ವಿಷಯದ ವಿವರಗಳಿಗೆ ದಾಟಿರಿ

ಜನವರಿ 28, 2012

5

ಮಾಧ್ಯಮಗಳೇಕೆ ಹೀಗೆ ?

‍ನಿಲುಮೆ ಮೂಲಕ
-ರೂಪ ರಾವ್
ನಟನೆಗೆ ಚೌಕಟ್ಟು ಇದೆಯೇ……..?
ಇಂತಾಹದೊಂದು ಪ್ರಶ್ನೆ ಕಾಡಿದ್ದು ನೆನ್ನೆ ವಿಜಯ ಕರ್ನಾಟಕದಲ್ಲಿ ಶರಣು ಹುಲ್ಲೂರುರವರ ಸುಮ್ನೇನಾ ಸುಮನ್ ಅನ್ನುವ ಲೇಖನ ಓದಿ.
ಸುಮನ್ ಹಾಗಿದ್ದರು, ಹೀಗಾದರು, ವಿವಾಹ ವಿಚ್ಗೇದನಕ್ಕೆ ಒಳಗಾದರು. “ಇಂತಹ” ಪಾತ್ರಕ್ಕೆ ಬ್ರಾಂಡ್ ಆದರು. ಬರೀ ಇಂತಹದೇ ಪದಗಳು.
ಸುಮನ್ ಅನ್ನು ಒಬ್ಬ ನಟಿಯಾಗಿ ನೋಡದೇ ಒಬ್ಬ  ಹೆಣ್ಣಾಗಿ  ನೋಡಿದಾಗ ಈ ರೀತಿಯ ಯೋಚನೆಗಳು ಬರುತ್ತವೆ.
ಅಷ್ಟಕ್ಕೂ ಪಾತ್ರ ಯಾವುದಾದರೇನು ಅದಕ್ಕೆ ನ್ಯಾಯ ಒದಗಿಸಬೇಕಾದ್ದು ನಟಿಯ ಧರ್ಮ, ಅವರು ಇಂತಹದ್ದೇ ಪಾತ್ರ ಮಾಡಬೇಕೆಂದು ನಿರ್ಧೇಶಿಸುವುದು ನಟಿಯ ಸ್ವಾತಂತ್ರಹರಣ ಎನ್ನುವುದು ನನ್ನ ಅಭಿಪ್ರಾಯ.
ಇಂತಹದೇ ಎನ್ನಲು ಅವರು ಮಾಡಿರುವ ಪಾತ್ರವಾದರೂ ಎಂತಹದ್ದು……
ಅವರ ಲುಕ್, ಅವರ ಗ್ಲಾಮರ್ ಅವರನ್ನು ಇಂತಹ ಪಾತ್ರಕ್ಕೆ ಒಗ್ಗಿಸಿದಲ್ಲಿ ಅದು ಅವರ ಹೆಚ್ಚುಗಾರಿಕೆ, ಅದರಿಂದ ನೋಡುಗರಿಗೆ  ತೊಂದರೆ ಏನು?
ಚಮೇಲಿಯಲ್ಲಿ ಕರೀನಾ , ಡರ್ಟಿ ಪಿಕ್ಚರ‍್ನಲ್ಲಿ  ವಿದ್ಯಾ ಬಾಲನ್,  ಅಷ್ಟೇ ಏಕೆ? ನಮ್ಮ ಚತುರ್ಭಾಷಾ ನಟಿ ಚತುರೆ ಲಕ್ಷ್ಮಿ ಮೇಡಮ್ ಹೂವು ಹಣ್ಮಿನಲ್ಲಿ ನಟಿಸಿದ ಪಾತ್ರಗಳಿಂದ ಅವರ ಅಭಿನಯಕ್ಕಾಗಿ ಹೊಗಳಿಸಿಕೊಂಡಿದ್ದಾರೆಯೇ ಹೊರತು ಇಂತಹ ಪಾತ್ರ ಬೇಕಿತ್ತೇ ಎಂದನಿಸಿಕೊಂಡಿಲ್ಲ. ಪತ್ರಿಕಾ ಮಾಧ್ಯಮದಲ್ಲಿ ತಮಗೆ ಸರಿ ಎನಿಸದ ನಟಿಯರ ಬಗ್ಗೆ ಈ ರೀತಿಯ ಕಾಮೆಂಟ್ಸ್ ಸಹಜವಾಗಿದೆ. ಒಮ್ಮೆಪ್ರಿಯಾ ಮಣಿಯ ಬಗ್ಗೆ ಬರೆಯುತ್ತಾ ರಾವಣ್ ಚಿತ್ರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಂತಹ ಪಾತ್ರಗಳನ್ನು ಮಾಡಿ ಎಂಬ ತೆಗಳಿಗೆ ಮಾಡಿದ್ದರು. ಹಾಗೆ ಸೌಂದರ್ಯರವರು  ಯಾವುದೋ ವೇಳೆಯಲ್ಲಿ ಮಾಧ್ಯಮದವರ ಕೈಗೆ ಸಿಗಲಿಲ್ಲ  ಎಂಬ  ಕಾರಣಕ್ಕೆ ಅವರನ್ನು ಅತೀ ಪುರಾತನ ನಟಿ ಎಂಬ “ನಾಮಕರಣ” ಮಾಡಿದ್ದರು.
ಮತ್ತೊಮ್ಮೆ ಪವಿತ್ರ ಲೋಕೇಶ್‌ರವರು ಯಾವುದೋ ಚಿತ್ರದ ಪಾತ್ರವೊಂದಕ್ಕೆ ಒಪ್ಪಲಿಲ್ಲ ಎಂದು ಅವರು ಇಂತಹ ಚಿತ್ರದಲ್ಲಿ “ಅಂತಹ” ಪಾತ್ರ ಮಾಡಿದ್ದರು . ಇಲ್ಲಿ ಏಕೆ ಮಡಿವಂತಿಕೆ ಎಂಬ ಕಾಮೆಂಟ್. ಇಂತಹದೇ ಕಾಮೆಂಟ್ಸ್ ಗಳು ಅತಿಯಾಗಿ ನಟಿಯರ ಮೇಲೆ ಪತ್ರಿಕೆಗಳಲ್ಲಿ ಹಾಕಲ್ಪಟ್ಟಿವೆ, ಹಾಕಲಾಗುತ್ತಿವೆ.
ಸಾಮೂಹಿಕ ಮಾಧ್ಯಮ ಒಂದು ಪ್ರಬಲ ಮಾಧ್ಯಮ. ಅಲ್ಲಿ ಬರುವ ಅಭಿಪ್ರಾಯಗಳು ಜವಾಬ್ದಾರಿಯಿಂದ ಕೂಡಿರಬೇಕೆನ್ನುವುದು ನನ್ನ ಅಭಿಪ್ರಾಯ. ನೀವೇನಂತೀರಿ ?
* * * * * * *
ಚಿತ್ರಕೃಪೆ : http://a8.sphotos.ak.fbcdn.net
5 ಟಿಪ್ಪಣಿಗಳು Post a comment
  1. rakesh's avatar
    rakesh
    ಜನ 28 2012

    sister,The times of india group has bought 100% stake in Vijayanand Printers Ltd (VPL), which publishes two Kannada newspapers Vijay Karnataka and Usha Kiran, and the English daily Vijay Times.What kind of articles can we expect from the times group,which focuses only on page 3 news, to woo its readers.if M.katju and his PCI has their way we can see an end to such news in the print meadia and electronic media as well.

    ಉತ್ತರ
  2. Arun's avatar
    Arun
    ಜನ 30 2012

    ತುಂಬಾ ಒಳ್ಳೆಯ ಲೇಖನ ಬರೆದಿದ್ದೀರೀ….
    ಹೌದು…. ಮಾಧ್ಯಮಗಳು ಅವರ TRP ಅಥವಾ Readership ಹೆಚ್ಚಿಸಿಕೊಳ್ಳಲು ಏನ್ ಬೇಕಾದ್ರೂ ಮಾಡ್ತಾರೇ…. ವೇಶ್ಯೆ ಅಂತ ಇಡೀ ರಾತ್ರಿಯೆಲ್ಲಾ ತೋರಿಸಿ ಎರಡು ದಿನಾ ಬಿಟ್ಟು ಅವರನ್ನೇ ಸಮಾಜ ಸೇವಕರು ಅಂತ ಕರೆದು ಸಂದರ್ಶನ ಮಾಡ್ತಾರೇ… ಒಂದು ಧರ್ಮವನ್ನ ಹೀಯಾಳಿಸಿ ಇನ್ನೊಬ್ಬರಿಗೆ ಮಜಾ ಕೊಡೊ ಕೆಲಸ ಮಾಡ್ತಾರೇ…. ನಮ್ಮ ಸಂಸ್ಕೃತಿಯ ಅತ್ಯಾಚಾರಿಗಳು ಈ ಮಾಧ್ಯಮದವರು…. ಎಲ್ಲೊ ಚೂರು ಪಾರು ಒಳ್ಳೆ ಕೆಲಸಾ ಮಾಡ್ತಾರೆ ಅಷ್ಟೆ…

    ಉತ್ತರ
  3. Ajay's avatar
    Ajay
    ಜನ 31 2012

    @Writer,

    The least you/we can do is, stop buying such newspapers which comesup with such cheap stories and reports.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments