ಜಿಸಿರುವುದ್ದನೆಲ್ಲ ಬಾಯಲ್ಲಿ ಇಟ್ಟುಕೊಂಡು ಚಪ್ಪರಿಸುತ್ತಿರುವುದು ಏಕೊ??

         • akash
          ಜನ 17 2014

          ಚಿಪ್ಪಿನಲ್ಲೇ ಬೆಲೆ ಬಾಳುವ ಮುತ್ತು ಇರುವದು ಗೊತ್ತಾ??

          ಉತ್ತರ
          • Nagshetty Shetkar
           ಜನ 17 2014

           ಬಂಡವಾಳಶಾಹಿಗಳ ಸ್ವತ್ತು ನಿಮ್ಮ ಮುತ್ತು! ಅಂತೂ ನಿಮ್ಮ ಬಂಡವಾಳ ತಿಳಿಯಿತು! ಹೆ! ಹೆ!!

 8. ಜನ 17 2014

  [[Nagshetty Shetkar> ದಲಿತರು ಸಂಘಟಿತರಾಗಿದ್ದರೆ ಕನಿಷ್ಟ ಒಂದು ವೋಟ್ ಬ್ಯಾಂಕ್ ಆಗಿ ಸಾಕಷ್ಟು ಅಧಿಕಾರ ಪಡೆಯುತ್ತಿದ್ದರು. ಆದರೆ ಮನುವಾದಿ ಶಕ್ತಿಗಳು ದಲಿತರನ್ನು ಸಂಘಟಿತರಾಗಿ ಮುಂದೆ ಬರದ ಹಾಗೆ ವ್ಯವಸ್ಥೆಯನ್ನು ದಲಿತರ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡು ಬಂದಿವೆ.]]

  ಉತ್ತರಪ್ರದೇಶ ರಾಜ್ಯದಲ್ಲಿ “ಮನುಸ್ಮೃತಿಯನ್ನು ಸುಟ್ಟವರೇ” ರಾಜ್ಯವಾಳಿದರು. ಬ್ರಾಹ್ಮಣರನ್ನು ಮತ್ತು ಇನ್ನಿತರ ಮುಂದುವರೆದ ಜಾತಿಗಳನ್ನು ಧ್ವೇಷಿಸುವವರೇ ಇಂದು ರಾಜ್ಯವಾಳುತ್ತಿದ್ದಾರೆ. ಇವರೆಲ್ಲರೂ “ಅಲ್ಪಸಂಖ್ಯಾತರನ್ನು ತಲೆಯಮೇಲೆ ಹೊತ್ತುಕೊಂಡು” ಓಡಾಡುವವರೇ ಅಲ್ಲವೇ?
  ನಿಮ್ಮಿಷ್ಟದಂತೆಯೇ ಉತ್ತರಪ್ರದೇಶ ರಾಜ್ಯದಲ್ಲಿ ಮನುವಾದಿಗಳು ನೆಲಕಚ್ಚಿ ಒಂದೂವರೆ ದಶಕವಾಗಿ ಹೋಯಿತು. ನೀವು ಹೇಳುವ ಬ್ರಾಹ್ಮಣ್ಯವನ್ನು ಹೊತ್ತಿರುವ “ಕೋಮುವಾದಿ” ಶಕ್ತಿಗಳಿಗೆ ಅಲ್ಲಿ ಕಳೆದ ಒಂದೂವರೆ ದಶಕದಿಂದ ಕಿಮ್ಮತ್ತಿಲ್ಲ ಅಲ್ಲವೇ?
  ಹಾಗಿದ್ದರೆ, ನೀವು ಹೇಳುವ ಎಲ್ಲಾ ಸಮಸ್ಯೆಗಳೂ ಸಮೂಲ ನಿರ್ಮೂಲನೆಗೊಂಡು, ಒಂದು ಆದರ್ಶ ರಾಜ್ಯ ಅಲ್ಲಿ ಈ ಹೊತ್ತಿಗೆ ಸ್ಥಾಪನೆಯಾಗಿರಬೇಕಲ್ಲವೇ!?

  ಉತ್ತರ ಪ್ರದೇಶ ರಾಜ್ಯ ಬೇಡವೆಂದರೆ, ಪಶ್ಚಿಮ ಬಂಗಾಳ ಅಥವಾ ಕೇರಳ ರಾಜ್ಯಗಳನ್ನೇ ತೆಗೆದುಕೊಳ್ಳಿ. “ವರ್ಗ ಸಂಘರ್ಷ”ವನ್ನೇ ನಂಬಿಕೊಂಡಿರುವ ಪಕ್ಷಗಳೇ ಅಲ್ಲಿ ದಶಕಗಳ ಕಾಲ ರಾಜ್ಯ ನಡೆಸಿವೆ. ಆ ರಾಜ್ಯಗಳಲ್ಲಿ “ಕೋಮುವಾದಿ”ಗಳಿಗಾಗಲೀ “ಬ್ರಾಹ್ಮಣ್ಯ”ದವರಿಗಾಗಲೀ, “ಮನುವಾದಿ”ಗಳಿಗಾಗಲೀ ಕಿಮ್ಮತ್ತಿಲ್ಲ. ಅಲ್ಲಿ ಪೇಜಾವರಶ್ರೀಗಳ ‘ಕಾಟ’ವಿಲ್ಲ. ಆ ರಾಜ್ಯಗಳಲ್ಲಾದರೂ ನೀವು ಹೇಳುವ ಸಮಸ್ಯೆಗಳು ನಿರ್ಮೂಲನೆಗೊಂಡು “ಸುಖೀ ರಾಜ್ಯ” ನಿರ್ಮಾಣಗೊಂಡಿದೆಯೇ?

  ನಿಮ್ಮ ಆಸೆಯಂತೆ ಈ ರಾಜ್ಯಗಳಲ್ಲಿ ದಲಿತರು ಸಂಘಟಿತರಾಗಿ “ಮತಬ್ಯಾಂಕು”ಗಳಾಗಿ ಮತ ಚಲಾಯಿಸಿದ್ದರಿಂದಲೇ ಅಲ್ಲಿ ಇಂದು ಇರುವ ಸರಕಾರಗಳು ಆರಿಸಿ ಬರಲು ಸಾಧ್ಯವಾದದ್ದು. ಹೀಗೆ, ಇಂತಹ “ಮತಬ್ಯಾಂಕು”ಗಳ ಸಹಾಯದಿಂದ ಅಧಿಕಾರಕ್ಕೆ ಬಂದ “ದಲಿತ”ರು ತಮ್ಮವರ ಉದ್ದಾರ ಮಾಡಿಯೇ ಇರಬೇಕಲ್ಲವೇ? ಆ ರಾಜ್ಯಗಳು ದೇಶಕ್ಕೇ ಮಾದರಿಯಾಗಿರಬೇಕಲ್ಲವೇ?

  ಉತ್ತರ
  • Nagshetty Shetkar
   ಜನ 17 2014

   ಮಾಯಾವತಿ ಅವರೇನೋ ದಲಿತ ಅಭ್ಯುದಯದ ಆದರ್ಶಗಳನ್ನು ಮುಂದಿಟ್ಟುಕೊಂಡು ಆಡಳಿತ ನಡೆಸಿದರು. ಆದರೆ ಆಕೆಗೆ ಉತ್ತರಪ್ರದೇಶದ ಸರಕಾರಿ ವ್ಯವಸ್ಥೆ ಸಹಕಾರ ನೀಡಲಿಲ್ಲ. ಸರಕಾರಿ ಡಿಪಾರ್ಟುಮೆಂಟುಗಳಲ್ಲಿ ಮುಖ್ಯಸ್ಥರಿಂದ ಹಿಡಿದು ಕ್ಲಾರುಕುಗಳ ವರೆಗೆ ಸವರ್ಣೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರುಗಳು ದಲಿತ ಮುಖ್ಯಮಂತ್ರಿಗೆ ಸಹಕಾರ ನೀಡುವುದಿರಲಿ ಕಿರುಕುಳ ಕೊಡುತ್ತಲೇ ಬಂದರು.

   ಉತ್ತರ
   • ಜನ 17 2014

    [[Nagshetty Shetkar> ಸರಕಾರಿ ಡಿಪಾರ್ಟುಮೆಂಟುಗಳಲ್ಲಿ ಮುಖ್ಯಸ್ಥರಿಂದ ಹಿಡಿದು ಕ್ಲಾರುಕುಗಳ ವರೆಗೆ ಸವರ್ಣೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.]]
    ಓ ಗೊತ್ತಾಯ್ತು ಬಿಡಿ. ಈ ಎಲ್ಲಾ ಸವರ್ಣೀಯರನ್ನು ಸಮೂಲವಾಗಿ ನಿರ್ನಾಮ ಮಾಡಿಬಿಡಬೇಕು – ಹಿಟ್ಲರ್ ನಾಜಿಗಳನ್ನು ನಿರ್ಮೂಲ ಮಾಡಿದಂತೆ. ಆಗ ಮಾತ್ರ ನಿಮಗೆ ಸಮಾಧಾನ ಸಿಗುತ್ತದೆ ಎನಿಸುತ್ತದೆ.

    ಆಯಿತು, ಉತ್ತರಪ್ರದೇಶದಲ್ಲಿ ನೀವು ಹೇಳಿದ್ದೇ ಸತ್ಯವೆಂದಿಟ್ಟುಕೊಳ್ಳೋಣ. ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳ ಕುರಿತಾಗಿ ಯಾವ “ಅಮೃತವಚನ”ವನ್ನೂ ಹರಿಸಲಿಲ್ಲವಲ್ಲಾ!? 😉

    ಹೋಗಲಿ, ನಿಮ್ಮ ಆದರ್ಶವಾದ ರಷ್ಯಾದಲ್ಲಾದರೂ ನೀವು ಹೇಳಿದಂತ ಆದರ್ಶ ರಾಜ್ಯ ನಿರ್ಮಾಣವಾಯಿತೇ? ಅಲ್ಲೇನೂ “ಬ್ರಾಹ್ಮಣ್ಯ” “ಜಾತೀಯತೆ” “ಮನುವಾದಿಗಳು” “ಪೇಜಾವರಶ್ರೀಗಳು” ಇತ್ಯಾದಿ ಸಮಸ್ಯೆಗಳಿಲ್ಲವಲ್ಲ!

    ಉತ್ತರ
    • Nagshetty Shetkar
     ಜನ 17 2014

     ರಷ್ಯಾದಲ್ಲಿ ಎಲ್ಲವೂ ಸರಿ ಇತ್ತು. ಬಂಡವಾಳಶಾಹಿ ರಾಷ್ತ್ರಗಳ ಪಿತೂರಿಯಿಂದ ರಷ್ಯಾ ಕುಸಿದು ಬಿತ್ತು.

     ಕೇರಳ ಹಾಗೂ ಬಂಗಾಳದಲ್ಲಿ ಆದಷ್ಟು ಭೂಸುಧಾರಣೆ ಭಾರತದ ಇತರ ರಾಜ್ಯಗಳಲ್ಲಿ ಆಗಿಲ್ಲ.

     ಉತ್ತರ
     • Manohar
      ಜನ 18 2014

      ಪಾಪ. ಈ ಎಡಬಿಡಂಗಿಗಳು ಅಮಾಯಕರು, ಹಾಲುಗಲ್ಲದ ಹಸುಳೆಗಳು. ಉಳಿದವರು ಪಿತೂರಿ ಮಾಡ್ತಾರೆ..ಇವರು ಕುಸಿದು ಬಿಳ್ತಾರೆ!!

      ಭೂ ಸುಧಾರಣೆಯ ಬಗ್ಗೆ ರಾಷ್ಟ್ರೀಯ ದತ್ತಾಂಶ ಇಲ್ಲಿದೆ ನೋಡಿ. ನಿಮ್ಮ ಕೇರಳ, ಬಂಗಾಲ ಎಲ್ಲಿದೆ ಅಂತ ತಿಳಿಯುತ್ತ!
      http://saipdata.awardspace.com/national_index.htm#mozTocId161366

      ಉತ್ತರ
    • Manohar
     ಜನ 17 2014

     ಕೋಣದ ಮುಂದೆ ಕಿನ್ನರಿ!! 🙂

     ಉತ್ತರ
 9. ಜನ 17 2014

  ಶೆಟ್ಕರ್ ರವರು ಹೇಳುತ್ತಿರುವುದು ಸರಿಯಾಗಿದೆ. ಬ್ರಾಹ್ಮಣ್ಯವೆಂಬುದು ಮುಸ್ಲಿಮರನ್ನೂ ಬಿಟ್ಟಿಲ್ಲ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡಿ ಅಮಾಯಕರನ್ನು ಕೊಲ್ಲುವ ಮುಸ್ಲಿಂರು ಮುಸ್ಲಿಂ ಬ್ರಾಹ್ಮಣ್ಯಕ್ಕೆ ಒಂದು ಉದಾಹರಣೆ

  ಉತ್ತರ
  • Nagshetty Shetkar
   ಜನ 17 2014

   ಇಸ್ಲಾಂ ಧರ್ಮದಲ್ಲಿ ಬ್ರಾಹ್ಮಣ್ಯ ಇಲ್ಲ. ಅದು ಜಾತಿಕುಲಗಳ ಆಧಾರದ ಮೇಲೆ ಭೇದಭಾವ ಮಾಡುವುದಿಲ್ಲ. ಅದು ಎಲ್ಲರನ್ನೂ ಸರಿಸಮಾನ ಎನ್ನುತ್ತದೆ.

   ಉತ್ತರ
   • ಜನ 17 2014

    [[ಇಸ್ಲಾಂ ಧರ್ಮದಲ್ಲಿ ಬ್ರಾಹ್ಮಣ್ಯ ಇಲ್ಲ. ಅದು ಜಾತಿಕುಲಗಳ ಆಧಾರದ ಮೇಲೆ ಭೇದಭಾವ ಮಾಡುವುದಿಲ್ಲ. ಅದು ಎಲ್ಲರನ್ನೂ ಸರಿಸಮಾನ ಎನ್ನುತ್ತದೆ.]]
    ಹೌದೇನು?
    ಶಿಯಾ, ಸುನ್ನೀ, ವಹಾಬಿ, ಬ್ಯಾರಿ, ಪಠಾಣ, ತುರುಕ್ಕ, ಶೇಖ್, ಖುರೇಶಿ, ಮಾಲಿಕ್, ಅಶ್ರಫ್, ಅಜ್ಲಾಫ್, ಅನ್ಸಾರಿ, ಹಿಜ್ರ, ಕಸ್ರಿ, ಮೆಹ್ತಾರ್, ಕುಂಜ್ರಾ, ಸಯ್ಯದ್, ದಾವೂದಿ, ಅಹಮದೀಯ, ಸೂಫಿ – ಇವೆಲ್ಲವೂ ಏನೆಂದು ಹೇಳುವಿರಾ?

    ಮಸೂದ್ ಅಲಾಂ ಫಲಾಹಿ ಎನ್ನುವ ಮುಸ್ಲಿಂ ವಿದ್ವಾಂಸರು (ಇವರು ಮದ್ರಸಾದಲ್ಲಿ ಕಲಿತವರು) ದೆಹಲಿ ವಿಶ್ವವಿದ್ಯಾಲಯದಲ್ಲಿ ತಮ್ಮ M.Phil ಪದವಿಗಾಗಿ ಉರ್ದು ಭಾಷೆಯಲ್ಲಿ ತಮ್ಮ ಸಂಶೋಧನೆಯ ಸಾರವನ್ನು ಪ್ರಕಟಿಸಿದ್ದಾರೆ. ಅವರು ತಮ್ಮ ಸಂಶೋಧನೆಗೆ ಆರಿಸಿಕೊಂಡ ವಿಷಯ, “ಮುಸಲ್ಮಾನರಲ್ಲಿ ಜಾತಿ, ಜಾತೀಯತೆ ಮತ್ತು ತಾರತಮ್ಯ”. (Hindustan Mai Zat-Pat Aur Musalman (‘Casteism Among Muslims in India’))

    ಉತ್ತರ
    • Nagshetty Shetkar
     ಜನ 17 2014

     ರೀ ನಿಮಗೆ ಉರ್ದು ಅರ್ಥ ಆಗಲ್ಲ ಅಂತ ಕಾಣ್ತದೆ! “Hindustan Mai Zat-Pat Aur Musalman” ಎಂಬುದರ ಅನುವಾದ ” “ಮುಸಲ್ಮಾನರಲ್ಲಿ ಜಾತಿ, ಜಾತೀಯತೆ ಮತ್ತು ತಾರತಮ್ಯ” ಅಂತ ಅಲ್ಲ! “ಭಾರತದಲ್ಲಿ ಜಾತೀಯತೆ ಹಾಗೂ ಮುಸಲ್ಮಾನ” ಅಂತ. ಜಾತೀಯತೆಯಿಂದ ಮುಸಲ್ಮಾನರಿಗೂ ಅನ್ಯಾಯ ಆಗಿದೆ ಆಗುತ್ತಿದೆ.

     ಉತ್ತರ
    • Nagshetty Shetkar
     ಜನ 17 2014

     ಕುಮಾರ್, ಇಸ್ಲಾಂನಲ್ಲಿ ನೀವು ಮಸೂರ ಹಿಡಿದು ಹುಡುಕಿದರೂ ಅಸ್ಪೃಶ್ಯತೆ, ಮೇಲು-ಕೀಳು, ಬ್ರಾಹ್ಮಣ್ಯ ಸಿಗುವುದಿಲ್ಲ! ನಿಜ,
     ಮುಸಲ್ಮಾನರಲ್ಲಿ ಹಲವು ಪಂಗಡಗಳಿವೆ. ಆದರೆ ಇವು ಮನುವಾದದ ನೆಲೆಯಲ್ಲಿ ಸ್ಥಾಪಿತವಾದ ಶ್ರೇಣೀಕೃತ ಸಮಾಜವಲ್ಲ. ಧಾರ್ಮಿಕ ಸೂಕ್ಷ್ಮಗಳ ನೆಲೆಯಲ್ಲಿ ಹುಟ್ಟಿಕೊಂಡ ಪಂಗಡಗಳು.

     ಉತ್ತರ
     • Manohar
      ಜನ 17 2014

      ಮತ್ತೆ ಈ ಶೆಟ್ಕರ್ ಮಹಾನುಭಾವರು ಯಾಕೆ ಸಾಬರ ಧರ್ಮ ಸೇರುವುದಿಲ್ಲವೊ..

      ಉತ್ತರ
      • Nagshetty Shetkar
       ಜನ 18 2014

       ನಾನೊಬ್ಬ ಶರಣ. ನನಗೆ ಬಸವಾದ್ವೈತ ಬೆಳಕು ತೋರಿಸಿ ನಡೆಸುತ್ತಿದೆ. ಇಸ್ಲಾಮ್ ಕೂಡ ಬೆಳಕು ನೀಡುವ ಕಾಯಕ ಮಾಡುತ್ತಿದೆ. ಇಸ್ಳಾಮ್ ಹಾಗೂ ಬಸವಾದ್ವೈತ ಎರಡರಲ್ಲೂ ಸಾಧನೆ ಮಾಡಿರುವ ದರ್ಗಾ ಸರ್ ಅವರಂತಹ ಅಭಿನವ ಚನ್ನಬಸವಣ್ಣನವರು ನನ್ನ ಮಾರ್ಗದರ್ಶಿಗಳು. ಸದಾ ಅಂಧಕಾರದಲ್ಲೇ ಇರುವ ನಿಮ್ಮಂತಹ ಕತ್ತಲೆಯ ಕ್ರಿಮಿಗಳಿಂದ ಉಚಿತ ಸಲಹೆ ಬೇಕಿಲ್ಲ ನನಗೆ.

       ಉತ್ತರ
       • Manohar
        ಜನ 18 2014

        ನಗೆಹನಿಗೆ ಧನ್ಯವಾದಗಳು. ಈ ಬೆಳಕು ತುಂಬಾ ಪ್ರಖರವಾಗಿದೆ. ಬೆಳಕು ಕಣ್ಣು ಕುಕ್ಕುತ್ತಿದೆ. ಆಗಾಗ ಭಯಂಕರ ಸದ್ದು ಕೂಡ ಮಾಡುತ್ತಿರುತ್ತದೆ. ಜಗತ್ತಿನಲ್ಲೆಲ್ಲ ಅದರ ‘ಹೊಗಳಿಕೆ’ ನಡೆದಿದೆ!. ಅಂದಹಾಗೆ ಇಷ್ಟೆಲ್ಲ ತಿಳಿವಳಿಕೆ ಇರುವ ನೀವುಗಳು ಉಚಿತ ಸಲಹೆ ದಯಪಾಲಿಸುತ್ತ ತಿರುಗಾಡುತ್ತಿರುವುದು ಏಕೊ? ಗಂಜಿ ವ್ಯವಸ್ಥೆಯೆ? ಅಥವಾ ಪ್ರಶಸ್ತಿ ಕಾಯಕವೆ?.

        ಉತ್ತರ
   • Manohar
    ಜನ 18 2014

    ನಿಮ್ಮ ಲೆವಲ್ಲೆ ಇಷ್ಟು! ಪಾಪ ಬೆಳೆದಿದ್ದೇ ಇಂತಹ ಲೇಖನ ಓದಿ ಅನಿಸುತ್ತೆ. ಅದಕ್ಕೆ ತಲೆಯೆಲ್ಲ ಲದ್ದಿಯೆ!
    ಸ್ನೇಹಿತರೆ, ಈ ಯಪ್ಪ ಕೊಟ್ಟ ಲಿಂಕಿನ ಲೇಖನ ತಪ್ಪದೇ ಓದಿ. ಅದು ಈ ಸಾಹೇಬರ ಲದ್ದಿಬುದ್ಧಿಯ ದ್ಯೋತಕ.

    ಉತ್ತರ
    • Nagshetty Shetkar
     ಜನ 18 2014

     ತರ್ಕಬದ್ಧವಾಗಿ ವಾದಮಾಡಲಾಗದವರು ನಿಮ್ಮ ತರಹ ಲದ್ದಿ ಸುತ್ತ ಗಿರಕಿ ಹೊಡೆಯುತ್ತಿರುತ್ತಾರೆ. ನೀವು ಬಾಯಿ ತೆಗೆದರೆ ಲದ್ದಿಯದೇ ವಾಸನೆ!

     ಉತ್ತರ
  • akash
   ಜನ 17 2014

   ಮಹೇಶ್ ಅವರೆ ಮುಸ್ಲಿಂ ಭಯೋತ್ಪಾದಕತೆಯನ್ನು ಬ್ರಾಹ್ಮಣ್ಯಕ್ಕೆ ಹೋಲಿಸಿರುವಿರಲ್ಲಾ ಅಂದರೆ ಬ್ರಾಹ್ಮಣರು ಭಯೋತ್ಪಾದಕರೆ? ರಕ್ತ ಪಿಪಾಸುಗಳೆ? ಬ್ರಾಹ್ಮಣ ಭಯೋತ್ಪಾದನೆಯಿಂದ ಎಷ್ಟು ಜನ ಕೊಲೆ ಆಗಿದ್ದಾರೆ??

   ಉತ್ತರ
   • Nagshetty Shetkar
    ಜನ 17 2014

    ನಾಥುರಾಂ ಗೋಡ್ಸೆಯನ್ನು ಇಷ್ಟು ಬೇಗ ಮರೆತುಬಿಟ್ಟರೆ ಚಡ್ಡಿಗಳು!!

    ಉತ್ತರ
    • akash
     ಜನ 17 2014

     ಮುಸ್ಲಿಂ ಮತಾಂಧರಂತೆ ಲಕ್ಷ ಲಕ್ಷ ಜನರ ಮಾರಣಹೋಮ ನಡೆಸಿಲ್ಲ.

     ಉತ್ತರ
     • Nagshetty Shetkar
      ಜನ 18 2014

      ಹಳ್ಳಿಹಳ್ಳಿಗಳಲ್ಲಿ ದಲಿತರ ಹತ್ಯೆ ನಿತ್ಯ ನಡೆಯುತ್ತಿದೆ. ಅದರ ಪರಿವೆಯೇ ಇಲ್ಲದ ಹಾಗೆ ಅಮಾಯಕರಂತೆ ವರ್ತಿಸುತ್ತೀರಲ್ಲ ಆಕಾಶ್!

      ಉತ್ತರ
    • Manohar
     ಜನ 17 2014

     ಒಹೊ..ಗಾಂಧಿಯ ವಾರಸುದಾರ!!. ಮನೆಯಲ್ಲಿ ಕನ್ನಡಿ ಇದೆಯೆ??

     ಉತ್ತರ
     • Nagshetty Shetkar
      ಜನ 18 2014

      ಗಾಂಧಿ ಎಂದ ಕೂಡಲೆ ಗೋಡ್ಸೆ ಅಭಿಮಾನಿಗಳಿಗೆ ಮೈಯೆಲ್ಲಾ ತುರಿಕೆ ಶುರುವಾಗುತ್ತದೆಯಲ್ಲ!

      ಉತ್ತರ
      • Manohar
       ಜನ 18 2014

       ಸ್ವಾಮಿ. ನಾನ ಘೋಡ್ಸೆ ಕಡೆಯವನೆ. ಆತ ನಮ್ಮವನೇ. ನನಗೆ ಹೆಮ್ಮೆಯಿದೆ ಘೋಡ್ಸೆ ಬಗ್ಗೆ. ಯಾರೊ ನಾಲ್ಕು ಗಬ್ಬು ಜನ ಘೊಡ್ಸೆ ಬಗ್ಗೆ ಹೇಳಿದರು ಎಂದ ಮಾತ್ರಕ್ಕೆ ನಾನು ಆ ಬಗ್ಗೆ ಅವಮಾನ ಪಡಬೇಕಾಗಿಲ್ಲ. . ಆದರೆ ನಿಮ್ಮಂತಹ ಗತಿಗೆಟ್ಟವರ ಬಾಯಲ್ಲಿ ಗಾಂಧಿ, ಬಸವಣ್ಣ ಬರುವುದು, ಅವರ ತತ್ವಾದರ್ಶಗಳ ಉತ್ತಾರಾಧಿಕಾರಿಗಳು ತಾವು ಎಂಬಂತೆ ಬಿಂಬಿಸುವುದು! ಒಹ್. ಕನ್ನಡಿ ನೋಡಿಕೊಳ್ಳಿ!!

       ಉತ್ತರ
       • Nagshetty Shetkar
        ಜನ 18 2014

        “ನಾನ ಘೋಡ್ಸೆ ಕಡೆಯವನೆ. ಆತ ನಮ್ಮವನೇ. ನನಗೆ ಹೆಮ್ಮೆಯಿದೆ ಘೋಡ್ಸೆ ಬಗ್ಗೆ. ”

        ಮಾನ್ಯ ಮಾಡರೇಟರ್ ರಾಕೇಶ್ ಶೆಟ್ಟಿಯವರೆ, ನಿಮ್ಮ ನಲ್ಮೆಯ ನಿಲುಮೆ ತಾಣದಲ್ಲಿ ಎಂತೆಂತಹವರನ್ನು ಸಾಕಿಕೊಂಡಿದ್ದೀರಿ ಅಂತ ಪ್ರಪಂಚಕ್ಕೇ ಗೊತ್ತಾಗಿದೆ. ಘೋಡ್ಸೆ ಪಡೆಯ ವಿಸ್ತೃತ ಆವೃತ್ತಿಯೇ ನಮೋ ಸೈಬರ್ ಸೇನೆ. ನಿಲುಮೆ ಮೂಲಕ ಕನ್ನಡವನ್ನೂ ಕನ್ನಡತನವನ್ನೂ ಘೋಡ್ಸೆಗೆ ಮಾರಿಕೊಂಡಿದ್ದೀರಿ! ಛೀ!

        ಉತ್ತರ
        • Manohar
         ಜನ 18 2014

         ಸಂಬಂಧವಿಲ್ಲದ ಪರದೇಶಿ ಮಾರ್ಕ್ಸಗೆ ಮಾರಿಕೊಂಡವರ, ಆತನ ವಿಸರ್ಜನೆಗಳೆ ಇವತ್ತಿಗೂ ಶ್ರೇಷ್ಠ ಎಂದು ತಲೆ ಮೇಲೆ ಹೊತ್ತುಕೊಂಡು, ಇಲ್ಲಿ ಸವಕಲು/ತಿಪ್ಪೆ ಮೌಲ್ಯದ ಕಮೆಂಟುಗಳು ಬರೆಯುವವರಿಗೆ ಕನ್ನಡ ಮತ್ತು ಕನ್ನಡತನದ ಚಿಂತೆ!

         ಹೌದು ಸ್ವಾಮಿ. ನಾನು ಔರಂಗ್ ಜೇಬ, ಟಿಪ್ಪುವಿನ ಬಾಲವಲ್ಲ ನಿಮ್ಮ ಹಾಗೆ. ನಾನು ಘೊಡ್ಸೆ ಕಡೆಯವನೆ!. ನನಗೆ ಘೊಡ್ಸೆ ಬಗ್ಗೆ ಹೆಮ್ಮೆಯಿದೆ. ಯಾವುದೊ ಗದ್ದುಗೆಯನ್ನೇರಲು ಘೋಡ್ಸೆ ಗಾಂಧಿಜಿಯನ್ನು ಹೊಡೆಯಲಿಲ್ಲ. ನೀವು ಈ ೬೭ ವರುಷಗಳಲ್ಲಿ ಗಾಂಧಿಯನ್ನು ಎಷ್ಟು ಸಲ ಕೊಂದಿದ್ದೀರಿ ಜ್ಞಾಪಿಸಿಕೊಳ್ಳಿ. ಆಮೇಲೆ ಮಾತಾಡಿ.

         ಉತ್ತರ
         • Nagshetty Shetkar
          ಜನ 18 2014

          “ನಾನು ಘೊಡ್ಸೆ ಕಡೆಯವನೆ!. ನನಗೆ ಘೊಡ್ಸೆ ಬಗ್ಗೆ ಹೆಮ್ಮೆಯಿದೆ.”

          kolegadukara abhimaanigaloo kolegadukarashte samaajakke apaayakaarigalu.

          ಉತ್ತರ
          • Manohar
           ಜನ 18 2014

           ನಾನು ಘೋಡ್ಸೆ ಅಭಿಮಾನಿಯೆ!. ಅದಿರಲಿ ಈ ಕೊಲೆಪಾತಕ ಪಟ್ಟ ಬಡಾಯಿ ಲದ್ದಿಯನ್ನು ತಂದುಹಾಕಿದ, ಆಮೇಲೆ ಕಕ್ಕಸವೇದಿಕೆಯ ಮತ್ತೊಂದು ಲೇಖನದಲ್ಲಿ ಔರಂಗಜೇಬನ ಗುಣಗಾನ ನೋಡಿದ ಮೇಲೆ ನಿರುತ್ತರರಾದ, ಔರಂಗಜೇಬನ ಮಹಾಮಾನವತಾವಾಗಿ ಬಾಲಗಳಿಗೆ ಬಹುಶ: ಅನ್ವಯಿಸುದಿಲ್ಲವೇನೊ?!

   • Nagshetty Shetkar
    ಜನ 18 2014

    ಪರಶುರಾಮನ ಬಗ್ಗೆ ತಿಳಿದಿದೆಯೇ ಆಕಾಶ್? ಆತ ಎಷ್ಟು ಜನರ ಹತ್ಯೆ ಮಾಡಿದ ಗೊತ್ತೆ?

    ಉತ್ತರ
    • akash
     ಜನ 18 2014

     ನಿಮ್ಮ ತಾಲಿಬಾನಿಗಳ ತರಹ ಅಮಾಯಕರನ್ನು ನನ್ನ ಪರಶು ರಾಮ ಕೊಲ್ಲಲಿಲ್ಲ. ಯಾರು ಕ್ಷತ್ರಿಯರೋ ಯಾರ ಕೈಯಲ್ಲಿ ಶಸ್ತ್ರಾಸ್ತ್ರ ಇವೆಯೋ ಅವರೊಡನೆ ಬಾಹು ಬಲದಿಂದ ಯುದ್ಡ್ ಮಾಡಿದನೇ ವಿನಃ ಹೇಡಿಯಂತೆ ಮಕ್ಕಳು ಹೆಂಗಸು ಎನ್ನದೇ ಬಾಂಬಿಟ್ಟ್ತು ತಾನು ಮಾತ್ರ ಎಲ್ಲೋ ದೂರ ಕುಳಿತು ಬಚಾವ ಆಗಿಲ್ಲ. (ಹಳ್ಳಿಹಳ್ಳಿಗಳಲ್ಲಿ ದಲಿತರ ಹತ್ಯೆ ನಿತ್ಯ ನಡೆಯುತ್ತಿದೆ. ಅದರ ಪರಿವೆಯೇ ಇಲ್ಲದ ಹಾಗೆ ಅಮಾಯಕರಂತೆ ವರ್ತಿಸುತ್ತೀರಲ್ಲ ಆಕಾಶ್!) ಹಳ್ಳಿ ಹಳ್ಳಿಗಳಲ್ಲಿ ನಿನ್ನ ಬಸವ ಪಂಥೀಯರೇ ಅಧಿಕವಾಗಿದ್ದಾರೆ. ಅಧಿಕಾರ ಸೂತ್ರಗಳೆಲ್ಲ ಅವರ ಕೈಯಲ್ಲೇ ಇವೆ. ಅವರು ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಬಹುದಿತ್ತು. ಅದಕ್ಕೆ ಬ್ರಾಹ್ಮಣರು ಹೊಣೆಯೆ??

     ಉತ್ತರ
     • Nagshetty Shetkar
      ಜನ 18 2014

      1) “ನಿಮ್ಮ ತಾಲಿಬಾನಿಗಳ ತರಹ”
      2) “ನಿನ್ನ ಬಸವ ಪಂಥೀಯರೇ ”

      ಆಕಾಶ್ ಅವರ ಪ್ರಕಾರ ತಾಲಿಬಾನಿಗಳು = ಬಸವ ಪಂಥೀಯರು.

      ಉತ್ತರ
      • akash
       ಜನ 18 2014

       ನಿಮ್ಮ ಪ್ರಕಾರ ಹಿಟ್ಲರ್ = ಬ್ರಾಹ್ಮಣರು. ಅಲ್ಲವೆ ?? ಇಂಥ ಕೆಸರೆರಚಾಟ ನಿಮ್ಮಿಂದಲೇ ನಾನು ಕಲಿತಿರುವೆ. ನೀವೆ ಅಲ್ಲವೆ ಆನಂದ ಅವರಿಗೆ ಅವರ ಹುಟ್ಟಿನ ಬಗ್ಗೆ ಅಸ್ಲೀಲವಾಗಿ ಮಾತನಾಡಿದ್ದು?? ಈಗ ನಿಮಗೆ ನೋವಾಗಿದೆಯಲ್ಲಾ ಇನ್ನೋಬ್ಬರಿಗೂ ಹೀಗೆ ನೋವಾಗುತ್ತದೆ ಎಂಬ ಪ್ರಜ್ಞೆ ಮೊದಲಿರಲಿಲ್ಲ ಏಕೆ??

       ಉತ್ತರ
       • Nagshetty Shetkar
        ಜನ 18 2014

        “ಆನಂದ ಅವರಿಗೆ ಅವರ ಹುಟ್ಟಿನ ಬಗ್ಗೆ ಅಸ್ಲೀಲವಾಗಿ ಮಾತನಾಡಿದ್ದು” ಕ್ಷಮಿಸಿ, ನಿಮಗೆಲ್ಲೋ ಭ್ರಾಂತಿ! ನಾನು ಯಾರ ಹುಟ್ಟಿನ ಬಗ್ಗೆಯೂ ಅಶ್ಲೀಲವಾಗಿ ಮಾತನಾಡಿಲ್ಲ. ಆನಂದ್ ಅವರ ಹುಟ್ಟಿನ ಬಗ್ಗೆ ನನಗೆ ಆಸಕ್ತಿ ಇಲ್ಲ. ಅವರ ವಿಚಾರಶೂನ್ಯತೆ ಬಗ್ಗೆ ಮರುಕವಿದೆ.

        ಉತ್ತರ
        • akash
         ಜನ 18 2014

         http://kannada.oneindia.in/column/ravibelagere/2008/0804-bangalore-series-blasts-and-intellectuals.html ನಾಗಶೆಟ್ಟಿಯವರೆ ಈ ಲಿಂಕ್ ಗೆ ಹೋಗಿ ರವಿ ಬೆಳಗೆಯವರ ಲೇಖನ ಓದಿ ಇನ್ನು ಯಾರ ಹುಟ್ಟಿನ ಬಗ್ಗೆ ಅಸ್ಲೀಲವಾಗಿ ಮಾತನಾಡಿಲ್ಲ ಎನ್ನುವಿರಲ್ಲಾ ಹಾಗಾದರೆ ಇದು ಏನು?? ನೀವೇನು ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ? ಇದು ನಿಮ್ಮದೇ ವಾಕ್ಯವಲ್ಲವೆ?? ” ಬೇಕಿದ್ದರೆ ಮೈಸೂರು ಹುಲಿಯ ವಿರುದ್ಡ ಸೆಟೆದು ನಿಂತ ಸಹ್ಯಾದ್ರಿ ಹುಲಿ” ಲೇಖನಕ್ಕೆ ಹೋಗಿ ನಿಮ್ಮಕಮೆಂಟನ್ನು ಇನ್ನೊಮ್ಮೆ ಓದಿ ಅದಕ್ಕೆ ಆನಂದ ಅವರು ನೀಡಿದ ಪ್ರತ್ಯುತ್ತರವನ್ನೂ ಓದಿ. ನೀವೇನು ಬರೆದಿರುವಿರೆಂದು ಆಗಲಾದರೂ ನಿಮ್ಮಂಥವರಿಗೆ ಅರ್ಥವಾಗಬಹುದು.

         ಉತ್ತರ
 10. ಜನ 17 2014

  [[ರಷ್ಯಾದಲ್ಲಿ ಎಲ್ಲವೂ ಸರಿ ಇತ್ತು. ಬಂಡವಾಳಶಾಹಿ ರಾಷ್ತ್ರಗಳ ಪಿತೂರಿಯಿಂದ ರಷ್ಯಾ ಕುಸಿದು ಬಿತ್ತು]]
  ಪಾಪ! ಕಮ್ಯುನಿಸಂ ಅಷ್ಟೊಂದು ದುರ್ಬಲವೆಂದು ತಿಳಿದಿರಲಿಲ್ಲ!!
  ಉತ್ತರ ಕೊರಿಯಾ, ಪೂರ್ವ ಜರ್ಮನಿ, ಮುಂತಾದ ರಾಷ್ಟ್ರಗಳಲ್ಲೂ ಕಮ್ಯುನಿಸಂ ಇದೆ. ತಮ್ಮದೇ ಪಕ್ಕದಲ್ಲಿರುವ ರಾಷ್ಟ್ರಗಳಿಗಿಂತ ಅವುಗಳು ಹಿಂದುಳಿದಿವೆ. ಅದಕ್ಕೂ ಬಂಡವಾಳಶಾಹಿ ರಾಷ್ಟ್ರಗಳ ಪಿತೂರಿಯೇ ಕಾರಣವಿರಬೇಕಲ್ಲವೇ!?

  ಉತ್ತರ
  • Nagshetty Shetkar
   ಜನ 18 2014

   ಹೌದು. ಬಂಡವಾಳಶಾಹಿ ದೇಶಗಳು ಯೂ ಎನ್ ಮೂಲಕ ಉತ್ತರ ಕೊರಿಯಾದ ಮೇಲೆ sanctions ಹಾಕಿದೆ. ಉತ್ತರ ಕೊರಿಯಾದ ಬಡತನಕ್ಕೆ ಇದೇ ಮುಖ್ಯ ಕಾರಣ.

   ಉತ್ತರ
 11. ಜನ 17 2014

  [[ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮಾಡಿ ಅಮಾಯಕರನ್ನು ಕೊಲ್ಲುವ ಮುಸ್ಲಿಂರು ಮುಸ್ಲಿಂ ಬ್ರಾಹ್ಮಣ್ಯಕ್ಕೆ ಒಂದು ಉದಾಹರಣೆ]]
  ಅದಕ್ಕೆ ಬ್ರಾಹ್ಮಣ್ಯ ಅನ್ನುವ ಹೆಸರೇತಕ್ಕೆ? ಇದನ್ನೇ ಜೆಹಾದ್ ಎಂದು ಮುಸಲ್ಮಾನರೇ ಕರೆದುಕೊಂಡಿದ್ದಾರೆ ಮತ್ತು ಜಗತ್ತು ಭಯೋತ್ಪಾದನೆ ಎಂದು ಕರೆಯುತ್ತಿದೆ.
  ಜಾತೀಯ ಧ್ವೇಷವೇ ರಕ್ತವಾಗಿ ದೇಹದಲ್ಲೆಲ್ಲಾ ಹರಿಯುತ್ತಿರುವವರು ಮಾತ್ರ “ಬ್ರಾಹ್ಮಣ್ಯ” ಎಂಬ ಹೆಸರು ಇಂತಹದಕ್ಕೆ ಇಡಬಹುದಷ್ಟೇ!
  ಬ್ರಾಹ್ಮಣರು ನಡೆಸಿರುವ ಒಂದು ಭಯೋತ್ಪಾದನಾ ಕೃತ್ಯವನ್ನು ಉದಾಹರಿಸಿ ನೋಡೋಣ. ಇಂದಿಗೂ ದೇಶಾದ್ಯಂತ ಬಾಂಬುಗಳನ್ನು ತಯಾರಿಸುವುದು, ಅಲ್ಲಲ್ಲೇ ಬಾಂಬುಗಳನ್ನು ಸಿಡಿಸಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವುದು ಯಾರೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ನೀವು ಅದನ್ನೂ “ಬ್ರಾಹ್ಮಣ್ಯ”ದ ಕನ್ನಡಕ ಹಾಕಿ ನೋಡುತ್ತಿರುವುದು ನಿಮ್ಮ ಉದ್ದೇಶದ ಕುರಿತಾಗಿ ಸಂದೇಹ ಉಂಟು ಮಾಡುತ್ತಿದೆ!

  ಉತ್ತರ
 12. ಜನ 17 2014

  [[ನಾಥುರಾಂ ಗೋಡ್ಸೆಯನ್ನು ಇಷ್ಟು ಬೇಗ ಮರೆತುಬಿಟ್ಟರೆ ಚಡ್ಡಿಗಳು]]
  ನಾಥೂರಾಂ ಗೋಡ್ಸೆ ತನ್ನನ್ನು ಬ್ರಾಹ್ಮಣನೆಂದು ಕರೆದುಕೊಂಡು, ಅಬ್ರಾಹ್ಮಣರ ವಿರುದ್ಧ ಜೆಹಾದ್ ಸಾರಲಿಲ್ಲ.
  ಆತ ಮಹಾತ್ಮಾ ಗಾಂಧಿಯವರನ್ನು ಕೊಂದ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವುದೇ.
  ಆತನೇನೂ ಗಾಂಧೀಜಿಯವರ ಜಾತಿ ನೋಡಿ ಕೊಲೆ ಮಾಡಲಿಲ್ಲ.
  ನಾಥೂರಾಂ ಗೋಡ್ಸೆಯನ್ನೂ “ಬ್ರಾಹ್ಮಣ”ನೆಂದು ಕಾಣುವುದು, ಗಾಂಧೀಜಿಯವರನ್ನು “ಅಬ್ರಾಹ್ಮಣ”ರೆಂದು ಕಾಣುವುದು, ಗಾಂಧೀಜಿಯವರಿಗೆ ಎಸಗುತ್ತಿರುವ ಅಪಚಾರವಲ್ಲವೇ?

  ಉತ್ತರ
  • Nagshetty Shetkar
   ಜನ 18 2014

   ಗೋಡ್ಸೆ ಬ್ರಾಹ್ಮಣನೆಂಬ ಸತ್ಯವನ್ನು ಮುಚ್ಚಿಡಲು ನೀವೇಕೆ ಶತಾಯ ಗತಾಯ ಯತ್ನ ನಡೆಸುತ್ತಿದ್ದೀರಿ?? ಹಂತಕರು ಕೊಲೆಗಡುಕರು ರಕ್ತಪೀಪಾಸುಗಳು ಬ್ರಾಹ್ಮಣ ಜಾತಿಯವರಾಗಿರಕೂಡದು ಅಂತ ನಿಯಮ ಇದೆಯೆ?!!

   ಉತ್ತರ
 13. ಜನ 17 2014

  [[ರೀ ನಿಮಗೆ ಉರ್ದು ಅರ್ಥ ಆಗಲ್ಲ ಅಂತ ಕಾಣ್ತದೆ! “Hindustan Mai Zat-Pat Aur Musalman” ಎಂಬುದರ ಅನುವಾದ ” “ಮುಸಲ್ಮಾನರಲ್ಲಿ ಜಾತಿ, ಜಾತೀಯತೆ ಮತ್ತು ತಾರತಮ್ಯ” ಅಂತ ಅಲ್ಲ!]]

  ನಾನು ಉರ್ದುವಿನ ಅನುವಾದ ಬರೆಯುತ್ತಿದ್ದೇನೆ ಎಂದು ಎಲ್ಲಿ ಹೇಳಿದೆ? ಆ ಪುಸ್ತಕದ ವಿಷಯ ಏನೆಂದು ಸಂಕ್ಷಿಪ್ತವಾಗಿ ಹೇಳಿದೆ ಅಷ್ಟೇ! ಮುಸಲ್ಮಾನರಲ್ಲಿ ಜಾತಿಗಳಿವೆ ಮತ್ತು ಜಾತೀಯತೆಯಿಂದ ಉತ್ಪನ್ನವಾದ ತಾರತಮ್ಯವಿದೆ ಎನ್ನುವುದನ್ನು ಆ ಪುಸ್ತಕ ತಿಳಿಸುತ್ತದೆ. ಅದೊಂದು ಸಂಶೋಧನಾ ಗ್ರಂಥ ಮತ್ತು ಬರೆದಿರುವವರು ಮುಸಲ್ಮಾನ ವಿದ್ವಾಂಸರು. ಆಸಕ್ತಿಯಿದ್ದರೆ ಓದಿ ನೋಡಿ.

  ಉತ್ತರ
 14. ಶ್ರೀಕಾಂತ್
  ಜನ 18 2014

  ಉತ್ತರ ಕರ್ನಾಟಕದಲ್ಲಿ ಇದುವರೆಗೂ ನಡೆದಿರುವ ದಲಿತರ ಹತ್ಯೆ ಮತ್ತು ದೌರ್ಜನ್ಯಗಳಲ್ಲಿ ಬ್ರಾಹ್ಮಣರ ಕೈವಾಡ ಎಷ್ಟಿದೆ? ಮತ್ತು ಬಸವ ಅನುಯಾಯಿಗಳ ಕೈವಾಡ ಎಷ್ಟಿದೆಯೆಂದು ಒಮ್ಮೆ ಪರಾಮರ್ಷಿಸಿ ನೋಡಿ ಶೆಟ್ಕರ್ ಸಾಯೇಬ್ರೆ. ನಿಮ್ಮ ಬಸವ ಧರ್ಮದವರ ಬಂಡವಾಳ ಗೊತ್ತಾಗುತ್ತೆ. ಜಾತಿ ವಿರುದ್ದ ಹೋರಾಡಿದವರೇ ಹೇಗೆ ಅಸ್ಪೃಶ್ಯತೆಯನ್ನು ಅಪ್ಪಿಕೊಂಡಿದ್ದಾರೆಂದು ಗೊತ್ತಾಗುತ್ತೆ.

  ಉತ್ತರ
  • Nagshetty Shetkar
   ಜನ 18 2014

   ದೇಶಾದ್ಯಂತ ಹಿಂದೂಗಳು ಅಸ್ಪೃಶ್ಯತೆಯನ್ನು ಆಚರಿಸುವ ರೀತಿಯಲ್ಲಿ ಉತ್ತರ ಕರ್ನಾಟಕದಲ್ಲಿ ವೀರಶೈವರೂ ಆಚಿಸುತ್ತಿದ್ದಾರೆ. ಏಕೆ ಗೊತ್ತೆ? ವೀರಶೈವರು ನಿಮ್ಮ ಹಾಗೆ ಹಿಂದೂಗಳು, ಬಸವಾದ್ವೈತಿಗಳಲ್ಲ. ಅವರು ನಂಬಿರುವುದು ವೈದಿಕ ದೇವತೆಗಳನ್ನೇ. ಅವರ ಮನಸ್ಸನ್ನು ನಿರ್ದೇಶಿಸುತ್ತಿರುವುದು ಮನುವಾದ.

   ಲಿಂಗಾಯತರು ಬಸವಾದ್ವೈತಿಗಳು. ಅವರು ವೈದಿಕ ದೇವತೆಗಳನ್ನು ತಿರಿಸ್ಕರಿಸಿದ್ದಾರೆ. ಅವರು ಸಮಾನತೆಯ ಪರ ಇದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದಾರೆ ಬಸವಣ್ಣನವರ ಕಾಲದಿಂದಲೂ. ಮನುವಾದದ ಸೋಂಕೂ ಕೂಡ ಇಲ್ಲ.

   ಉತ್ತರ
   • akash
    ಜನ 18 2014

    [ಲಿಂಗಾಯತರು ಬಸವಾದ್ವೈತಿಗಳು. ಅವರು ವೈದಿಕ ದೇವತೆಗಳನ್ನು ತಿರಿಸ್ಕರಿಸಿದ್ದಾರೆ] ಸರಿ ಶಿವನು ಸ್ಟಾವರದಲ್ಲಿ ಪೂಜಿಸಲ್ಪಟ್ಟರೆ ಅದು ವೈದಿಕ ದೇವರಾದಂತಲ್ಲವೆ?? ಯಾಕೆಂದರೆ ಶಿವನನ್ನು ಬಸವಾದಿಗಳು ಜಂಗಮಲಿಂಗದಲ್ಲಿ ಅಂದರೆ ಇಷ್ಟಲಿಂಗದಲ್ಲಿರಿಸಿ ಪೂಜಿಸಿದರು. ದೇವಾಲಯ ಕಟ್ಟುವದನ್ನು ವಿರೋಧಿಸಿದರು. ಆದರೆ ಅವರ ಅನುಯಾಯಿಗಳು 400 ಕೋಟಿ ವೆಚ್ಚದಲ್ಲಿ ಕೂಡಲಸಂಗಮದಲ್ಲಿ ಸ್ಥಾವರಲಿಂಗಕ್ಕೆ ಗುಡಿಯನ್ನು ಕಟ್ಟಿದ್ದಾರೆ!!! ಅದೂ ಸರ್ಕಾರಿ ವೆಚ್ಚದಲ್ಲಿ. ಎಲ್ಲ ಜಾತಿ ಜನಾಂಗದವರ ತೆರಿಗೆ ಹಣದಲ್ಲಿ. ನೀವು ಹೇಳುವ ಬಸವಾದ್ವೈತಿಗಳು ಇದನ್ನೇಕೆ ವಿರೋಧಿಸಲಿಲ್ಲ.ವೈದಿಕ ದೇವತೆಯ ಗುಡಿ ಏಕೆ ನಿರ್ಮಿಸಲು ಬಿಟ್ಟರು??!! ಇವತ್ತಿಗೂ ನಮ್ಮ ಉತ್ತರ ಕರ್ನಾಟಕದಲ್ಲಿ ಶ್ರೀಶೈಲಕ್ಕೆ ಹೋಗಿ ಬಂದವರನ್ನು ಆಹೇರಿ ಮಾಡಿ (ಉಡುಗೊರೆ ಕೊಟ್ಟು) ಸತ್ಕರಿಸುತ್ತಾರೆ. ಕೇವಲ ಲಿಂಗಾಯತರಲ್ಲಿ ಮಾತ್ರ ಇಂಥ ಪದ್ಡತಿ ಇದೆ. ಯಾಕೆ ಇವರು ಆ ವೈದಿಕ ದೇವರಿಗೆ ಹೋಗಿ ಬಂದವರನ್ನು ಸನ್ಮಾನಿಸುತ್ತಾರೆ?? ಯಾರೂ ಯಾಕೆ ಇವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿಲ್ಲ.?? ಬಸವಣ್ಣನವರು ಅಂತರ್ ಜಾತಿ ವಿವಾಹ ಪ್ರೋತ್ಸಾಹಿಸಿದರು. ಇಂದು ಅವರ ಅನುಯಾಯಿ ಎಂದು ಹೇಳುವವರೆಷ್ಟು ಜನ ಬೇರೆ ಜಾತಿಯವರನ್ನು ಮದುವೆಯಾಗಿದ್ದೀರಿ.?? ಹೋಗಲಿ ಬಸವಣ್ಣನವರು ಮೂಹೂರ್ತ ನೋಡಬಾರದು ಎಲ್ಲ ದಿನಗಳು ಓಳ್ಳೆಯ ದಿನಗಳೇ ಎಂದು ಹೇಳಿದ್ದಾರೆ. ಆದರೆ ಇಂದು ಅವರ ಅನುಯಾಯಿಗಳೇ ತಮ್ಮ ಮಠದಿಂದ ಪಂಚಾಂಗಗಳನ್ನು ಪ್ರಿಂಟ್ ಮಾಡಿಸುತ್ತಾರೆ. ಇದನ್ನೂ ಯಾರೂ ವಿರೋಧಿಸುವದಿಲ್ಲ. ಏಕೆ ಬಸವ ತತ್ವ ವೇದಿಕೆ ಮೇಲೆ ಶಬ್ಬಾಸಗಿರಿ ಪಡೆಯಲು ಮಾತ್ರವೇನೆ??

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments